Author: admin

ಹೆಮ್ಮೆಯ ಭಾರತೀಯ ಮತದಾರರು ವಿಶ್ವ ದಾಖಲೆಯನ್ನು ರಚಿಸಿದ್ದಾರೆ. 642 ಮಿಲಿಯನ್ ಹೆಮ್ಮೆಯ ಭಾರತೀಯ ಮತದಾರರು ವಿಶ್ವ ದಾಖಲೆಯನ್ನು ರಚಿಸಿದ್ದಾರೆ.ಇದರಲ್ಲಿ 312 ಮಿಲಿಯನ್ ಹೆಮ್ಮೆಯ ಮಹಿಳಾ ಮತದಾರರಿದ್ದಾರೆ. ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ.ಇದು ಎಲ್ಲರಿಗೂ ಐತಿಹಾಸಿಕ ಕ್ಷಣ. ಈ ಬಾರಿ ಲೋಕಸಭೆಗೆ 64.2 ಕೋಟಿ ಮತದಾರರಿಂದ ವಿಶ್ವದಾಖಲೆಯ ಹಕ್ಕು ಚಲಾವಣೆಯಾಗಿದೆ ಅಂತ ಸಿಇಸಿ ರಾಜೀವ್ ಕುಮಾರ್ ಹೇಳಿದ್ದಾರೆ.  ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ. ಇದು 2019ರ ಚುನಾವಣೆಗಿಂತ ದೊಡ್ಡ ಮತದಾನ ನಡೆದಿದೆ. ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಲೋಕಸಭೆ ಚುನಾವಣೆಗೆ ಏಳು ಹಂತದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 64.2 ಕೋಟಿ ಜನರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಹೊಸ ವಿಶ್ವದಾಖಲೆ ಸೃಷ್ಟಿಯಾಗಿದೆ ಎಂದು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಪಿಯುಸಿ (PUC) ನಂತರದಲ್ಲಿ ಯಾವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಒಂದು ದೊಡ್ಡ ತಲೆ ನೋವಾಗಿರುತ್ತದೆ. ಪಿಯುಸಿ ಮುಗಿಸಿದ ನಂತರ ಅವರಲ್ಲಿರುವ ಆಸಕ್ತಿಗನುಗುಣವಾಗಿ ಅವರು ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳನ್ನು ನೋಡಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಪಿಯುಸಿ ನಂತರ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ಯಾವ ಕೋರ್ಸ್ ಆಯ್ಕೆ ಮಾಡಿಕೊಂಡರೆ ಉದ್ಯೋಗ ಬೇಗನೆ ಸಿಗುತ್ತದೆ ಎಂದು ಯೋಚಿಸುತ್ತಿರುವ ವಿದ್ಯಾರ್ಥಿಗಳಿಗೆ, ಕೆಲವು ಕೋರ್ಸ್ಗಳ ವಿವರವನ್ನು ನೀಡಲಾಗಿದೆ. ಈಗಂತೂ ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ, ಅದರಲ್ಲಿ ತಂತ್ರಜ್ಞಾನದ ಬಗ್ಗೆ ಅರಿವಿರುವುದು ತುಂಬಾನೇ ಮುಖ್ಯವಾಗಿರುತ್ತದೆ. ನೀವು ಸಹ ಅಂತಹ ವೃತ್ತಿಜೀವನವನ್ನು ಹುಡುಕುತ್ತಿದ್ದರೆ, ಇಲ್ಲಿವೆ ನೋಡಿ ಕೆಲವು ವೃತ್ತಿ ಆಯ್ಕೆಗಳು. ಚಾರ್ಟೆಡ್ ಅಕೌಂಟೆನ್ಸಿ (CA): ಪಿಯುಸಿಯಲ್ಲಿ ಕಾಮರ್ಸ್ ತೆಗೆದುಕೊಂಡ ವಿದ್ಯಾರ್ಥಿಗಳು ಚಾರ್ಟೆಡ್ ಅಕೌಂಟೆಂಟ್ ಆಗುವತ್ತ ಗಮನಹರಿಸಬಹುದು . ಈ ಹುದ್ದೆಯಲ್ಲಿ ಹೆಚ್ಚಿನ ಸಂಬಳ ಪಡೆಯುವ ಅವಕಾಶವಿರುತ್ತದೆ. ಆದರೆ ಪರಿಶ್ರಮ ಕೂಡ ಇದಕ್ಕೆ ಅಗತ್ಯವಿದೆ. ಈ ಕೋರ್ಸ್ ಮಾಡಲು ಮೂರು ಹಂತದ ಕಠಿಣ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಬ್ಯಾಚುಲರ್ ಆಫ್…

Read More

ಕೆಲವರು ಬ್ಯಾಂಕ್ ಗಳನ್ನು ಹೆಚ್ಚು ನಂಬದೇ ತಮ್ಮ ಹಣವನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ. ಅನೇಕ ಜನ ನಗದು ರೂಪದಲ್ಲೇ ಇಂದಿಗೂ ಹಣ ಉಳಿತಾಯ ಮಾಡುತ್ತಾರೆ. ಗೃಹಿಣಿಯರು ತಮ್ಮ ಉಳಿತಾಯವನ್ನು ಬ್ಯಾಂಕಿನ ಬದಲು ಮನೆಯಲ್ಲಿ ಇಡಲು ಬಯಸುತ್ತಾರೆ. ಹಣವನ್ನು ಮನೆಯಲ್ಲಿ ಇಡಲು ಯಾವುದೇ ಮಿತಿ ಇದೆಯೇ? ಮಿತಿ ಮೀರಿ ನಗದು ಇಟ್ಟುಕೊಂಡಿದ್ದಕ್ಕೆ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸುತ್ತದೆಯೇ ? ಆದಾಯ ತೆರಿಗೆ (ಆದಾಯ ತೆರಿಗೆ ದಾಳಿ) ನಿಯಮಗಳ ಪ್ರಕಾರ ನಿಮ್ಮ ಮನೆಯಲ್ಲಿ ನೀವು ಎಷ್ಟೇ ಹಣವನ್ನು ಇರಿಸಬಹುದು. ಆದಾಗ್ಯೂ, ಒಬ್ಬ ವ್ಯಕ್ತಿಯು ಆದಾಯ ತೆರಿಗೆ ಇಲಾಖೆಯ ಪರಿಶೀಲನೆಗೆ ಒಳಪಟ್ಟರೆ ಆ ಹಣದ ಮೂಲ ಯಾವುದು (ಮನೆಯಲ್ಲಿನ ಆದಾಯದ ಮೂಲ) ಎಂಬುದನ್ನು ಅವರು ಹೇಳಬೇಕಾಗುತ್ತದೆ. ಪರಿಶೀಲನೆಯಲ್ಲಿರುವ ವ್ಯಕ್ತಿಯು ಆ ಹಣದ ಕಾನೂನುಬದ್ಧ ಮೂಲವನ್ನು ಹೊಂದಿದ್ದರೆ, ಅದರ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ಎಲ್ಲವೂ ಸರಿಯಾಗಿದ್ದರೆ ಭಯಪಡುವ ಅಗತ್ಯವಿಲ್ಲ. ಆದಾಯ ತೆರಿಗೆ ಇಲಾಖೆ ದಾಳಿ ಪ್ರಕ್ರಿಯೆ ವೇಳೆ ನಿಮ್ಮ ಮನೆ ಮೇಲೆ ದಾಳಿ ನಡೆಸಿದ್ದು ದೊಡ್ಡ ಮೊತ್ತದ ನಗದು…

Read More

ಆನ್ಲೈನ್ ಪೇಮೆಂಟ್ (Online Payment) ವಿಧಾನವಂತೂ ಬಂದ ನಂತರ ಕ್ಯೂಆರ್ ಕೋಡ್ (QR Code) ಬಗ್ಗೆ ಹೇಳೋ ಹಾಗೆನೇ ಇಲ್ಲ. ಎಲ್ಲಿ ನೋಡಿದ್ರೂ ಕ್ಯೂಆರ್ ಕೋಡ್ ಗಳೇ ಕಾಣಸಿಗುತ್ತದೆ. ಆದರೆ ಹೆಚ್ಚಿನವರಿಗೆ ಕ್ಯೂಆರ್ ಕೋಡ್ ಅಂದ್ರೆ ಏನು? ಅನ್ನೋದು ಗೊತ್ತಿರುವುದಿಲ್ಲ. ಕ್ಯೂಆರ್ ಕೋಡ್ (QR Code) ಅಂದ್ರೆ ಕ್ವಿಕ್ ರೆಸ್ಪಾನ್ಸ್ ಕೋಡ್ ಎಂದರ್ಥ. ಇನ್ನು ಈ ಟೆಕ್ನಾಲಜಿಯನ್ನು ಡೆನ್ಸೋ ವೇವ್ ಎಂಬ ಜಪಾನಿ ಕಂಪೆನಿಯೊಂದು ಮೊದಲ ಬಾರಿಗೆ ಪರಿಚಯಿಸಿದೆ. ಮೊದಲ ಬಾರಿಗೆ ಈ ಟೆಕ್ನಾಲಜಿಯನ್ನು ಆಟೋಮೋಟಿವ್ ಕೈಗಾರಿಕೆಯ ಉದ್ದೇಶದಿಂದ ಆವಿಷ್ಕಾರ ಮಾಡಲಾಯಿತು. ಆದರೆ ನಂತರದ ದಿನಗಳಲ್ಲಿ ವಿಶ್ವದಾದ್ಯಂತ ಜನಪ್ರಿಯತೆಯನ್ನು ಪಡೆಯಿತು. ಮೊದಲು ವಾಹನಗಳ ತಯಾರಿಕೆಯ ಟ್ರ್ಯಾಕಿಂಗ್ ಉದ್ದೇಶವಾಗಿ ಅತಿವೇಗವಾಗಿ ಭಾಗಗಳ ಸ್ಕ್ಯಾನಿಂಗ್ ಆಗಲು ಅನುವುಮಾಡಲು ಇದನ್ನು ತಯಾರಿಸಲಾಗಿತ್ತು. ಆದರೆ, ಸ್ಮಾರ್ಟ್‌ಫೋನ್ಗಳ ಬಳಕೆ ಹೆಚ್ಚಾದಂತೆ ಈಗ ಕ್ಯೂಆರ್ ಕೋಡ್ ಗಳು ಸಹ ವ್ಯಾಪಕವಾಗಿ ಬೆಳವಣಿಗೆಯಾಗಿದೆ. ಇದಲ್ಲದೆ ಆನ್ಲೈನ್ ಪೇಮೆಂಟ್ ನಲ್ಲಿ ಈ ಟೆಕ್ನಾಲಜಿ ವಿಶ್ವದ ಮೂಲೆ ಮೂಲೆಯಲ್ಲಿ ತಲುಪಿದೆ. ಈ ಕ್ಯೂಆರ್ ಕೋಡ್…

Read More

ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ಕರ್ನಾಟಕ ಅಭ್ಯರ್ಥಿಗಳು ಪಟ್ಟಿ ಕೆಳಗಿನಂತಿವೆ: ಚಾಮರಾಜನಗರ (ಕಾಂಗ್ರೆಸ್) – ಸುನಿಲ್ ಬೋಸ್ ಹಾಸನ (ಕಾಂಗ್ರೆಸ್) – ಶ್ರೇಯಸ್ ಪಟೇಲ್ ಬಳ್ಳಾರಿ (ಕಾಂಗ್ರೆಸ್) – ಇ.ತುಕಾರಾಂ ಮಂಡ್ಯ (ಜೆಡಿಎಸ್) – ಎಚ್.ಡಿ. ಕುಮಾರಸ್ವಾಮಿ ಚಿಕ್ಕಬಳ್ಳಾಪುರ (ಬಿಜೆಪಿ) – ಡಾ.ಕೆ. ಸುಧಾಕರ್ ಬೆಳಗಾವಿ (ಬಿಜೆಪಿ) – ಜಗದೀಶ್ ಶೆಟ್ಟರ್ ಉತ್ತರ ಕನ್ನಡ (ಬಿಜೆಪಿ) – ವಿಶ್ವೇಶ್ವರ ಹೆಗಡೆ ಕಾಗೇರಿ ಚಿತ್ರದುರ್ಗ (ಬಿಜೆಪಿ) – ಗೋವಿಂದ ಕಾರಜೋಳ ತುಮಕೂರು (ಬಿಜೆಪಿ) – ವಿ.ಸೋಮಣ್ಣ ಕೋಲಾರ (ಜೆಡಿಎಸ್) – ಮಲ್ಲೇಶ್ ಬಾಬು ಬೆಂಗಳೂರು ಗ್ರಾ. (ಬಿಜೆಪಿ) – ಡಾ.ಸಿ.ಎನ್.ಮಂಜುನಾಥ್ ಹಾವೇರಿ (ಬಿಜೆಪಿ) – ಬಸವರಾಜ್ ಬೊಮ್ಮಾಯಿ ಬೀದರ್ (ಕಾಂಗ್ರೆಸ್) – ಸಾಗರ್ ಖಂಡ್ರೆ ಬೆಂಗಳೂರು ದಕ್ಷಿಣ (ಬಿಜೆಪಿ) – ತೇಜಸ್ವಿ ಸೂರ್ಯ ಚಿಕ್ಕೋಡಿ (ಕಾಂಗ್ರೆಸ್) – ಪ್ರಿಯಾಂಕಾ ಜಾರಕಿಹೊಳೆ ಮೈಸೂರು-ಕೊಡಗು (ಬಿಜೆಪಿ) – ಯದುವೀರ್ ಒಡೆಯರ್ ಉಡುಪಿ -ಚಿಕ್ಕಮಗಳೂರು (ಬಿಜೆಪಿ) – ಕೋಟಾ ಶ್ರೀನಿವಾಸಪೂಜಾರಿ ಬೆಂಗಳೂರು ಕೇಂದ್ರ (ಬಿಜೆಪಿ) – ಮೋಹನ್ ಬಾಗಲಕೋಟೆ…

Read More

ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಗೆಲುವಿನ ಹಿನ್ನೆಲೆಯಲ್ಲಿ ಕೊರಟಗೆರೆ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆಯಿತು. ಬಿಜೆಪಿ ಮುಖಂಡ ಬಿ.ಹೆಚ್. ಅನಿಲ್ ಕುಮಾರ್ ಹಾಗೂ ಜೆಡಿಎಸ್ ಮುಖಂಡ ನರಸಿಂಹರಾಜು ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು. ಕೊರಟಗೆರೆ ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಪಾಂಚಜನ್ಯ ಕಛೇರಿಯವರೆಗೂ ಮುಖ್ಯ ರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸುವ ಮೂಲಕ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ನಂತರ ಪಾಂಚಜನ್ಯ ಕಛೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಬಿಜೆಪಿ ಮುಖಂಡ ಅನಿಲ್ ಕುಮಾರ್ ಹಾಗೂ ಜೆಡಿಎಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನರಸಿಂಹರಾಜು, “ಈ ಬಾರಿ ನಾವು ಕೊರಟಗೆರೆ ಕ್ಷೇತ್ರದಿಂದ ಸುಮಾರು 25 ಸಾವಿರ ಅಂತರ ನೀಡಿದ್ದೇವೆ. ಇದೇ ರೀತಿ ನಾವು ಮುಂದಿನ ದಿನಗಳಲ್ಲಿ ಕೆಲಸ ಮಾಡಿದರೆ ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಧೂಳಿಪಟ ಮಾಡುತ್ತೇವೆ. ಆದ್ದರಿಂದ ಇದೇ ರೀತಿ, ಎರಡೂ ಪಕ್ಷಗಳು ಪವಿತ್ರ ಮೈತ್ರಿ ಮಾಡಿಕೊಳ್ಳುವ ಮೂಲಕ ಸ್ಥಳೀಯ ಚುನಾವಣೆ ಯಲ್ಲಿ ಜಯಭೇರಿ ಬಾರಿಸುತ್ತೇವೆ. ಜಿಲ್ಲೆಯಲ್ಲಿ…

Read More

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದ ಬಳಿ ದುಷ್ಕರ್ಮಿಗಳಿಂದ ವಾಮಾಚಾರ ನಡೆದಿದೆ. ಮರದ ಪೊದೆಯಲ್ಲಿ ಎರಡು ಮೊಟ್ಟೆಗಳನ್ನು ಇಟ್ಟು ವಾಮಾಚಾರ ಮಾಡಿದ್ದಾರೆ ಎನ್ನಲಾಗಿದೆ. ಚುನಾವಣೆಯ ಫಲಿತಾಂಶದಲ್ಲಿ ಗೆಲವು ಸಾಧಿಸಲು ಯಾರಾದರೂ ಹೀಗೆ ಮಾಡಿದ್ದರಾ ಎಂಬ ಅನುಮಾನ ಮೂಡಿದೆ. ಮೊಟ್ಟೆಯನ್ನು ತಂದಿಟ್ಟವರು ಯಾರು? ನಿಜಕ್ಕೂ ಅಲ್ಲಿ ವಾಮಾಚಾರ ನಡೆದಿದ್ಯಾ ಅಥವಾ ಮರದಡಿ ಕುಳಿತಾಗ ಮರೆತು ಬಿಟ್ಟು ಹೋಗಿದ್ದರಾ ಎಂಬುದು ತಿಳಿದು ಬಂದಿಲ್ಲ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರಲ್ಹಾದ್ ಜೋಶಿ ಗೆಲುವು ಸಾಧಿಸಿದ್ದಾರೆ. ಐದನೆಯ ಬಾರಿಯೂ ಮತದಾರರು ಪ್ರಲ್ಹಾದ್ ಜೋಶಿ ಅವರನ್ನು ಗೆಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ 6,82,400 ಮತ ಗಳಿಸಿದರೆ, ಕಾಂಗ್ರೆಸ್‌ ಅಭ್ಯರ್ಥಿ ವಿನೋದ್ ಅಸೂಟಿ 5,87,397 ಮತ ಪಡೆದು, 95,003 ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ನವದೆಹಲಿ: ದೇಶದಲ್ಲಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಆಭರಣ ಪ್ರಿಯರಿಗೆ ಬಿಗ್‌ ಶಾಕ್‌ ಎದುರಾಗಿದೆ. ಇಂದಿನ ವಹಿವಾಟು ಆರಂಭದಲ್ಲೇ ಚಿನ್ನದ ಬೆಲೆಯಲ್ಲಿ 500 ರೂಪಾಯಿ ಏರಿಕೆಯಾಗಿದ್ದು, 10 ಗ್ರಾಂಗೆ 72,200 ರೂ.ಗೆ ತಲುಪಿತ್ತು. ಬೆಳ್ಳಿ ಬೆಲೆ 100 ರೂ.ಹೆಚ್ಚಳವಾಗಿದೆ. ಈ ಮೂಲಕ ಕೆಜಿಗೆ 92,000 ರೂ. ತಲುಪಿದೆ. ಎಂಸಿಎಕ್ಸ್‌ ನಲ್ಲಿ ಚಿನ್ನ 10 ಗ್ರಾಂಗೆ 549 ರೂ.ಗಳಷ್ಟು ಏರಿಕೆಯಾಗಿ 72,279 ರೂ.ಗಳಿಗೆ ತಲುಪಿತು. ಬೆಳ್ಳಿ 121 ರೂ. ಏರಿಕೆಯಾಗಿದ್ದು, ಪ್ರತಿ ಕೆಜಿಗೆ 92,154 ರೂ. ಆಗಿತ್ತು. ಸದ್ಯ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 72,550 ರೂ.ಗೆ ತಲುಪಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 66,240 ರೂ.ಗೆ ಆಗಿದೆ. ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 72,100 ರೂ. ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 66090 ರೂ. ಗೆ ತಲುಪಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…

Read More

ತಿರುವನಂತಪುರಂ: ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದಂತೆ ಕೇರಳದಲ್ಲಿ ಕಮಲ ಅರಳುವ ಸೂಚನೆಗಳು ಬಂದಿವೆ. ತ್ರಿಶ್ಶೂರ್ ಮತ್ತು ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಸಿನಿಮಾ ನಟರೂ ಆಗಿರುವ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ, ತ್ರಿಶ್ಶೂರಿನಲ್ಲಿ ಪ್ರಚಾರ ನಡೆಸುವಾಗ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ, ಈ ತ್ರಿಶ್ಶೂರ್ ಞಾನ್ ಇಂಙ್ ಎಡುಕ್ಕುವಾ, ಈ ತ್ರಿಶ್ಶೂರ್ ಎನಿಕ್ ತರಣಂ (ನಾನು ಈ ತ್ರಿಶ್ಶೂರ್ ನ್ನು ತೆಗೆದುಕೊಳ್ಳುತ್ತೇನೆ, ನೀವು ನನಗೆ ಈ ತ್ರಿಶ್ಶೂರ್ ಕೊಡಬೇಕು) ಎಂದು ಸಿನಿಮಾ ಸ್ಟೈಲ್ ನಲ್ಲಿ ಈ ಡೈಲಾಗ್ ಹೇಳಿದ್ದರು. ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಸುರೇಶ್ ಗೋಪಿ 69183 ಮತಗಳ ಮುನ್ನಡೆ ಸಾಧಿಸಿದ್ದಾರೆ. ತ್ರಿಶ್ಶೂರ್ ಗೆ ಕೇಂದ್ರ ಸಚಿವ ಸ್ಥಾನ, ಮೋದಿ ಗ್ಯಾರಂಟಿ ಎಂಬ ಘೋಷಣೆಯೊಂದಿಗೆ 65 ವರ್ಷದ ನಟ ತ್ರಿಶೂರ್ನಲ್ಲಿ ಮತಯಾಚನೆ ಮಾಡಿದ್ದರು. 2016 ರ ಅಕ್ಟೋಬರ್ ನಲ್ಲಿ ಸುರೇಶ್ ಗೋಪಿ ಬಿಜೆಪಿ ಸೇರಿದ್ದರು. ಅಂದಿನಿಂದ ಗೋಪಿ ಕೇರಳದ ಬಿಜೆಪಿಯ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದರು. ನಮ್ಮತುಮಕೂರಿನ…

Read More

ವಿಧಾನಸಭೆ ಬಳಿಕ, ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಟಿಕೆಟ್ ವಂಚಿತರಾಗಿ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಕಾರಣಕ್ಕೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಿಜೆಪಿ ಹಿರಿಯ ನಾಯಕರ ರಘುಪತಿ ಭಟ್ ಪರವಾಗಿ ಮೈಸೂರು- ಕೊಡುಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಬ್ಯಾಟ್ ಬೀಸಿದ್ದಾರೆ. ಹಿಜಾಬ್ ವಿಚಾರವಾಗಿ ಉಂಟಾಗಿದ್ದ ವಿವಾದವನ್ನು ಪ್ರಸ್ತಾಪಿಸಿದ್ದ ಉಡುಪಿಯ ವಿದ್ಯಾರ್ಥಿನಿ ಅಲಿಯಾ ಅಸ್ಸಾದಿ, ಉಚ್ಚಾಟನೆಗೊಂಡಿರುವ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಟೀಕಿಸಿರುವ ಸಂಗತಿ, ಹಿಂದುತ್ವವಾದಿಗಳಿಗೆ ಬಂದಿರುವ ದುರದೃಷ್ಟಕರ ಪರಿಸ್ಥಿತಿ ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ಮೂಲ ಕಾರ್ಯಸೂಚಿಯಾದ ಹಿಂದುತ್ವದ ಪರ ಹೋರಾಡಿದವರ ಪರವಾಗಿ ಪಕ್ಷ ನಿಲ್ಲುವುದಿಲ್ಲ ಎಂಬ ಕಾರ್ಯಕರ್ತರ ಆರೋಪಗಳನ್ನು ಪ್ರತಾಪ್ ಸಿಂಹ ಒತ್ತಿ ಹೇಳಿದ್ದಾರೆ ಎನ್ನಲಾಗಿದೆ. ಅದೇ ವೇಳೆ ರಘುಪತಿ ಭಟ್ ಗೆ ಎಂಎಲ್‌ಎ ಹಾಗೂ ಎಂಎಲ್‌ ಸಿ ಟಿಕೆಟ್ ಕೂಡ ಸಿಗದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. “ಉಡುಪಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಮವಸ್ತ್ರ ಸಂಹಿತೆಯನ್ನು ಮುರಿದು ಬುರ್ಖಾ ಧರಿಸಿ ಕ್ಲಾಸಿಗೆ ಬಂದ ಜಿಹಾದಿ ಮನಸ್ಥಿತಿಯ…

Read More