ಗುಬ್ಬಿ: ಯಾವುದೇ ಒಂದು ದೇವಸ್ಥಾನ ಸಮುದಾಯ ಭವನಗಳನ್ನು ಕಟ್ಟಬೇಕಾದರೆ ತಾಲ್ಲೂಕಿನ ಬಹುತೇಕ ದೇವಾಲಯಗಳಿಗೆ ನಮ್ಮ ಅನುದಾನದಲ್ಲಿ ಸಹಕಾರ ಕೊಟ್ಟಿದ್ದೇನೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಕರಿಯಮ್ಮ ದೇವಿಯ ನೂತನ ವಿಮಾನ ಗೋಪೂರ ಕಳಸ ಸ್ಥಾಪನೆಯ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಬಹುತೇಕ ಕಡೆಗಳಲ್ಲಿ ದೇವಾಲಯ ನಿರ್ಮಾಣ ಮಾಡಲು ಧನ ಸಹಾಯ ಮಾಡಿದ್ದೇನೆ. ಗ್ರಾಮಗಳಲ್ಲಿ ಶಾಂತಿ ನೆಮ್ಮದಿ ಇರಬೇಕಾದರೆ ದೇವಾಲಯಗಳು ಅತ್ಯವಶ್ಯಕ ಗ್ರಾಮೀಣ ಭಾಗದಲ್ಲಿ ಸಾಕಷ್ವು ದೇವಾಲಯಗಳು ಜೀರ್ಣೋದ್ಧಾರವಾಗುತ್ತಿರುವುದು ಸಂತೋಷದ ವಿಷಯ ಇತ್ತೀಚಿಗೆ ಸರ್ಕಾರ ಬದಲಾವಣೆ ಮಾಡಿದೆ. ಊರಿನಲ್ಲಿ ಇರುವ ದೇವಾಲಯಗಳನ್ಮು ಜನರೇ ಸೇರಿಕೊಂಡು ದೇವಾಲಯಗಳನ್ನು ಮಾಡಬೇಕು ಸರ್ಕಾರದ ಹಣವನ್ನು ವೆಚ್ಚ ಮಾಡದೇ ಅದೇ ಗ್ರಾಮಗಳಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಮಾಡಬೇಕು ಜತೆಗೆ ಶಾಲಾ ಮಕ್ಕಳ ವಿಧ್ಯಾಭ್ಯಾಸ ಕೊಡಿ , ರಸ್ತೆ , ಚರಂಡಿಗಳನ್ನು ಮಾಡಿಕೊಡಿ ಶಾಶ್ವತವಾಗಿ ಸರ್ಕಾರದ ಯೋಜನೆಗಳನ್ನು ಮಾಡಿ ಎಂದು ಸರ್ಕಾರ ಆದೇಶ ಮಾಡಿದೆ ಎಂದರು.
ಇದೇ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎನ್ ಸಿ ಪ್ರಕಾಶ್ , ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ , ಸದಸ್ಯರಾದ ಟಿ ಎನ್ ಪರಮೇಶ್ , ಚಿಕ್ಕ ಹನುಮಯ್ಯ , ಓಂಕಾರ್, ಮುಖಂಡರಾದ ಕಿಡಿಗಣ್ಣಪ್ಪ , ಪ್ರಧಾನ ಅರ್ಚಕ ನರಸಿಂಹಮೂರ್ತಿ ಇದ್ದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5