ಸರಗೂರು: ಸರಗೂರು ತಾಲೂಕು ಹಳೆಹೆಗ್ಗುಡಿಲು ಗ್ರಾಮದ ರಾಮಚಂದ್ರ ನಾಯಕರವರು ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಈಗ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಇನ್ನು ಹೆಚ್ಚಿನ ಆರ್ಥಿಕ ಸಹಕಾರದ ಅಗತ್ಯ ಇರುವುದಾಗಿ ಅವರ ತಾಯಿ ಮತ್ತು ಅಣ್ಣಾ ನಾಗರಾಜು ತಿಳಿಸಿರುತ್ತಾರೆ.
ಸರ್ವಧರ್ಮ “ಸಮಾಜ ಸೇವೆಗಾಗಿ ಹೃದಯವಂತರು” ಸೇವಾ ಸಂಸ್ಥೆಯ ವತಿಯಿಂದ ಆಹಾರ ಸಾಮಾಗ್ರಿಗಳನ್ನು ಮತ್ತು ಆರ್ಥಿಕ ಹಣಕಾಸು ಸಹಕಾರ ನೀಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸರ್ವಧರ್ಮ ಚಿಕ್ಕದೇವ್ ಹೆಗ್ಗಡಾಪುರ, ಪ್ರಧಾನ ಕಾರ್ಯದರ್ಶಿ ಮಹದೇವರಾಜ್ ಚೌಡಹಳ್ಳಿ, ಚಂದ್ರಹಾದನೂರು, ಸತೀಶ್ ಮಾಚನಾಯಕನಹಳ್ಳಿ, ವಿನೋದ್ ರಾಜ್ ಕೆ.ಎಂ ಹಳ್ಳಿ, ಚೆನ್ನನಾಯಕ, ರವಿ ನಾಯಕ ಸೇರಿದಂತೆ ಇತರರು ಹಾಜರಿದ್ದರು.
ರಾಮಚಂದ್ರ ಅವರು ಕುಟುಂಬಕ್ಕೆ ಆಧಾರವಾಗಿದ್ದರು. ಆದರೆ ಅವರ ಎರಡೂ ಕಿಡ್ನಿ ವೈಫಲ್ಯವಾಗಿದ್ದು, ಇದರಿಂದಾಗಿ ಅವರ ಕುಟುಂಬ ಇದೀಗ ಆರ್ಥಿಕವಾಗಿ ಕೂಡ ಬಹಳ ಕಷ್ಟದಲ್ಲಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದಾಗ ಎರಡೂ ಕಿಡ್ನಿ ವೈಫಲ್ಯವಾಗಿದೆ ಎಂದು ತಿಳಿದುಬಂದಿದೆ. ಇದನ್ನು ಕೇಳಿದ ಕುಟುಂಬಸ್ಥರಿಗೆ ಜೀವ ಹೋದಂತೆ ಆಗಿದ್ದು, ಅಂದಿನಿಂದ ಇಂದಿನವರೆಗೂ ಸುಮಾರು 70 ಕಿ.ಮೀ. ದೂರ ಇರುವ ಮೈಸೂರಿಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಂಡು ಬರುತ್ತಿದ್ದಾರೆ. ಈವರೆಗೆ ಚಿಕಿತ್ಸೆಗೆ ಸುಮಾರು 4 ಲಕ್ಷ ರೂ. ಖರ್ಚಾಗಿದೆ ಎಂದು ತಿಳಿದು ಬಂದಿದೆ
ಗ್ರಾಮಕ್ಕೆ 12 ಕಿ.ಮೀ.ನಷ್ಟು ದೂರ ಇರುವ ಹೆಚ್.ಡಿ.ಕೋಟೆ ಆಸ್ಪತ್ರೆಯಲ್ಲಿ ಡಯಾಲಿಸಿಸ್ ರೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ಈತನಿಗೆ ಇಲ್ಲಿ ಡಯಾಲಿಸಿಸ್ ಮಾಡುತ್ತಿಲ್ಲ. ಹೀಗಾಗಿ ದೂರದ ಮೈಸೂರಿಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಂಡು ಬರಬೇಕಾದ ಅನಿವಾರ್ಯತೆ ಎದುರಾಗಿದೆ.
ಇಷ್ಟೆಲ್ಲಾ ಸಮಸ್ಯೆ ನಡುವೆ ತಾಲೂಕಿನ ಶಾಸಕರಾದ ಅನಿಲ್ ಚಿಕ್ಕಮಾದು ಅವರ ಬಳಿ ಹೋಗಿ ಹೆಚ್.ಡಿ.ಕೋಟೆಯಲ್ಲಾದ್ರೂ ಡಯಾಲಿಸಿಸ್ ಗೆ ಅವಕಾಶ ಮಾಡಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದರೂ ಅದೂ ಸಾಧ್ಯವಾಗಿಲ್ಲ. ಇತ್ತ ಮೊದಲು ನೀವು ಖರ್ಚು ಮಾಡಿ ಆಪರೇಷನ್ ಮಾಡಿಸಿ ನಂತರ ನಿಮಗೆ ಸರ್ಕಾರದಿಂದ ಹಣ ಕೊಡಿಸುತ್ತೇವೆ ಎಂದು ಯುವಕನ ಪೋಷಕರಿಗೆ ಹೇಳಿ ಕಳುಹಿಸಿದ್ದಾರಂತೆ. ಹೀಗಾಗಿ ಈ ಕುಟುಂಬಸ್ಥರು ಆತಂಕದಲ್ಲೇ ದಿನದೂಡುವಂತಾಗಿದೆ.
ನಾವು ಆತನಿಗೆ ಕಿಡ್ನಿ ಕೊಡಲು ಮುಂದಾಗಿದ್ದೇವೆ. ಆದರೆ ಇದಕ್ಕೆ ತಗಲುವ ವೆಚ್ಚವನ್ನೂ ನಮ್ಮಲ್ಲಿ ಭರಿಸಲಾಗುತ್ತಿಲ್ಲ. ಶಾಸಕರೂ ನಮಗೆ ಸಹಾಯ ಮಾಡಲು ಮುಂದಾಗುತ್ತಿಲ್ಲ. ಹೀಗಾಗಿ ನಮ್ಮ ಮಗನ ನೋವನ್ನು ಕಣ್ಣಾರೆ ಕಂಡು ಸುಮ್ಮನಿರಬೇಕಾಗಿದೆ ಎನ್ನುತ್ತಾರೆ ಪೋಷಕರು.
ಆಪರೇಷನ್ ಗೆ ಸುಮಾರು 12 ಲಕ್ಷ ರೂ. ಖರ್ಚಾಗಲಿದ್ದು, ಅದನ್ನು ಭರಿಸಲು ಆ ಕುಟುಂಬಕ್ಕೆ ಶಕ್ತಿ ಇಲ್ಲ. ಹೀಗಾಗಿ ಯುವಕ ದಾನಿಗಳ ಬಳಿ ಸಹಾಯ ಕೋರಿದ್ದು, ನಮಗೆ ಸಹಾಯ ಮಾಡಿ ಎಂದು ಕುಟುಂಬಸ್ಥರು ಕೇಳಿಕೊಂಡಿದ್ದಾರೆ. ರಾಮಚಂದ್ರ ಅವರ ಪ್ರಾಣ ಉಳಿಸಲು ಸಹಾಯಸ್ತ ಚಾಚುವವರು ಈ ಬ್ಯಾಂಕಿಗೆ ಹಣ ಹಾಕಬಹುದಾಗಿದೆ.
Name :Ramachandra
Canara bank Saraguru branch
Account Number: 4343101011813,
IFSC Code :CNRB0004343
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700