ಪೇಜಾವರ ಮಠದ ಭಕ್ತ, ಮುಂಬೈ ಉದ್ಯಮಿ ನಾಗೇಂದ್ರ ಆಚಾರ್ಯ-ಅರುಣಾ ಆಚಾರ್ಯ ದಂಪತಿ ಅಯೋಧ್ಯೆ ರಾಮನಿಗೆ ವಿಶಿಷ್ಟ ದೀಪಸೇವೆ ಸಲ್ಲಿಸಿದ್ದಾರೆ ಎಂದು ವರದಿ ತಿಳಿಸಿದೆ.
ಬೆಳ್ಳಿಯ ಎರಡು ಬೃಹತ್ ಕಾಲುದೀಪಗಳನ್ನು ಅಯೋಧ್ಯೆಗೆ ಅರ್ಪಿಸಿದ್ದು, ಪೇಜಾವರ ಮಠದ ಶಿಷ್ಯರಾಗಿರುವ ದಂಪತಿ ರಾಮಸೇವೆ ಮಾಡುವ ಸಂಕಲ್ಪ ಮಾಡಿದ್ದು, ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳ ಮೂಲಕ ಆ ದೀಪಗಳನ್ನು ಅರ್ಪಿಸಿದ್ದಾರೆ ಎನ್ನಲಾಗಿದೆ.
ಎರಡು ದೀಪಗಳು ತಲಾ ಮೂರೂವರೆ ಅಡಿ ಎತ್ತರವಿದ್ದು, ತಲಾ 13.5 ಕೆ.ಜಿ. ತೂಕವಿವೆ. ಹೀಗೆ ಕೊಡಲ್ಪಟ್ಟ ಹೊಸ ದೀಪಗಳನ್ನು ರಾಮಮಂದಿರದ ಗರ್ಭಗುಡಿಯ ಮುಂಭಾಗದಲ್ಲಿ ಪೇಜಾವರ ಸ್ವಾಮೀಜಿ ಬೆಳಗಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


