ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಂದ ಕುಂಟೆ ನಾಗರಾಜಯ್ಯ ನುಡಿ ನಮನ ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ಆಯೋಜನೆ ಮಾಡಲಾಗಿತ್ತು.
ಹಿರಿಯ ದಲಿತ ಮುಖಂಡ ಹೋರಾಟಗಾರ ಕುಂದೂರು ತಿಮ್ಮಯ್ಯ ನೇತೃತ್ವದಲ್ಲಿ ನಾಗರಾಜಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮ ಸಲ್ಲಿಸಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇದೇ ವೇಳೆ ಕುಂದೂರು ತಿಮ್ಮಯ್ಯ ಮಾತನಾಡಿ, 1972 –73 ರಲ್ಲಿ ತುಮಕೂರು ನಗರದ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದ ಬಂದ ಕುಂಟೆ ನಾಗರಾಜಯ್ಯ ಆ ದಿನಗಳಲ್ಲಿ ಕೆಲವು ದಲಿತ ವಿದ್ಯಾರ್ಥಿಗಳೊಂದಿಗೆ ಸೇರಿ ಅಸ್ಪೃಶ್ಯತಾ ನಿವಾರಣಾ ಸಂಘ ಹಾಗೂ 1974– 75 ರಲ್ಲಿ ದಲಿತ ವಿದ್ಯಾರ್ಥಿ ಸಂಘ ಸ್ಥಾಪಿಸುವ ಮೊದಲ ಹೋರಾಟದೊಂದಿಗೆ ನಾಗರಾಜಯ್ಯನವರ ಸಾಮಾಜಿಕ ನ್ಯಾಯದ ಹೋರಾಟ ಆರಂಭವಾಯಿತು. ನಂತರದ ದಿನಗಳಲ್ಲಿ ಇವರ ಹೋರಾಟ ಶಿಖರ ಶೃಂಗ ತಲುಪಿದ್ದು , ನಮ್ಮ ತುರುವೇಕೆರೆ ತಾಲೂಕಿನಲ್ಲೂ ಸಹ ಅನೇಕ ಹೋರಾಟಗಳ ಮುಂದಾಳತ್ವವನ್ನು ವಹಿಸಿ ಹೋರಾಟಕ್ಕೆ ಮುನ್ನುಡಿ ಬರೆದ ಏಕೈಕ ವ್ಯಕ್ತಿ ಬಂದ ಕುಂಟೆ ನಾಗರಾಜಯ್ಯ ಇವರೊಂದಿಗೆ ನಾನು ಸಹ ಅನೇಕ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ ಎಂದರು.
ಜೊತೆಗೆ ನಾಗರಾಜಯ್ಯನವರಲ್ಲಿ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಅವರು ಪಟ್ಟನಾಯಕನಹಳ್ಳಿಯಲ್ಲಿರುವ ಒಂದು ಮಠದ ಸ್ವಾಮೀಜಿಯ ವಿರುದ್ಧ ತಿರುಗಿ ಬಿದ್ದ ಸನ್ನಿವೇಶವು ಕೂಡ ಇದೆ ಅನೇಕ ವಿದ್ಯಾರ್ಥಿಗಳಿಗೆ ಮತ್ತು ದೊಣ್ಣೆಯಿಂದ ಭಾರಿಸಿದ ಸ್ವಾಮೀಜಿಯ ವಿರುದ್ಧ ಪ್ರತಿಭಟನೆಯ ಸಂಕೇತಾರ್ಥವಾಗಿ ತಲೆ ಮೇಲೆ ಟ್ರೆಂಕುಗಳನ್ನು ಹೊತ್ತು ಪಟ್ಟನಾಯಕನಹಳ್ಳಿ ಬೀದಿಗಳಲ್ಲಿ ಧಿಕ್ಕಾರ ಕೂಗುತ್ತಾ ಮೆರವಣಿಗೆ ನಡೆಸಿ ಹೋರಾಟ ರೂಪಿಸಿದವರು ಜೊತೆಗೆ ವಿದ್ಯಾರ್ಥಿಯ ದಿನಗಳ ಪ್ರತಿಭಟನೆಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಬೌದ್ಧಿಕ ಆಕಾರ ದೊರೆತದ್ದು ಪ್ರೊ,.ಬಿ.ಕೆ.ಜೊತೆಗಿನ ಒಡನಾಟದೊಂದಿಗೆ ಇದ್ದ ಫಲವಾಗಿ ದಲಿತ ಚಳುವಳಿ ಆರಂಭವಾಯಿತು, ಒಟ್ಟಾರೆ ಬಂದ ಕುಂಟೆ ನಾಗರಾಜಯ್ಯ ಅವರು ದಬ್ಬಾಳಿಕೆ ದೌರ್ಜನ್ಯ ವಿರುದ್ಧ ಹೋರಾಡುತ್ತಾ ದೀನ ದಲಿತರ ಪರವಾಗಿ ಸಾತ್ವಿಕ ಪ್ರತಿಭಟಕರಾಗಿದ್ದರು ಎಂದರು.
ಬಳಿಕ ಸೋಮೇನಹಳ್ಳಿ ಜಗದೀಶ್ ಮಾತನಾಡಿ, ಬಂದ ಕುಂಟೆ ನಾಗರಾಜಯ್ಯರವರು 1974ರಲ್ಲಿ ರೂಪಿಸಲಾದ ದಲೇಖದಿಂದ ಹಿಡಿದು ದೇವರಾಯನ ದುರ್ಗದ ನಾಮದ ಚಿಲುಮೆಯಲ್ಲಿ ನಡೆದ ರಾಜ್ಯಮಟ್ಟದ ಮೊಟ್ಟ ಮೊದಲ ದಲಿತ ಕಾರ್ಯಕರ್ತರ ತರಬೇತಿ ಶಿಬಿರ, ಹಾಡ್ಯದ ಸೋಮಶೇಖರ್ ನಿರುಪಾಲು, ದುರ್ಮರಣ, ಬಂಡಾಯ, ಸಾಹಿತ್ಯ ಸಂಘಟನೆಯ ಪ್ರಥಮ ಸಮಾವೇಶ, ದಸಂಸದ ಭೂ ಹೋರಾಟಗಳು, ಜನಕಲಾ ಮೇಳ, ದಸಂಸ ಮುಖವಾಣಿಯಾದ ಪಂಚಮ ಮತ್ತು ಸುದ್ದಿ ಸಂಗಾತಿ ಪತ್ರಿಕೆಗಳ ಪ್ರಕಟಣೆ, ದಸಂಸದ ರಾಜಕೀಯ ಪ್ರವೇಶ, ದಲಿತ ಚಳುವಳಿಯ ವಿಘಟನೆ, ಮಂಡಲ್ ವರದಿ ಹೋರಾಟ, ಬ್ಯಾಕ್ಲ್ಯಾಕ್ ಹುದ್ದೆ ಬರ್ತಿ ಹೋರಾಟ, ಬಹುಜನ ಸಮಾಜ ಪಕ್ಷ ಒಳ ಮೀಸಲಾತಿ ವರ್ಗಿಕರಣ ಚಳವಳಿ, ದಲಿತ ಚಳುವಳಿಯಲ್ಲಿ ಮಿಂಚಿನಂತೆ ಹೊಳೆದು ನೆನಪು ಉಳಿಸಿ ಹೋದ ಚೇಳೂರು ವೆಂಕಟೇಶ್ ರವರ ಮುಂತಾದ ಅನೇಕ ಪ್ರಮುಖ ಸಂಗತಿಗಳಲ್ಲಿ ಬಂದ ಕುಂಟೆ ನಾಗರಾಜಯ್ಯ ದಲಿತ ಚಳುವಳಿಯ ಕಾಲ ಯಾನದ ಸಾಕ್ಷಿಪ್ರಜ್ಞೆಯಾಗಿದ್ಧರು ಎಂದು ನೆನಪಿಸಿದರು.
ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ತುರುವೇಕೆರೆ ತಾಲೂಕು ಸಂಚಾಲಕ ಕೃಷ್ಣ ಸ್ವಾಮಿ ಮಾತನಾಡಿ, ದಲಿತ ಚಳುವಳಿಯ ಮಾತೃಸ್ಥಾನದಲ್ಲಿರುವ ಮತ್ತು ಸರಳ ಸಜ್ಜನಿಕೆಯ ಪ್ರಾಮಾಣಿಕ ಹೋರಾಟಗಾರರಾದ ನಮ್ಮ ಬಂಧ ಕುಂಟೆ ನಾಗರಾಜಯ್ಯ ಇಂದು ನಮ್ಮನ್ನು ಅಗಲಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ನಾವು ಸಹ ಮುಂದಿನ ದಿನಗಳಲ್ಲಿ ಅವರಂತೆ ಹೋರಾಟ ಮುಂದುವರಿಸಿ ದೀನ ದಲಿತರ ಪರವಾಗಿ ಉತ್ತಮವಾದ ಹೋರಾಟ ಮಾಡಿ ನ್ಯಾಯ ದೊರಕಿಸಿ ಕೊಡುವಲ್ಲಿ ಹೆಜ್ಜೆ ಇಡುತ್ತೇವೆ ಎಂದರು.
ಇನ್ನು ನುಡಿ ನಮನ ಕಾರ್ಯಕ್ರಮದಲ್ಲಿ ತಾಲೂಕಿನ ಹಿರಿಯ ದಲಿತ ಮುಖಂಡರುಗಳು ವಿವಿಧಪರ ಸಂಘಟನೆಗಳ ಮುಖಂಡರುಗಳು ಹಲವರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಕೆ.ಎ., ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


