ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿ: ದಸರಾ ಹಬ್ಬದ ಪ್ರಯುಕ್ತ ಇಂದು ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಆಯುಧ ಪೂಜಾ ಸಮಾರಂಭ .
ಭಾನುವಾರ, ಸೋಮವಾರ ಹಾಗೂ ಮಂಗಳವಾರ ರಜಾ ದಿನ ಇರುವುದರಿಂದ ಇಂದೇ ಪೂಜೆ ಮಾಡಿದರು. ಕೇಂದ್ರ ಕಛೇರಿಯಲ್ಲಿ ಇರುವ ಸಾರ್ವಜನಿಕರ ಸಂಪರ್ಕ ಕಛೇರಿ, ಪ್ರಧಾನ ಅಭಯಂತರ, ಮುಖ್ಯ ಅಭಿಯಂತರ ಹಾಗೂ ಎಂ.ಪಿ.ಇ.ಡಿ. ಹಾಗೂ ನಗರ ಯೋಜನೆ, ಅರಣ್ಯ ಘಟಕ, ಕೌನ್ಸಿಲ್ ಕಾರ್ಯಾಲಯ, ಹಣಕಾಸು ವಿಭಾಗದಲ್ಲಿ ಪೂಜಾ ಸಮಾರಂಭ ಏರ್ಪಡಿಸಲಾಗಿತ್ತು.
ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಪೂಜಾ ಸಮಾರಂಭ ನಡೆಯುತ್ತಿರುವ ಕಛೇರಿಗೆ ತೆರಳಿ, ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ದಸರಾ ಹಬ್ಬದ ಶುಭಾಶಯ ಕೋರಿ, ಪೂಜೆ ಸಲ್ಲಿಸಿದರು.
ನಾಡದೇವಿ ಚಾಮುಂಡೇಶ್ವರಿ ದೇವಿ ನವರಾತ್ರಿ ದಿನದಲ್ಲಿ 9ದಿನಗಳ ಕಾಲ ವಿವಿಧ ರೂಪದಲ್ಲಿ ದೇವಿಯ ದರ್ಶನ ನೀಡುವಳು. ದಸರಾ ಹಬ್ಬ ನಾಡಿನಲ್ಲೆಡೆ ಸಂಭ್ರಮವಿದೆ. ದಸರಾ ಪ್ರಯುಕ್ತ ಇಂದು ನಮ್ಮ ಅಧಿಕಾರಿ ಸಿಬ್ಬಂದಿಗಳು ಸಂಭ್ರಮದ್ಲಿ ಆಯುಧ ಪೂಜೆ ಮಾಡಿದ್ದಾರೆ ಬೆಂಗಳೂರುನಗರ ಜನತೆಗೆ ಸುಖ,ಶಾಂತಿ ನೆಮ್ಮದ್ದಿ ಲಭಿಸಲಿ ಹಾಗೂ ದಸರಾ ಹಬ್ಬದ ಶುಭಾಶಯಗಳು ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಹೇಳಿದರು
ಇದೇ ಸಂದರ್ಭದಲ್ಲಿ ಕೇಂದ್ರ ಕಛೇರಿಯಲ್ಲಿ ದಸರಾ ಹಬ್ಬದ ಪೂಜಾ ಸಮಾರಂಭದಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರರನ್ನು ಸನ್ಮಾನಿಸಲಾಯಿತು.


