ಕೊಪ್ಪಳ: ಪ್ರಧಾನಿ ಹಾಗೂ ಸಿಎಂ ಆಗುವುದಕ್ಕೆ ಅದೃಷ್ಟವೇ ಮುಖ್ಯ ಎನ್ನುವಂತೆ ಮಾತನಾಡಿದ ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಹಲವು ನಾಯಕರ ಹೆಸರೆತ್ತಿ ಅವಹೇಳನಾಕಾರಿಯಾಗಿ ಮಾತನಾಡಿರುವ ಪ್ರಸಂಗವೊಂದು ವರದಿಯಾಗಿದೆ.
ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ, ಎಲ್.ಕೆ.ಅಡ್ವಾಣಿ ಬಿಜೆಪಿ ಕಟ್ಟಿ ಕಟ್ಟಿ ಸತ್ತ, ನರೇಂದ್ರ ಮೋದಿ ಪ್ರಧಾನಿ ಆಗಿಬಿಟ್ಟ. ದೇವೆಗೌಡರ ಕ್ಯಾಬಿನೆಟ್ ನಲ್ಲಿ ನಾನು ಮಿನಿಸ್ಟರ್ ಆಗಿದ್ದವನು. ಈ ಕುಮಾರಸ್ವಾಮಿ ನನ್ನ ಪಕ್ಕ ನಿಲ್ಲೋದಕ್ಕೂ ಹೆದರುತ್ತಿದ್ದ. ಏನ್ ಮಾಡೊದು ಅವನ ಹಣೆ ಬರಹದಲ್ಲಿ ಬರೆದಿತ್ತು, ಮುಖ್ಯಮಂತ್ರಿ ಆಗಿಬಿಟ್ಟ ಎಂದಿದ್ದಾರೆ.
ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದು ಎರಡು ಭಾರಿ ಸಿಎಂ ಆಗಿದ್ದಾರೆ. ಕಾಂಗ್ರೆಸ್ನ ಹಳೆ (ಮೂಲ) ಮಂದಿ ಏನಂತಿರಬಹುದು? ಇದೆಲ್ಲಾ ಮನುಷ್ಯನ ಅದೃಷ್ಟ ಎಂದು ಹೇಳಿದ್ದಾರೆ. ನನ್ನ ಹಿಂದೆ ಓಡಾಡಿದವರೆಲ್ಲಾ ಮಂತ್ರಿ ಆಗಿದ್ದಾರೆ. ಅವರ ಅಪ್ಪಂದಿರ ಜತೆ ನಾನು ಕೆಲಸ ಮಾಡಿದವನು. ಇವರು, ಈಗ ನಮ್ಮ ಮುಂದೆ ಧಿಮಾಕು ಮಾಡ್ಕೊಂಡು ಓಡುತ್ತಿದ್ದಾರೆ. ಎಸ್.ಆರ್ ಬೊಮ್ಮಾಯಿ ಅವರ ಅವಧಿಯಲ್ಲಿ ನಾನು ಎಂಎಲ್ಎ, ಎಂಪಿ ಆಗಿದ್ದೆ. ದೇವೆಗೌಡರ ಕ್ಯಾಬಿನೆಟ್ ನಲ್ಲಿ ನಾನು ಮಿನಿಸ್ಟರ್ ಆಗಿದ್ದವನು ಎಂದು ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


