ಪಾವಗಡ: ಪಾವಗಡ ಪಟ್ಟಣದ 23ನೇ ವಾರ್ಡಿನ ಕನ ಮನಚರವು ವಾಸಿಯಾದ ಮುಸ್ಲಿಂ ಸಮುದಾಯದ ಬಾಬಾ ಪಕೃದ್ದಿನ್ ಎಂಬುವವರು ರಸ್ತೆ ಬದಿಗಳಲ್ಲಿ, ಶುಭಕಾರ್ಯಗಳ ಕಲ್ಯಾಣ ಮಂಟಪಗಳ ಮುಂಭಾಗ ಬಲೂನ್ ವ್ಯಾಪಾರ ನಡೆಸುತ್ತಿದ್ದು, ಆಕಸ್ಮಿಕವಾಗಿ ಕಾಲಿಗೆ ಪೆಟ್ಟು ಬಿದ್ದು ಕಾಲಿನ ಮೂಳೆ ಮುರಿತಗೊಂಡಿದ್ದು, ಪತ್ನಿ ಹಾಗೂ ಮೂರು ಚಿಕ್ಕ ಮಕ್ಕಳೊಂದಿಗೆ ಮನೆಯಲ್ಲಿ ಕಷ್ಟ ಅನುಭವಿಸುತ್ತಿದ್ದರು. ಈ ಮಾಹಿತಿ ಪಡೆದ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಇಂದು ಸ್ಥಳಕ್ಕೆ ಭೇಟಿ ನೀಡಿ ಅವರ ಕುಟುಂಬಕ್ಕೆಆತ್ಮ ಸ್ಟೈರ್ಯ ತುಂಬಿ ಶಸ್ತ್ರ ಚಿಕೆತ್ಸೆಗೆ ಸಹಾಯ ಹಸ್ತ ನೀಡಲಾಯಿತು.
ಸದರಿ ಕುಟುಂಬದ ನಾಲ್ಕು ವರ್ಷದ ಬಾಲಕ ಮೂರ್ಚೆ ರೋಗ ಹಾಗೂ ಅಪೌಷ್ಟಿಕ ದಿಂದ ನರಳುತ್ತಿದ್ದ ಕಣ್ಣಾರೆ ಕಂಡ ಹೆಲ್ಪ್ ಸೊಸೈಟಿ ತಂಡ ಬಾಲಕನ ಆರೋಗ್ಯ ವೃದ್ಧಿಗಾಗಿ ಪೌಷ್ಟಿಕಂಶ ಹೆಚ್ಚಿಸುವ ಔಷಧಿಗಳನ್ನು ನೀಡುವುದಾಗಿ ಹಾಗೂ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲಾ ಬ್ಯಾಗ್, ಹಾಗೂ ನೋಟ್ ಬುಕ್, ಪರಿಕರಗಳನ್ನು ನೀಡುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದರು.
ನೆರವು ಪಡೆದ ಬಾಬಾ ಪಕೃದ್ದಿನ್ ಮಾತನಾಡಿ, ಸುಮಾರು 2 ತಿಂಗಳ ಕಾಲ ಮನೆಯಲ್ಲೇ ಕಾಲು ನೋವಿನಿಂದ ನರಳುತ್ತಿದ್ದೆ. ಹಲವರು ಜನರ ಬಳಿ ಕಷ್ಟ ತೋಡಿಕೊಂಡರು, ನನ್ನ ಕಷ್ಟಕ್ಕೆ ಯಾರೂ ಸ್ಪಂದಿಸಲಿಲ್ಲ. ಆದರೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಹಾಗೂ ತಂಡ ದೇವರ ರೂಪದಲ್ಲಿ ನಮ್ಮ ಮನೆಗೆ ಆಗಮಿಸಿ ಧೈರ್ಯ ತುಂಬಿ ಶಸ್ತ್ರ ಚಿಕಿತ್ಸೆಗೆ ಸಹಾಯ ಹಸ್ತ ನೀಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
ಸದಾ ಒಂದಲ್ಲ ಒಂದು ಸಹಾಯ ಹಸ್ತ ನೀಡುತ್ತಿರುವ ಹೆಲ್ಪ್ ಸೊಸೈಟಿ ತಂಡಕ್ಕೆ ಭಗವಂತ ಮತ್ತಷ್ಟು ಶಕ್ತಿ ನೀಡಲಿ ಎಂದು ಇದೇ ವೇಳೆ ಸ್ಥಳೀಯರು ಶುಭ ಹಾರೈಸಿದರು ಈ ಸಂದರ್ಭದಲ್ಲಿ ಆಟೋ ಸಂಘದ ಅಧ್ಯಕ್ಷರು ನಾಗರಾಜ್, ಮಂಜುನಾಥ, ಸಾಯಿಕುಮಾರ್, ಭೀಮರಾಜ್ ಮುಂತಾದವರಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700