ತುಮಕೂರು: ಜಿಲ್ಲೆಯ ಹೊಸಕೋಟೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತಿಯನ್ನು ಹಾಗೂ ಸಂವಿಧಾನಾತ್ಮಕ ಮೌಲ್ಯಗಳ ಪ್ರಕಾರ ಆಚರಿಸಲಾಯಿತು.
ಭಾವಚಿತ್ರದೊಂದಿಗೆ ಮೆರವಣಿಗೆ ಹಾಗೂ ಕುಂಭಮೇಳದ ಮೂಲಕ ಕಾರ್ಯಕ್ರಮಕ್ಕೆ ಭಕ್ತಿಯುತ ಆಚರಣೆ ನಡೆಸಲಾಯಿತು. ಈ ಬಾರಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ವಿಶೇಷ ಗಮನ ಹರಿಸಿ, ಡಿಜೆ ಸೇರಿದಂತೆ ಶಬ್ದ ಮಾದಕ ಸಾಧನಗಳಿಂದ ದೂರವಿದ್ದು, ಸಂಸ್ಕೃತಿಪರ ಹಾಗೂ ಶಾಂತಿಯುತ ಆಚರಣೆಗೆ ಆದ್ಯತೆ ನೀಡಿದರು.
“ಅಂಬೇಡ್ಕರ್ ಜಯಂತಿ ಎಂದರೆ ಡಿಜೆ ಅಲ್ಲ, ಆದರೆ ಆಚಾರವಿಧಿ, ಸಂವಿಧಾನ, ಶ್ರದ್ಧೆ ಮತ್ತು ಸಂಸ್ಕೃತಿಯ ಪ್ರತಿ ನಿಷ್ಠೆ” ಎಂಬ ಧೋರಣೆಯನ್ನು ಮುಂದಿರಿಸಿದರು.
ಗ್ರಾಮದ ಯುವಕರು ಹಾಗೂ ‘ಜೈ ಭೀಮ್ ಯುವಕರ ಸಂಘ’ದ ಸದಸ್ಯರು, ಮುಂದಿನ ತಲೆಮಾರಿಗೆ ಉತ್ತಮ ಉದಾಹರಣೆಯಾಗುವಂತಹ ಮಾದರಿಯ ಆಚರಣೆ ರೂಪಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಸಹಕರಿಸಿದ ಬಲ್ಲೇನಹಳ್ಳಿ ಗ್ರಾಮ ಪಂಚಾಯತಿ, ಹೊಸಕೋಟೆ ಪೊಲೀಸ್ ಇಲಾಖೆ ಹಾಗೂ ಗ್ರಾಮಸ್ಥರಿಗೆ ‘ಜೈ ಭೀಮ್ ಯುವಕರ ಸಂಘ’ದ ವತಿಯಿಂದ ಧನ್ಯವಾದ ಸಮರ್ಪಿಸಲಾಯಿತು.
ವರದಿ : ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————