ಸರಗೂರು: ಶ್ರೀ ಬೇಲದಕುಪ್ಪೆ ಮಹದೇಶ್ವರ ಜಾತ್ರಾ ಮಹೋತ್ಸವ ನಡೆದು ಒಂದು ವಾರದ ನಂತರ ದೇವಸ್ಥಾನದ ಗೋಲಕವನ್ನು ತೆಗೆದು ಏಣಿಕೆ ಮಾಡಲಾಗಿದ್ದು, ಈ ಬಾರಿ ಕೊವಿಡ್ ಸಂಕಷ್ಟದ ನಡುವೆಯೂ 3,81,365 ಲಕ್ಷ ರೂ. ಹಣ ಸಂಗ್ರಹವಾಗಿದೆ.
ಸರಗೂರು ತಾಲ್ಲೂಕಿನ ಹಾದನೂರು ಗ್ರಾಮ ಪಂಚಾಯಿತಿ ಗೆ ಒಳಪಟ್ಟಿರುವ ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರೆ ಈ ಬಾರಿ ಕೊವಿಡ್ ಹಿನ್ನೆಲೆಯಲ್ಲಿ ಸರಳವಾಗಿ ನಡೆದಿತ್ತು. ಜಾತ್ರೆಯ ಬಳಿಕ ಇಂದು ಗೊಲಕವನ್ನು ತೆಗೆದು ಜಾತ್ರೆ ಸಮಿತಿಯವರು ಗ್ರಾಮಸ್ಥರ ಸಮುಖದಲ್ಲಿಯೇ ಎಣಿಕೆ ಮಾಡಿದ್ದಾರೆ.
ಭಕ್ತರಿಂದ ಸಂಗ್ರವಾದ ಹಣವನ್ನು ಇದೇ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕರು ಸಮಿತಿಯ ಖಾತೆಗೆ ಜಮಾ ಮಾಡಿದರು. ಹಣ ಎಣಿಕೆಯ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಭದ್ರತೆ ನೀಡಿದ್ದರು.
ವರದಿ: ಚಂದ್ರ ಹಾದನೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700