ಪಾವಗಡ: ಪಾವಗಡ ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಹೆಲ್ಪ್ ಸೊಸೈಟಿ ಕಚೇರಿಯಲ್ಲಿ ಇಂದು ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಕಡು ಬಡ ಕುಟುಂಬದ ಸುಮಾರು 50 ಮಹಿಳೆಯರಿಗೆ ದಿನಸಿ ಕಿಟ್ ಗಳನ್ನು ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ಮುಖಂಡ ಎಂ. ಕೆ.ನಾರಾಯಣಪ್ಪ ಹಾಗೂ ದಲಿತ ಮುಖಂಡ ಹನುಮಂತರಯಪ್ಪ, ಹೆಲ್ಪ್ ಸೊಸೈಟಿ ಕಚೇರಿ ಪ್ರಾರಂಭಗೊಂಡ ಮೊದಲನೇ ದಿನವೇ ಸಮಾಜ ಮುಖಿ ಸೇವಾ ಕಾರ್ಯ ಪ್ರಾರಂಭಿಸಿ, ಇಂದು ಸಂಕ್ರಾಂತಿ ಕೊಡುಗೆಯಾಗಿ ಪಟ್ಟಣದ ಕಡು ಬಡ ಕುಟುಂಬದ ಮಹಿಳೆಯರಿಗೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ರವರು ದಿನಸಿ ಕಿಟ್ ಗಳನ್ನು ವಿತರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಡಿ.ಸಿ.ಸಿ.ಬ್ಯಾಂಕ್ ಮೇಲ್ವಿಚಾರಕ ಶ್ರೀನಿವಾಸ್ ಮಾತನಾಡಿ, ಸದಾ ಜನ ಸೇವೆಯಲ್ಲಿ ಮಗ್ನರಾಗಿರುವ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಹಾಗೂ ತಂಡಕ್ಕೆ ಭಗವಂತ ಮತ್ತಷ್ಟು ಸೇವೆಯನ್ನು ಮಾಡುವ ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು. ಬಳಿಕ ಹೆಲ್ಪ್ ಸೊಸೈಟಿ ತಂಡಕ್ಕೆ 2022ರ ದಿನದರ್ಶಿ ಹಾಗೂ ಡೈರಿಗಳನ್ನು ವಿತರಿಸಿದರು.
ಈ ಸಂದರ್ಭ ಮುಖಂಡರುಗಳಾದ ಅನಿಲ್, ಬೇಕರಿ ನಾಗರಾಜ, ಮಂಜುನಾಥ್, ರಮೇಶ್, ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy