ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2,483 ಹೊಸ ಕರೋನ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ ಮತ್ತು ಸಕ್ರಿಯ ಪ್ರಕರಣಗಳು 15,636 ಕ್ಕೆ ಇಳಿದಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ,ಸೋಂಕಿನಿಂದ ಅಸ್ಸಾಂ ಮತ್ತು ಕೇರಳದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಏರಿದೆ.
ಇಂದು ಬೆಳಿಗ್ಗೆ 8 ಗಂಟೆಗೆ ಬಿಡುಗಡೆಯಾಗಿರುವ ಡೇಟಾದಲ್ಲಿ ದೇಶದಲ್ಲಿ ಮತ್ತೆ ಕೊರೊನಾ ಬಾದಿಸುವ ಎಚ್ಚರಿಕೆ ನೀಡಲಾಗಿದೆ.ದಕ್ಷಿಣದ ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 47 ಜನರು ಸಾವನ್ನಪ್ಪಿದ್ದಾರೆ.ಸೊಂಕಿನಿಂದ ಸಾವಿನ ಪ್ರಮಾಣ ಶೇಕಡಾ 1.22 ರಷ್ಟಿದ್ದು ಅಲರ್ಟ್ ಘೊಷಿಸಲಾಗಿದೆ.
ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದಡಿ 187.95 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. 4ನೇ ಅಲೆ ಕಾರಣ ಎಲ್ಲರಿಗೂ ಬೂಸ್ಟರ್ ಲಸಿಕೆ ನೀಡುವಂತೆ ಆರೋಗ್ಯ ಪರಿಣಿತರು ಸೂಚಿಸಿದ್ದಾರೆ.
ವರದಿ ಆಂಟೋನಿ ಬೇಗೂರು


