ಬಾಗಲಕೋಟೆಯಲ್ಲಿ ಮೂಡನಂಬಿಕೆಯಿಂದ ನಡೆದಿರುವ ಘಟನೆ ಕೇಳಿದರೆ ಬೆಚ್ಚಿ ಬೀಳುತ್ತೀರಾ. ಪೂಜಾರಿಯೊಬ್ಬ ದೇಹದ ಭಾಗಗಗಳು ನೋವು ಎಂದು ಬಂದವರಿಗೆ ಕೊಡಲಿಯಿಂದ ಏಟು ಕೊಡುವ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ವಿಡಿಯೋ ನೋಡಿದವರಿಗೆ ಮೈ ನಡುಗೋದಂತು ಗ್ಯಾರಂಟಿ.
ಇದೀಗ ಈ ಡೋಂಗಿ ಬಾಬಾ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿನ ಕಾಶಿ ಲಿಂಗೇಶ್ವರ ದೇವಸ್ಥಾನದ ಪೂಜಾರಿ ಜಕ್ಕಪ್ಪ ಗಡ್ಡದ್ ನ ಭಯಾನಕ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೋಲೀಸರು ಅವನನ್ನು ಬಂಧಿಸಿದ್ದಾರೆ.
ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೆಟಗುಡ್ಡ ಗ್ರಾಮದಲ್ಲಿ ಕಾಶಿಲಿಂಗೇಶ್ವರ ದೇವಸ್ಥಾನದ ಅರ್ಚಕ ಜಕ್ಕಪ್ಪ ಗಡ್ಡದ್ ಅವರ ತೋಟದ ಮನೆಗೆ ಪ್ರತಿ ಭಾನುವಾರ ಹೊಟ್ಟೆ, ಬೆನ್ನು, ಕಾಲು ನೋವು ಎಂದು ಭಕ್ತರು ಬರುತ್ತಾರೆ. ಹೊಟ್ಟೆ ನೋವು ಇದ್ದಂತಹವನ್ನು ನೆಲದ ಮೇಲೆ ಮಲಗಿಸಿ ಹೊಟ್ಟೆಯ ಮೇಲೆ ಭಂಡಾರ ಎರಚಿ ಕೊಡಲಿಯಿಂದ ಹೊಡೆಯುತ್ತಾರೆ. ಬೆನ್ನು ನೋವು ಇದ್ದವರಿಗೆ ಬೆನ್ನಿನ ಮೇಲೆ ಭಂಡಾರ ಎರಚಿ ಕೊಡಲಿಯಿಂದ ಹೊಡೆಯುತ್ತಾನೆ. ಅವರು ಕೊಡಲಿಯಿಂದ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ಕುರಿತು ಪೋಲೀಸ್ ಅಧಿಕಾರಿ ಪ್ರತಿಕ್ರಿಯಿಸಿ ಅರ್ಚಕ ತನ್ನ ಸ್ವಂತ ಲಾಭಕ್ಕಾಗಿ ಜನರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು. ಈ ರೀತಿ 12 ವರ್ಷಗಳಿಂದ ಮಾಡುತ್ತಿರುವುದಾಗಿ ಪೂಜಾರಿ ಹೇಳಿದ್ದಾರೆ. ಕೊಡಲಿಯಿಂದ ಗಾಯಗೊಂಡ ಯಾರಾದರೂ ದೂರು ನೀಡಿದರೆ ದಾಖಲಿಸಿಕೊಳ್ಳುತ್ತೇವೆ. ಜನರು ಇಂತಹ ಮೂಢನಂಬಿಕೆಗೆ ಮಾರು ಹೋಗಬಾರದು ಎಂದು ಎಸ್ಪಿ ಮನವಿ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


