nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಿಕಲಚೇತನರಿಗೆ ರಾಜಕೀಯ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ: ಫೆ.22ರಂದು ತುಮಕೂರಿನಲ್ಲಿ ರ‍್ಯಾಲಿ

    February 21, 2026

    ಹತ್ತೇನಹಳ್ಳಿ ಮಾರಮ್ಮನಿಗೆ ಹೊಸ ತಾಳಿ ಸಮರ್ಪಣೆ: ಭಕ್ತರಿಗೆ ಸಂಭ್ರಮ

    February 21, 2026

    ಸಾರ್ವಜನಿಕರ ರಸ್ತೆಗೆ ಕಾಂಪೌಂಡ್ ನಿರ್ಮಾಣ: ತೆರವಿಗೆ ಆಗ್ರಹಿಸಿ ತಹಶೀಲ್ದಾರ್‌ ಗೆ ಮನವಿ

    February 21, 2026
    Facebook Twitter Instagram
    ಟ್ರೆಂಡಿಂಗ್
    • ವಿಕಲಚೇತನರಿಗೆ ರಾಜಕೀಯ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ: ಫೆ.22ರಂದು ತುಮಕೂರಿನಲ್ಲಿ ರ‍್ಯಾಲಿ
    • ಹತ್ತೇನಹಳ್ಳಿ ಮಾರಮ್ಮನಿಗೆ ಹೊಸ ತಾಳಿ ಸಮರ್ಪಣೆ: ಭಕ್ತರಿಗೆ ಸಂಭ್ರಮ
    • ಸಾರ್ವಜನಿಕರ ರಸ್ತೆಗೆ ಕಾಂಪೌಂಡ್ ನಿರ್ಮಾಣ: ತೆರವಿಗೆ ಆಗ್ರಹಿಸಿ ತಹಶೀಲ್ದಾರ್‌ ಗೆ ಮನವಿ
    • ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಖಾಯಂಗೆ ಒತ್ತಾಯಿಸಿ ಪ್ರತಿಭಟನೆ
    • ಕೆಎಎಸ್ ಅಧಿಕಾರಿ ವಿರುದ್ಧ ನಕಲಿ ದಾಖಲೆ ಸೃಷ್ಟಿ ಆರೋಪ: ಸ್ನೇಹಮಯಿ ಕೃಷ್ಣ ಬಂಧನ
    • ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ
    • ಕೊರಟಗೆರೆ ಪೊಲೀಸರಿಂದ ಭರ್ಜರಿ ಬೇಟೆ: ಅಂತಾರಾಜ್ಯ ಮೊಬೈಲ್ ಪೋನ್ ಕಳ್ಳರ ಬಂಧನ
    • ಬಳ್ಳಾರಿ: ದ್ವಿತೀಯ PUC–15,652 ವಿದ್ಯಾರ್ಥಿಗಳು, SSLC–23,271 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಲಿಜ ಸಂಕಲ್ಪ ಹೋರಾಟ ಪ್ರತಿಭಟನೆಯಲ್ಲಿ ಭಾಗವಹಿಸಲು ಮನವಿ
    ಕೊರಟಗೆರೆ January 25, 2023

    ಬಲಿಜ ಸಂಕಲ್ಪ ಹೋರಾಟ ಪ್ರತಿಭಟನೆಯಲ್ಲಿ ಭಾಗವಹಿಸಲು ಮನವಿ

    By adminJanuary 25, 2023No Comments2 Mins Read
    balija sankalpa

    ಕೊರಟಗೆರೆ: ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ 2ಎ ಮೀಸಲಾತಿ ಸ್ವೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಜ.27 ರಂದು ಶುಕ್ರವಾರ ಬೆಂಗಳೂರಿನ ಗಾಂಧಿನಗರದ ಪ್ರೀಡಂ ಪಾರ್ಕ್ನಲ್ಲಿ ನಡೆಯುವ ಬೃಹತ್ ಸಂಕಲ್ಪ ಪ್ರತಿಭಟನೆ ಕಾರ್ಯಕ್ರಮದಲ್ಲಿ ತಾಲೂಕಿನ ಬಲಿಜ ಸಮುದಾಯದ ಪ್ರತಿಯೊಬ್ಬರು ಭಾಗವಹಿಸುವಂತೆ ತಾಲೂಕು ಬಲಿಜ ಸಂಘದ ಅಧ್ಯಕ್ಷ ಎನ್.ಪದ್ಮನಾಭ್ ಮನವಿ ಮಾಡಿದ್ದಾರೆ.

    ಕಾಮಧೇನು ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಪುರ್ವಭಾವಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲಿನಿಂದ ಬಲಿಜ ಸಮುದಾಯ ಶೇ. 28% ರಷ್ಟು ಇದ್ದ ವೀಸಲಾತಿಯನ್ನು 1994 ರಲ್ಲಿ ಯಾವುದೇ ಸೂಚನೆ ಹಾಗೂ ಸಮಿತಿಯ ವರದಿಯ ಶಿಫಾರಸ್ಸು ಇಲ್ಲದೆ ತೆಗೆದು ರಾಜಕೀಯ ಮತ್ತು ಉದ್ಯೋಗಕ್ಕೆ ಕೇವಲ ಶೇ. 4% ರಷ್ಟು ಮೀಸಲಾತಿ ಇರುವ 3ಎ ಗೆ ಸೇರಿಸಿದ್ದು, ಇದನ್ನು ಪ್ರತಿಭಟಿಸಿ ಕಳೆದ 28 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಮೀಸಲಾತಿ ನೀಡದೆ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ, ಸತತ ಹೋಟದ ಫಲವಾಗಿ ಕೇವಲ ವಿದ್ಯಾಬ್ಯಾಸಕ್ಕಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರ 2ಎ ಮೀಸಲಾತಿ ಸೌಲಭ್ಯ ನೀಡಲಾಗಿದೆ ಅದರೆ ಪೂರ್ಣಪ್ರಮಾಣದ 2ಎ ಮೀಸಲಾತಿ ಗಾಗಿ ಅನೇಕ ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗದ ಕಾರಣದಿಂದ ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಎಂ.ಆರ್.ಜಯರಾಮ್ ಮತ್ತು ಎಂ.ಆರ್.ಸೀತಾರಾಮ್ ನೇತೃತ್ವದಲ್ಲಿ ಜ.27 ರಂದು ಶುಕ್ರವಾರ ಬೆಂಗಳೂರಿನ ಗಾಂಧಿನಗರದ ಪ್ರೀಡಂ ಪಾರ್ಕ್ನಲ್ಲಿ ನಡೆಯುವ ಬೃಹತ್ ಸಂಕಲ್ಪ ಪ್ರತಿಭಟನೆ ನಡೆಯುತ್ತಿದ್ದು ಪ್ರತಿಯೊಬ್ಬ ಬಲಿಜ ಬಾಂಧವರು ಭಾಗವಹಿಸುವಂತೆ ಮನವಿ ಮಾಡಿದರು.


    Provided by
    Provided by

    ತಾಲೂಕು ಬಲಿಜ ಸಂಘದ ಪತ್ರಿಕಾ ವಕ್ತಾರ ಹಾಗೂ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್ ಮಾತನಾಡಿ, ಸುಮಾರು ವರ್ಷಗಳಿಂದ ಬಲಿಜ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸುಲಾಗುತ್ತಿದೆ, ರಾಜ್ಯದಲ್ಲಿ ಪ್ರಬಲ ಸಮುದಾಯಗಳಿಗೆ ಸರ್ಕಾರ ಎ.ಬಿ.ಸಿ.ಡಿ. ಎಂಬ ಹೊಸ ಮೀಸಲಾತಿಯ ಸೌಲಬ್ಯವನ್ನು ಕಲ್ಪಿಸಲು ಹೊರಟ್ಟಿದ್ದು ಆದರೆ ಹಿಂದುಳಿದ ದ್ವನಿಯಿಲ್ಲದ ಬಲಿಜ ಜನಾಂಗದ ಕೂಗಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಬಲಿಜ ಸಮುದಾಯ ರಾಜ್ಯದ 54 ವಿಧಾನ ಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

    ಮೀಸಲಾತಿಯಲ್ಲಿ ಅನ್ಯಾಯವಾಗಿರುವ ಬಲಿಜ ಸಮುದಾಯಕ್ಕೆ ನ್ಯಾಯವದಗಿಸಿ ಕೊಡುವಂತೆ ಜ.27 ರಂದು ಸಂಕಲ್ಪ ಪ್ರತಿಭಟನೆಸುತ್ತಿದ್ದು ಸರ್ಕಾರ ನಮ್ಮ ಮನವಿಗೆ ಸ್ಪಂದಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಮೀಸಲಾತಿ ಕೂಡುವವರೆಗೂ ಉಗ್ರ ಹೋರಾಟದೊಂದಿಗೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ ಅವರು ಬಲಿಜ ಸಮುದಾಯ ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕಾಗಿದೆ ಎಂದರು.

    ಜಿಲ್ಲಾ ಸಂಘದ ಪ್ರತಿನಿಧಿ ಹಾಗೂ ಮುಖಂಡ ಕೆ.ಎಲ್.ಆನಂದ್ ಮಾತನಾಡಿ, 2ಎ ಮೀಸಲಾತಿ ವಿಚಾರದಲ್ಲಿ ಸಮುದಾಯವು ಒಗ್ಗಟ್ಟು ಪ್ರದರ್ಶಿಸಬೇಕು ಎಂದ ಅವರು ರಾಜ್ಯದಲ್ಲಿ ಬಲಿಜ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು, ತಪ್ಪಿದಲ್ಲಿ ಉಗ್ರಹೋರಾಟದ ಕ್ರಾಂತಿಕಾರಕ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಡಬೇಕು ಎಂದರೆ ಪ್ರತಿಯೊಬ್ಬರೂ ಜ.27 ರಂದು ನಡೆಯುವ ಸಂಕಲ್ಪ ಸಭೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.

    ತಾಲೂಕು ಪ್ರಧಾನ ಕಾರ್ಯದರ್ಶಿ ನವೀನ್ಕುಮಾರ್ ಮಾಹಿತಿ ನೀಡಿ 27 ರಂದು ಸಂಕಲ್ಪಯಾತ್ರೆಯಲ್ಲಿ ಬಾಗವಹಿಸುವ ಸಮುದಾಯದವರಿಗೆ ಕೊರಟಗೆರೆ ಯಿಂದ ವಾಹನದ ವ್ಯವಸ್ಥೆಮಾಡಲಾಗುತ್ತಿದ್ದು ಜ.25 ರಂದು ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಸಂಘದ ಖಜಾಂಜಿ ವೆಂಕಟೇಶ್, ಕಾರ್ಯದರ್ಶಿ ನವೀನ್ಕುಮಾರ್, ಸಹ ಕಾರ್ಯದರ್ಶಿ ಪ್ರೇಂಡ್ಸ್ ಗ್ರೂಪ್ ರವಿಕುಮಾರ್, ಯುವ ಬಲಿಜ ಸಂಘದ ಅಧ್ಯಕ್ಷ ಸಂಜಯ್, ಸಂಘದ ನಿರ್ದೇಶ ಕರುಗಳಾದ ಬೆನಕಾ ವೆಂಕಟೇಶ್, ಕೆ.ಬಿ.ಲೋಕೇಶ್, ದೇವರಾಜು, ಅಕ್ಕಿರಾಂಪುರ ಮಂಜುನಾಥ್, ಎಸ್.ಆರ್.ಟೈಲರ್ ಶ್ರೀನಿವಾಸ್, ವೆಂಕಟಾಚಲಿ, ದಯಾನಂದ್, ಡೈರಿ ಶ್ರೀನಿವಾಸ್, ಹನುಮೇನಹಳ್ಳಿ ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    ವರದಿ: ಮಂಜುಸ್ವಾಮಿ. ಎಂ. ಎನ್., ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಕೊರಟಗೆರೆ ಪೊಲೀಸರಿಂದ ಭರ್ಜರಿ ಬೇಟೆ: ಅಂತಾರಾಜ್ಯ ಮೊಬೈಲ್ ಪೋನ್ ಕಳ್ಳರ ಬಂಧನ

    February 20, 2026

    ಎಸ್ ಎಸ್ ಎಲ್ ಸಿ ಪರೀಕ್ಷೆ : ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂವಾದ

    February 19, 2026

    ಶ್ರೀ ಸಂತ ಸೇವಾಲಾಲ್ ರವರ ಆದರ್ಶ ತತ್ವ ಪಾಲಿಸಿ: ತಹಶೀಲ್ದಾರ್ ಕೆ.ಮಂಜುನಾಥ್

    February 19, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ವಿಕಲಚೇತನರಿಗೆ ರಾಜಕೀಯ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ: ಫೆ.22ರಂದು ತುಮಕೂರಿನಲ್ಲಿ ರ‍್ಯಾಲಿ

    February 21, 2026

    ತುಮಕೂರು: ವಿಕಲಚೇತನರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ.05ರಷ್ಟು ರಾಜಕೀಯ ಮೀಸಲಾತಿ ನೀಡಬೇಕು, ಬಜೆಟ್‌ ನಲ್ಲಿ ಹೆಚ್ಚುವರಿ ಅನುದಾನ ಸೇರಿದಂತೆ ವಿವಿಧ ಬೇಡಿಕೆಗಳ…

    ಹತ್ತೇನಹಳ್ಳಿ ಮಾರಮ್ಮನಿಗೆ ಹೊಸ ತಾಳಿ ಸಮರ್ಪಣೆ: ಭಕ್ತರಿಗೆ ಸಂಭ್ರಮ

    February 21, 2026

    ಸಾರ್ವಜನಿಕರ ರಸ್ತೆಗೆ ಕಾಂಪೌಂಡ್ ನಿರ್ಮಾಣ: ತೆರವಿಗೆ ಆಗ್ರಹಿಸಿ ತಹಶೀಲ್ದಾರ್‌ ಗೆ ಮನವಿ

    February 21, 2026

    ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಖಾಯಂಗೆ ಒತ್ತಾಯಿಸಿ ಪ್ರತಿಭಟನೆ

    February 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.