ತುಮಕೂರು: ಬೆಂಗಳೂರು—ತುಮಕೂರು ನಡುವೆ ಸಂಚರಿಸುತ್ತಿದ್ದ ರೈಲನ್ನು ಕೊವಿಡ್ ಸಂದರ್ಭದಲ್ಲಿ ಸಂಚಾರ ನಿಲ್ಲಿಸಲಾಗಿತ್ತು. ಇದೀಗ ಲಾಕ್ ಡೌನ್ ವಾಪಸ್ ಪಡೆದು, ಶಾಲೆಗಳು ಆರಂಭವಾದರೂ ಬೆಂಗಳೂರು—ತುಮಕೂರು ರೈಲು ಸಂಚಾರ ಆರಂಭವಾಗಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.
ಕೋವಿಡ್ ಗೆ ಮೊದಲು ಬೆಂಗಳೂರು- ತುಮಕೂರು ನಡುವೆ ನಾಲ್ಕು ಬಾರಿ ಮೆಮೊ ರೈಲು ಸಂಚರಿಸುತಿತ್ತು. ಬೆಂಗಳೂರಿನಿಂದ ಬೆಳಿಗ್ಗೆ 9.20 ಗಂಟೆಗೆ ಹೊರಟು ತುಮಕೂರಿಗೆ 11 ಗಂಟೆಗೆ ತಲುಪುತಿತ್ತು. ತುಮಕೂರಿನಿಂದ 11.20ಕ್ಕೆ ಬಿಟ್ಟು 1 ಗಂಟೆಗೆ ಬೆಂಗಳೂರು ಸೇರುತಿತ್ತು. ಬೆಂಗಳೂರಿನಿಂದ 1.40ಕ್ಕೆ ಹೊರಟು ತುಮಕೂರಿಗೆ 4 ಗಂಟೆಗೆ, ಮತ್ತೆ ಇಲ್ಲಿಂದ 4.15ಕ್ಕೆ ಹೊರಟು ಬೆಂಗಳೂರನ್ನು 6 ಗಂಟೆಗೆ ಸೇರುತಿತ್ತು.
ಈ ರೈಲು ವಿದ್ಯಾರ್ಥಿಗಳಿಗೆ, ನೌಕರರಿಗೆ, ಕೂಲಿ ಕಾರ್ಮಿಕರಿಗೆ ಎಲ್ಲರಿಗೂ ನೆರವಾಗಿತ್ತು. ಆದರೆ ಇನ್ನೂ ರೈಲು ಸಂಚಾರ ಪ್ರಾರಂಭವಾಗಿಲ್ಲ. ಆದಷ್ಟು ಶೀಘ್ರವೇ ರೈಲು ಸಂಚಾರ ಆರಂಭಿಸಬೇಕು ಎನ್ನುವ ಒತ್ತಾಯ ಇದೀಗ ತುಮಕೂರಿನಾದ್ಯಂತ ಕೇಳಿ ಬಂದಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700