ಬಡ್ಡಿ ಹಣಕ್ಕಾಗಿ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆಗೈದ ಘಟನೆ ಬೆಂಗಳೂರಿನ ಕಾಕ್ಸ್ ಟೌನ್ ದೊಡ್ಡಗುಂಟೆ ಬಳಿ ನಡೆದಿದೆ.
ಅಜಿತ್ (35) ಕೊಲೆಯಾದ ವ್ಯಕ್ತಿ. ಅಜಿತ್ ಐಟಿಸಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದ ಸಂದರ್ಭ ಮನೆ ಮುಂಭಾಗದಲ್ಲೇ ಕೊಲೆ ಮಾಡಲಾಗಿದೆ.
ಬಡ್ಡಿ ಹಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಜಿತ್ ವ್ಯಕ್ತಿಯೊಬ್ಬರಿಂದ ಅಧಿಕ ಬಡ್ಡಿಗೆ ಹಣ ಪಡೆದಿದ್ದರು. ಬಡ್ಡಿ ಹಣ ಮತ್ತು ಅಸಲು ಹಣ ವಾಪಸ್ ವಿಚಾರಕ್ಕೆ ಆರೋಪಿ ಮತ್ತು ಅಜಿತ್ ನಡುವೆ ಗಲಾಟೆ ಆಗುತ್ತಿತ್ತು.
ಅಜಿತ್ ಮನೆಗೆ ಬರೋದನ್ನೇ ಕಾದು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದಿಂದ ಬಂದು ಆರೋಪಿ ಕೃತ್ಯವೆಸಗಿದ್ದು, ಆರೋಪಿ ಪತ್ತೆಗಾಗಿ ಪುಲಿಕೇಶಿ ನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


