ಪಾವಗಡ: ಶನಿವಾರ ರಾತ್ರಿ 8:30 ರ ಸಂದರ್ಭದಲ್ಲಿ ಪಾವಗಡ ಪಟ್ಟಣದ ಅಗ್ನಿಶಾಮಕ ಠಾಣೆಯ ಆವರಣದೊಳಗಡೆ ಕರಡಿಯೊಂದು ನುಗ್ಗಿ ಅವಾಂತರ ಸೃಷ್ಟಿಸಿದೆ.
ಪಾವಗಡ ಪಟ್ಟಣದ ಬಳ್ಳಾರಿ ರಸ್ತೆ ಮಾರ್ಗದ ಎಪಿಎಂಸಿ ಸಮೀಪದಲ್ಲಿ ಅಗ್ನಿಶಾಮಕ ಠಾಣೆ ಇದ್ದು ಈ ಠಾಣೆಗೆ ಒಂದು ಕಡೆ ಕಾಂಪೌಂಡ್ ಇದೆ. ಇನ್ನೊಂದು ಕಡೆಯಲ್ಲಿ ಕಾಂಪೌಂಡ್ ಇಲ್ಲ. ಹೀಗಾಗಿ 24 ಗಂಟೆ ಕರ್ತವ್ಯ ನಿರ್ವಹಿಸುವಂತಹ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಜೀವ ಕೈಯಲ್ಲಿ ಇಟ್ಟುಕೊಂಡು ಕೆಲಸ ಮಾಡುವಂತಹ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದೆ.
ಶಾಸಕರು ಠಾಣೆಯ ಒಂದು ಭಾಗಕ್ಕೆ ಕಾಂಪೌಂಡನ್ನು ನಿರ್ಮಿಸಲು ಕ್ರಮ ವಹಿಸಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ . ಬೆಟ್ಟ ಸಮೀಪದಲ್ಲಿಯೇ ಇರುವುದರಿಂದ ಸಂಜೆಯಾದರೆ ಕರಡಿಗಳು ಬೆಟ್ಟದಿಂದ ಇಳಿದು ಊರಿನ ಮಧ್ಯಕ್ಕೆ ಬರುತ್ತಿರುವುದು ಇತ್ತೀಚೆಗೆ ಸಹಜವಾಗಿದೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx