‘ಜೈ ಶ್ರೀರಾಮ್’ ಎಂಬುದಾಗಿ ರೀಲ್ಸ್ ಮಾಡಿ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದ ಯುವಕ-ಯುವತಿಗೆ ಜೀವ ಬೆದರಿಕೆಯೊಡ್ಡಿದ್ದ ಆರೋಪದಡಿ ನಯಾಜ್ ನನ್ನು (22) ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಕೋಣನಕುಂಟೆ ಬಳಿಯ ಹರಿನಗರ ನಿವಾಸಿ ನಯಾಜ್, ಆಟೊ ಚಾಲಕ. ಯುವಕ-ಯುವತಿಗೆ ಬೆದರಿಕೆಯೊಡ್ಡಿ ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದ. ವೀಡಿಯೊ ಆಧರಿಸಿ ಪ್ರಕರಣ ದಾಖಲಿಸಿಕೊಂಡು, ನಯಾಜ್ ನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.


