ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದು, ಬೆಂಗಳೂರು ಹಾಲು ಕರೆಯುವ ಹಸು, ಹಾಗಾಗಿ ಡಿ.ಕೆ. ಶಿವಕುಮಾರ್ ಬೆಂಗಳೂರಿಗೆ ಒತ್ತು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಈಶಾನ್ಯ ರಾಜ್ಯದವರು ನಡೆಸುತ್ತಿರುವ ಅಂಗಡಿಗಳ ನಿಯೋಗ ಬಂದಿತ್ತು. ಸಣ್ಣಪುಟ್ಟ ಅಂಗಡಿ ಮಾಲೀಕರಿಂದಲೂ ಮಾಸಿಕ 15,000 ರೂ. ವಸೂಲಿ ಮಾಡಲಾಗುತ್ತಿದೆ. ಬಿಬಿಎಂಪಿಯವರು ಮಾಸಿಕ 15,000 ರೂ. ಕೇಳುತ್ತಿದ್ದಾರೆಂದು ಅವರು ಆರೋಪಿಸಿದರು.
ಇದೇ ರೀತಿ ವಸೂಲಿಗೆ ಇಳಿದರೆ ಅವರೆಲ್ಲರೂ ಬೆಂಗಳೂರು ಬಿಡುತ್ತಾರೆ. ಯಾವ ಅಧಿಕಾರಿಗಳೂ ಸಮಾಧಾನದಿಂದಿಲ್ಲ, ಸ್ಥಳ ತೋರಿಸದೆ ವರ್ಗಾವಣೆ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇಂತಹ ಪರಿಸ್ಥಿತಿಯಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಂಸದೆ ಶೋಭಾ ವಾಗ್ದಾಳಿ ಮಾಡಿದರು.


