ಸರಗೂರು: ಜಮೀನಿನಲ್ಲಿ ಜಾನುವಾರುಗಳನ್ನು ಹಾಗೂ ಮೇಕೆಗಳನ್ನು ಮೇಯಿಸಲು ರೈತನ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ಜಯಲಕ್ಷೀಪುರ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ಎಂ.ಸಿ.ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಲಕ್ಷೀಪುರ ಗ್ರಾಮದ ರೈತ ಪ್ರಕಾಶ್ (35) ಕರಡಿ ದಾಳಿಗೆ ಒಳಗಾದವರು. ಜಾನುವಾರುಗಳನ್ನು ಜಮೀನಿನಲ್ಲಿ ಮೇಯಿಸಲು ಹೋಗಿದ್ದ ಪೊದೆಯಲ್ಲಿದ್ದ ಕರಡಿ ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿದೆ. ಅವರ ಚೀರಾಟದಿಂದ ಅಕ್ಕ ಪಕ್ಕದ ಜಮೀನಲ್ಲಿದ್ದ ರೈತರು ಬಂದು ಕರಡಿಯನ್ನು ಓಡಿಸಿದ್ದಾರೆ. ಗಾಯಾಳುಗೆ ಕೈ ಕಾಲು ಗಾಯಗೊಂಡಿದ್ದ ರೈತ ಪ್ರಕಾಶ್ ಅವರನ್ನು ಹೆಡಿಯಾಲ ವಲಯದ ಅರಣ್ಯ ಎಸಿಎಫ್ ಸತೀಶ್ ವರಿಗೆ ಗಮನಕ್ಕೆ ಬಂದ ಕೂಡಲೇ ಹಾಗೂ ಅರಣ್ಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಸರಗೂರು ಪಟ್ಟಣದ ವಿವೇಕಾನಂದರ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಬಂದ ಕೂಡಲೇ ಗ್ರಾಮಸ್ಥರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಜಮೀನಿಗೆ ರೈತರು ಮತ್ತು ಹೆಂಗಸರು ಜಮೀನಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತರಾಟೆ ತೆಗೆದುಕೊಂಡರು.
ನಂತರ ಮಾತನಾಡಿದ ಗ್ರಾಮದ ಮುಖಂಡ ವೆಂಕಟರಾಮು, ನಮ್ಮ ಗ್ರಾಮದ ದಟ್ಟ ಕಾಡಂಚಿನ ಭಾಗದಲ್ಲಿ ಇದೆ ಅಗಲು ಹಾಗೂ ರಾತ್ರಿ ಎನ್ನದೆ ಕಾಡು ಪ್ರಾಣಿಗಳು ದಿನನಿತ್ಯ ಗ್ರಾಮದ ಒಳಗಡೆ ಹಾಗೂ ಜಮೀನುಗಳಿಗೆ ಬರುತ್ತಿದ್ದೇವೆ.ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಗ್ರಹಿಸಿದರು.
ಕಾಡು ಪ್ರಾಣಿಗಳಿಂದ ಶಾಲೆ ಕಾಲೇಜಿಗೆ ಮಕ್ಕಳು ತಪ್ಪಿಸಿಕೊಂಡು ಹೋಗವ ಪರಿಸ್ಥಿತಿ ಬಂದಿದೆ. ಇನ್ನೂ ಮುಂದೆ ನಮ್ಮ ಮಕ್ಕಳನ್ನು ಯಾವ ಧೈರ್ಯದಿಂದ ಶಾಲೆಗೆ ಕಳಿಸಬೇಕು ಹೇಳಿ. ನಾವುಗಳು ಜಮೀನಲ್ಲಿ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಕಾಡು ಪ್ರಾಣಿಗಳು ಬಿಟ್ಟುತ್ತಿಲ್ಲ. ನಾಶ ಮಾಡುತ್ತಿದ್ದೇವೆ.ನಾಶ ಮಾಡಿರುವ ಬೆಳೆಗೆ ಸೂಕ್ತ ಪರಿಹಾರವನ್ನು ನೀವುಗಳು ನೀಡುತ್ತಿಲ್ಲ. ಕಾಡು ಪ್ರಾಣಿಗಳನ್ನು ಕಾಡಿಗೆ ಹೋಡಿಸಲು ಮುಂದಾಗಿ ಎಂದು ಹೇಳಿದರು.
ನಂತರ ಮಾತನಾಡಿದ ಹೆಡಿಯಾಲ ವಲಯದ ಅರಣ್ಯಾಧಿಕಾರಿ ಸತೀಶ್ ರವರು ಕರಡಿ ದಾಳಿಗೆ ಗಾಯಗೊಂಡ ಒಳಗಾದ ರೈತ ಪ್ರಕಾಶ್ ರವರಿಗೆ ಹೆಚ್ಚಿನ ರೀತಿಯಲ್ಲಿ ನಮ್ಮ ಇಲಾಖೆ ವತಿಯಿಂದ ಚಿಕಿತ್ಸೆ ಕೊಡಿಸಲು ಮುಂದಾಗಿದ್ದೇವೆ. ಅದರಂತೆ ಸರ್ಕಾರ ಮಟ್ಟದಿಂದ ಪರಿಹಾರ ನೀಡುವ ಬಗ್ಗೆ ಮಾಹಿತಿಯನ್ನು ನಮ್ಮ ಮೇಲಾಧಿಕಾರಿ ರವರಿಗೆ ಗಮನಕ್ಕೆ ತರಲಾಗುವುದು ಎಂದರು.
ವಲಯದ ವ್ಯಾಪ್ತಿಯ ಕಾಡಂಚಿನ ಭಾಗದಲ್ಲಿರುವ ಗ್ರಾಮಗಳು ಹೆಚ್ಚು ಇವೆ.ಅದರೆ ಮುಂದಿನ ದಿನಗಳಲ್ಲಿ ನಮ್ಮ ಸಿಬ್ಬಂದಿಗಳನ್ನು ನೇಮಕ ಮಾಡಿ ಕಾಡುಪ್ರಾಣಿಗಳನ್ನು ತಡೆಗಟ್ಟಲು ಮುಂಜಾಗ್ರತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC