ಬೆಂಗಳೂರು: ಮಹಾತ್ಮ ಗಾಂಧಿ ಅವರ 154ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬಿಬಿಎಂಪಿ ನಗರದಲ್ಲಿ ‘1ನೇ ತಾರೀಖು, ಒಂದು ಗಂಟೆ- ಸ್ವಚ್ಛತೆಗಾಗಿ ಶ್ರಮದಾನ’ (ಭಾನುವಾರ) ಕಾರ್ಯಕ್ರಮ ಆಯೋಜಿಸಿದೆ.
ಸ್ವಚ್ಛ ಸರ್ವೇಕ್ಷಣ್-2023′ ಅನುಸರಣೆಗಾಗಿ ಬಿಬಿಎಂಪಿಯ ಪ್ರತಿ ವಾರ್ಡ್‌ನಲ್ಲಿ ಕನಿಷ್ಠ ಎರಡು ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತದೆ. ಎನ್ ಜಿಒ, ಎಸ್ ಎ ಜಿ, ಎನ್ ಎಸ್ಎಸ್ ಅಥವಾ ಎನ್ ಸಿಸಿ ಕೆಡೆಟ್ ಗಳು, ಆರ್ ಡಬ್ಲ್ಯುಎ, ಸ್ವಯಂ ಸೇವಕರು, ಸಾರ್ವಜನಿಕರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ.


