ಮುಳುಬಾಗಿಲು ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ಮೋಹನರೆಡ್ಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಪಾರಿ ಹಂತಕ ಬಾಲಾಜಿ ಸಿಂಗ್ ನನ್ನು ಗುಂಡಿಕ್ಕಿ ಬಂಧಿಸಿದ್ದಾರೆ.
ಸುಪಾರಿ ಹಂತಕ ಬಾಲಾಜಿ ಸಿಂಗ್‌ಗಬ್ಬರ್ ಗಾಯಗೊಂಡಿದ್ದು, ಆತನನ ಕೋಲಾರದ ಎಸ್‌ಎಎನ್‌ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ಮೋಹನರೆಡ್ಡಿ ಕೊಲೆ ಬಾರಿ ಸಂಚಲನ ಸೃಷ್ಟಿಸಿತ್ತು. ಜೂ.7 ರಂದು ಮುತ್ಯಾಲಪೇಟೆಯ ಗಂಗಮ್ಮ ದೇವಾಲಯದ ಮುಂಭಾಗದಲ್ಲಿ ದುಷ್ಕರ್ಮಿಗಳು ಭರ್ಬರವಾಗಿ ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಿರುಸಿನ ಕಾರ್ಯಾಚರಣೆ ಕೈಗೊಂಡಿದ್ದರು.
ಕೋಲಾರ ತಾಲ್ಲೂಕಿನ ಚೆಲುವನ ಹಳ್ಳಿ ಬಳಿ ಸುಪಾರಿ ಹಂತಕರು ಅಡಗಿರುವ ಬಗ್ಗೆ ಪೊಲೀಸರುಗೆ ಖಚಿತ ಮಾಹಿತಿ ದೊರೆಯಿತು. ಮುಳಬಾಗಿಲು ಸಿಪಿಐ ಜಿ. ಲಕ್ಷಿಕಾಂತಯ್ಯ ನೇತೃತ್ವದ ತಂಡ ದಾಳಿ ನಡೆಸಿತು.
ಈ ವೇಳೆ ಪೇದೆ ವಿನಾಯಕ ಅವರ ಮೇಲೆ ಆರೋಪಿ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣ ಲಕ್ಷ್ಮಿಕಾಂತಯ್ಯ ಆರೋಪಿ ಬಾಲಾಜಿ ಸಿಂಗ್ ಬಲ ಗಾಲಿಗೆ ಗುಂಡು ಹೊಡೆದಿದ್ದಾರೆ. ಸ್ಥಳದಲ್ಲೇ ಕುಸಿದು ಬಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೇದೆಗೆ ಎಡಗೈ ಹಾಗೂ ತಲೆಗೆ ಪೆಟ್ಟಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುಪಾರಿ ಹಂತಕ ಬಾಲಾಜಿ ಸಿಂಗ್ ಮುಳಬಾಗಿಲು ನಿವಾಸಿಯಾಗಿದ್ದು, ಇತ್ತೀಚೆಗಷ್ಟೆ ಬಂಗಾರಪೇಟೆಯಲ್ಲಿ ನೆಲೆಸಿದ್ದನು. 2017ರಲ್ಲಿ ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿ ಬೈಕ್ ಕಸಿದುಕೊಂಡ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದನು.
ವಿಚಾರಣೆ ವೇಳೆ ಮುಳಬಾಗಿಲಿನ ಬಾಯಿಕೊಂಡ ಗಂಗಮ್ಮ ಕಬಾಬ್ ಸೆಂಟರ್ ಮಾಲೀಕ ನಾರಾಯಣನನ್ನು ಆತನ ಪತ್ನಿಯಿಂದಲೇ 6 ಲಕ್ಷ ರೂ. ಸುಪಾರಿ ಪಡೆದು ಹತ್ಯೆ ಮಾಡಿರುವ ವಿಷಯವನ್ನು ಬಹಿರಂಗಪಡಿಸಿದ್ದನು.
ತನ್ನ ಪತಿ ಕೊಲೆಯಾಗಿದ್ದರೂ ಆಕೆಯ ಪತ್ನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆಂದು ಬಿಂಬಿಸಿ ಅಂತ್ಯಕ್ರಿಯೆ ನೆರವೇರಿಸಿದ ಹಲವು ವರ್ಷಗಳ ನಂತರ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ಮೋಹನರೆಡ್ಡಿ, ಹತ್ಯೆಮಾಡಿದ ತಂಡದ ಸದಸ್ಯರು ನಟ ವಜ್ರಮುನಿ ಅಳಿಯನನ್ನು ಅಪಹರಿಸಿ ಅಪಹರಣದ ಪ್ರಕರಣದಲ್ಲಿ ಶಾಮೀಲಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದ್ದು, ಬಾಲಾಜಿಸಿಂಗ್‌ನ ಚಲನ-ವಲನದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜಗನ್ಮೋಹನರೆಡ್ಡಿ ಹಾಗೂ ಕೊತ್ತಮಂಗಲ ಗ್ರಾಮಪಂಚಾಯ್ತಿ ಸದಸ್ಯೆ ಮುಳಬಾಗಿಲಿನ ಟೀಚರ್‍ಸ್ ಕಾಲೋನಿಯ ಸಾವಿತ್ರಮ್ಮನ ಪುತ್ರನಾದ ಜಗನಾಥ್ ಮತ್ತು ಧನುಷ್ ನಡುವೆ ವೈಯಕ್ತಿಕ ದ್ವೇಷವಿತ್ತು. ಹೀಗಾಗಿ ಜಗನ್ಮೋಹನರೆಡ್ಡಿಯನ್ನು ಹತ್ಯೆ ಮಾಡುವ ಹುನ್ನಾರ ನಡೆಸಿ ಸುಪಾರಿ ಪಡೆದು ಬಾಲಾಜಿಸಿಂಗ್ ಹತ್ಯೆಯಲ್ಲಿ ಪ್ರಮುಖಪಾತ್ರ ವಹಿಸಿದ್ದನ್ನು ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


