ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಗೊಂದಿಹಳ್ಳಿ,ಪುರವರ,ಬ್ಯಾಲ್ಯ,ಕೋಡಗದಾಲ ಗ್ರಾಮಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ,ಬಾಲ್ಯ ವಿವಾಹ ನಿಷೇದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಬಾಲ್ಯವಿವಾಹ ನಿಷೇಧ ಕಾಯ್ದೆಯ ಸಮರ್ಪಕ ಅನುಷ್ಠಾನದ ಅಭಿಯಾನ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಂಬಂಧವಾಗಿ ವಾರ್ತಾ ಇಲಾಖೆಯ “ವಿಡಿಯೋ ಆನ್ ವ್ಹೀಲ್ಸ್ ” ಮುಖಾಂತರ ಬಸ್ ನಿಲ್ದಾಣ ಸ್ಥಳಗಳಲ್ಲಿ ವಿಡಿಯೋ ಪ್ರದರ್ಶನ ಏರ್ಪಡಿಸಲಾಗಿತ್ತು.
ಗ್ರಾಮದಲ್ಲಿನ ಕಾರ್ಯಕ್ರಮವನ್ನು ಮಧುಗಿರಿಯ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಮಹೇಶ್, ಗೊಂದಿಹಳ್ಳಿ ಗ್ರಾ.ಪಂ ಅಧ್ಯಕ್ಷೆ ರಮ್ಯಾ, ಪುರವರ ಗ್ರಾ.ಪಂ ಉಪಾಧ್ಯಕ್ಷೆ ರಾಧಿಕಾ, ಪಿ ಡಿ ಓ ಪುಂಡಲಿಕ, ಕಂದಾಯ ಇಲಾಖೆಯ ನಟರಾಜು ಉದ್ಘಾಟಿಸಿದರು. ಸಾಂತ್ವನ ಕೇಂದ್ರದ ವಿಜಯಲಕ್ಷ್ಮಿ, ಗ್ರಾಮದ ಮುಖಂಡ ಸತೀಶ್ ಗ್ರಾ.ಪಂ ಬಿಲ್ ಕಲೆಕ್ಟರ್ ಮಂಜುನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಧುಗಿರಿಯ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಮಹೇಶ್ ಪ್ರಮಾಣ ವಚನ ಭೋದಿಸಿದರು. ಪಿಡಿಓ ಪುಂಡಲಿಕ ರವರು ಬಾಲ್ಯವಿವಾಹದಿಂದಾಗುವ ಅನಾಹುತಗಳನ್ನು ಕುರಿತು ವಿವರಿಸಿದರು.
ನಂತರ ಬಾಲ್ಯವಿವಾಹ ನಿಷೇದ ಕುರಿತು ಜಾಗೃತಿ ಮೂಡಿಸುವ ವಿಡಿಯೋ ಪ್ರದರ್ಶಿಸಲಾಯಿತು. ವಿಡಿಯೋ ವೀಕ್ಷಣೆಗೆ ಪುರವರದ ವೃತ್ತದ ಹಾಗೂ ಗೊಂದಿಹಳ್ಳಿ ವೃತ್ತದ ಎಲ್ಲಾ ಅಂಗನಾವಾಡಿ ಕಾರ್ಯಕರ್ತೆಯರು ,ಆಶಾ ಕಾರ್ಯಕರ್ತೆಯರು ಮತ್ತು ಸಿಬ್ಬಂದಿಗಳು,ಗ್ರಾಮದ ಮಹಿಳೆಯರು ,ಕಿಶೋರಿಯರು ಮತ್ತು ಗ್ರಾಮಸ್ಥರು ವೀಕ್ಷಿಸಿದರು.
ವರದಿ : ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy