ಬೆಂಗಳೂರು: ನಗರದ ರಮಾಬಾಯಿ SC ST ಲೇಡಿಸ್ ಹಾಸ್ಟೆಲ್ ನಲ್ಲಿ ಬೆಳ್ಳಂಬೆಳಗ್ಗೆ ಹನಿ ನೀರು ಇಲ್ಲದೇ ಬೇಸತ್ತ ವಿದ್ಯಾರ್ಥಿನಿಯರು, ಏಕಾಏಕಿ ರಸ್ತೆಗೆ ಬಂದು ರೋಡ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಲೇಡಿಸ್ ಹಾಸ್ಟೆಲ್ ಅವ್ಯವಸ್ಥೆಗಳ ಆಗರ ಆಗಿದೆ ಅಂತ ಬೆಂಗಳೂರು ವಿವಿ ಹಾಗೂ ವಾರ್ಡನ್ ವಿರುದ್ಧ ನಿಗಿನಿಗಿ ಕೆಂಡ ಕಾರಿದರು.
ವಿವಿ ಅಧಿಕಾರಿಗಳು ಎಷ್ಟೇ ಸಮಾಧಾನ ಮಾಡಿದರೂ ರಸ್ತೆಯಿಂದ ಮೇಲೇಳಲು ವಿದ್ಯಾರ್ಥಿನಿಯರು ಸುತಾರಾಂ ಒಪ್ಪಲಿಲ್ಲ. ಕುಲಪತಿ, ಕುಲಸಚಿವ ಸ್ಥಳಕ್ಕೆ ಧಾವಿಸಬೇಕು ಅಂತ ಪಟ್ಟು ಹಿಡಿದರು. ತಾತ್ಕಾಲಿಕ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ ಬಳಿಕ ಹಾಸ್ಟೆಲ್ ನತ್ತ ತೆರಳಿದರು. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಮಿತಿ ನಿರ್ದೇಶಕ ಚಂದ್ರಶೇಖರ್, ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ವಿದ್ಯುತ್ ವ್ಯತ್ಯಯ ಆಗಿ ನೀರನ್ನು ಪಂಪ್ ಮಾಡೋಕೆ ಆಗಿರಲಿಲ್ಲ.
ಸದ್ಯಕ್ಕೆ ಟ್ಯಾಂಕರ್ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ರು. ಅಲ್ಲದೆ ಹಾಸ್ಟೆಲ್ ನಲ್ಲಿರುವ ಉಳಿದ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸುವುದಾಗಿ ಹೇಳಿದ್ರು. ಒಟ್ಟಾರೆ ನೀರಿನ ಸಮಸ್ಯೆ ಮಾತ್ರವಲ್ಲದೆ ಗುಣಮಟ್ಟದ ಆಹಾರ, ಶುಚಿತ್ವದ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿದ್ದು, ಸಂಬಂಧಪಟ್ಟ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಅಂತ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ. ಸದ್ಯ ತಾತ್ಕಾಲಿಕವಾಗಿ ಇವರ ನೀರಿನ ಸಮಸ್ಯೆ ಬಗೆಹರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


