ಸುಮಾರು 38 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‌ಗಳ ಮರುವಿಂಗಡಣೆ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2011ಸಾಲಿನ ಜನಗಣತಿ ಪ್ರಕಾರ 243ವಾರ್ಡ್ ನಿಗದಿ ಮಾಡಲಾಗಿದ್ದು, ಪ್ರತಿ ವಾರ್ಡ್ ನಲ್ಲಿ ೩೮ ಸಾವಿರ ಆಸುಪಾಸಿನಲ್ಲಿ ಜನಸಂಖ್ಯೆ ಇರಲಿದೆ ಎಂದು ಹೇಳಿದರು.
ಕರಡು ಪ್ರತಿಯನ್ನು ಪ್ರಕಟಿಸಿ ಇನ್ನೆರಡು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದರು. ನಗರದಲ್ಲಿ ಮಳೆ ಕುರಿತು ಪ್ರತಿಕ್ರಿಯಿಸಿದ ಅವರು, ಮೇ ತಿಂಗಳಿನಲ್ಲಿ ಒಂದು ವಾರ ಸತತ ಮಳೆ ಸುರಿದಿದೆ. ನಾಲ್ಕೈದು ದಿನದಿಂದ ಭರದಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಸಾಗುತ್ತಿದೆ. ಇದೇ ತಿಂಗಳ ೬ನೇ ನೇ ತಾರೀಖಿನ ಒಳಗೆ ರಸ್ತೆ ಗುಂಡಿ ಮುಕ್ತ ಮಾಡಲಾಗುವುದು ಎಂದು ಹೇಳಿದರು.
ನಗರದಲ್ಲಿರುವ ಗುಂಡಿಗಳ ಸರಾಸರಿ ಅಳತೆ ಎರಡು ಅಡಿ ವಿಸ್ತೀರ್ಣವಿದೆ ಎಂದ ಅವರು, ಪ್ರತಿ ವಾರ್ಡ್ ಗೆ ೩೦ ಲಕ್ಷ ರಸ್ತೆ ಗುಂಡಿ ಮುಚ್ಚಲು ಮೀಸಲಿಡಲಾಗಿದೆ.ಹೀಗಾಗಿ, ಶೀಘ್ರದಲ್ಲೇ ರಸ್ತೆ ಗುಂಡಿ ಮುಚ್ಚಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹೈ ಕೋರ್ಟ್ ನಲ್ಲಿ ರಸ್ತೆ ಗುಂಡಿ ವಿಚಾರದಲ್ಲಿ ಹಲ್ಲೆ ವಿಚಾರ ಪ್ರಸ್ತಾಪಿಸಿದ ಅವರು, ವಿಶೇಷ ಆಯುಕ್ತ ರವೀಂದ್ರ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು.ಕಂಪನಿ ಹಾಗೂ ಪ್ರಹ್ಲಾದ್ ಗೆ ನೊಟೀಸ್ ನೀಡಲಾಗಿದೆ. ವಿಚಾರಣೆಯನ್ನು ತ್ವರಿತ ಗತಿಯಲ್ಲಿ ನಡೆಸಲಾಗುವುದು.
ಅಲ್ಲದೆ, ರಸ್ತೆ ಗುಂಡಿ ಮುಚ್ಚುವ ಪೈಥಾನ್ ನಿರ್ವಹಣೆ ಹೊಣೆಯಿಂದ ಪ್ರಹ್ಲಾದ್ ಬಿಡುಗಡೆ ಮುಖ್ಯ ಇಂಜಿನಿಯರ್ ಲೊಕೇಶ್ ಹೆಗಲಿಗೆ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದರು.ಇಂದಿರಾ ಕ್ಯಾಂಟೀನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಸ್ಕಾನ್ ಗೆ ಟೆಂಡರ್ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ನಗರದಲ್ಲಿ ನಾಯಿ ಹಾವಳಿ ಹೆಚ್ಚಳ ವಿಚಾರದಲ್ಲೂ ಇದೂವರೆಗೂ ಮೂರು ಪ್ರಕರಣಗಳ ದಾಖಲಾಗಿವೆ.ಚಿಕಿತ್ಸೆ ಪಡೆಯುವವರಿಗೆ ೫ ಸಾವಿರದ ವರೆಗೂ ಚಿಕಿತ್ಸೆ ಪಾಲಿಕೆ ವತಿಯಿಂದ ನೀಡಲಾಗಿದೆ. ಇನ್ನೂ, ನಗರದಲ್ಲಿ ಕೋವಿಡ್ ನಲ್ಲಿ ಸ್ವಲ್ಪ ಏರಿಕೆ ಆಗಿದೆ.ಆದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ತುಂಬಾ ಕಡಿಮೆಯಾಗುತ್ತಿದೆ.ಸದ್ಯ ೧೫ ಸಾವಿರ ಪರೀಕ್ಷೆ ನಡೀತಾ ಇದ್ದು, ಇದರ ಸಂಖ್ಯೆ2oಸಾವಿರಕ್ಕೆ ಟೆಸ್ಟಿಂಗ್ ಏರಿಕೆ ಮಾಡುವ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಬಿಬಿಎಂಪಿ ಶಾಲೆಗಳಿಗೆ ಇನ್ನೂ ಶೂ, ಬಟ್ಟೆ ನೀಡಿಲ್ಲ. ಟೆಂಡರ್ ನಲ್ಲಿ ಕೆಲ ಗೊಂದಲ ಆಗಿದ್ದರಿಂದ ವಿಳಂಬವಾಗಿದೆ. ಶೀಘ್ರದಲ್ಲೇ ನೀಡುವ ಕುರಿತಂತೆ ಕ್ರಮ ಪಠ್ಯ ಪುಸ್ತಕ ಬಂದ ಮೇಲೆ ಶಿಕ್ಷಕರಿಗೆ ತರಬೇತಿ ನೀಡಲಾಗುವುದು ತುಷಾರ್ ಗಿರಿನಾಥ್ ಹೇಳಿದರು.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


