ತಿಪಟೂರು: ಗ್ರಾಮೀಣ ಭಾಗದ ಯುವಕ-ಯುವತಿಯರಲ್ಲಿ ಪ್ರತಿಭೆಗಳಿದ್ದರೂ, ಅದನ್ನೂ ತೋರ್ಪಡಿಸುವ ಕೌಶಲ್ಯವಿಲ್ಲ. ಇಂತಹ ಯುವಕ-ಯುವತಿಯರ ಅನುಕೂಲಕ್ಕಾಗಿ ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಅಸಂಘಟಿತ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಾಂತಕುಮಾರ್ ಹೇಳಿದರು.
ನಗರದಲ್ಲಿನ ಒಕ್ಕಲಿಗರ ಭವನದಲ್ಲಿ ಕೆ.ಟಿ.ಶಾಂತಕುಮಾರ್ ಅವರು ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿ, ಕಲ್ಪತರು ಜನತೆಯ ಒತ್ತಾಯದ ಮೇರೆಗೆ ಮೂರನೇ ಬಾರಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಕಳೆದ ಎರಡು ಉದ್ಯೋಗ ಮೇಳದಲ್ಲಿ ತಿಳಿದು ಬಂದಿದ್ದೇನೆಂದರೆ, ಗ್ರಾಮೀಣ ಭಾಗದ ಯುವಕ-ಯುವತಿಯರಲ್ಲಿ ಪ್ರತಿಭೆ ಇದೆ. ಆದರೆ ತೋರ್ಪಡಿಸುವ ಧೈರ್ಯ, ಕೌಶಲ್ಯವಿಲ್ಲ. ಯಾವ ಯಾವ ಕೋರ್ಸ್ ಗಳನ್ನು ತೆಗೆದುಕೊಂಡರೆ ಮುಂದೆ ಅನುಕೂಲವಾಗಲಿದೆ ಎಂಬ ಬಗ್ಗೆ ಯುವಕ ಯುವತಿಯರಿಗೆ ಗೊಂದಲವಿದೆ ಎಂದು ಅವರು ಹೇಳಿದರು.
ಗ್ರಾಮೀಣ ಭಾಗದ ಯುವಕ-ಯುವತಿಯರ ಅನುಕೂಲಕ್ಕಾಗಿ ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದ್ದೇವೆ. ಈ ಉದ್ಯೋಗ ಮೇಳದಲ್ಲಿ ಸುಮಾರು 80ಕ್ಕೂ ಅಧಿಕ ಕಂಪೆನಿಗಳು ಭಾಗಿಯಾಗಿವೆ ಎಂದು ಕೆ.ಟಿ.ಶಾಂತಕುಮಾರ್ ಇದೇ ವೇಳೆ ತಿಳಿಸಿದರು.
ಇನ್ನೂ ಕೆರೆಗೋಡಿ ರಂಗಾಪುರ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ, ಉದ್ಯೋಗಾಕಾಂಕ್ಷಿ ಯುವಕ-ಯುವತಿಯರಿಗೆ ಆಶೀರ್ವಾದಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ಲಕ್ಷ್ಮೀನಾರಾಯಣ, ಜಿಲ್ಲಾ ಅಧ್ಯಕ್ಷ ಶಿವ ಪ್ರಕಾಶ್, ಕಿರುತೆರೆ ನಿರ್ದೇಶಕ ಮಧು ಹೆಗಡೆ, ವಿಕ್ರಂ ಸುರಿ ನಮಿತಾ ರಾವ್ ಸುದರ್ಶನ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ವರದಿ: ಮಂಜು ಗುರುಗದಹಳ್ಳಿ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700