ತುಮಕೂರು: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಭಾರೀ ಮಳೆಯಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಕೆರೆ, ಕಟ್ಟೆಗಳು ಭರ್ತಿಯಾಗಿವೆ. ಪಾವಗಡ, ಶಿರಾ, ತಿಪಟೂರು ತಾಲ್ಲೂಕುಗಳನ್ನು ಹೊರತುಪಡಿಸಿದರೆ ಉಳಿದೆಡೆ ಮಳೆ ಬಿರುಸಾಗಿತ್ತು.
ಕೊರಟಗೆರೆ, ತುಮಕೂರು, ಗುಬ್ಬಿ, ಕುಣಿಗಲ್, ತುರುವೇಕೆರೆ, ಮಧುಗಿರಿ ಭಾಗದಲ್ಲಿ ಭಾರಿ ಮಳೆಯಾಗಿದ್ದು, ಕೊರಟಗೆರೆ ತಾಲ್ಲೂಕಿನ ತೀತಾ ಬಳಿ 40 ವರ್ಷಗಳ ಹಿಂದೆ ಅಣೆಕಟ್ಟು ನಿರ್ಮಿಸಲಾಗಿತ್ತು.ಬಳಿಕ ಕೊಡಿಗೇನಹಳ್ಳಿ ಭಾಗಕ್ಕೆ ನೀರು ಹರಿಯುವುದು ಕಡಿಮೆಯಾಗಿತ್ತು. ಮಳೆ ಕಡಿಮೆಯಾದ ಕಾರಣ ನದಿ ಹರಿಯದೆ ಬರಡಾಗಿತ್ತು.
ಪ್ರಮುಖ ನದಿಗಳಾದ ಸುವರ್ಣಮುಖಿ ನದಿ ಕೂಡ 15 ದಿನಗಳಿಂದ ತುಂಬಿ ಹರಿಯುತ್ತಿದೆ. ತಿಪಟೂರಿನಲ್ಲಿ 72 ಗಂಟೆಯಲ್ಲಿ ಸುಮಾರು 79 ಮಿ.ಮೀ ಮಳೆ ಬಿದ್ದಿದ್ದು ತಾಲ್ಲೂಕಿನ ಗಂಗನಘಟ್ಟದ ಶಿಂಶಾ ನದಿಯೂ ತುಂಬಿ ಹರಿಯುತ್ತಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700