ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿ ಬಿ.ಕೋಡಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶೌಚಾಲಯವಿಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಒತ್ತಡಕ್ಕೆ ಭೇಟಿ ನೀಡಿ ಕಣ್ಣೊರೆಸುವ ಕೆಲಸ ಮಾಡಿದ್ದೀರಿ ಎಂದು ಫೋಷಕ ಚಿಕ್ಕೇಗೌಡ ಅಧಿಕಾರಿಗಳನ್ನು ತರಾಟೆಗೆತ್ತಕೊಂಡಿದ್ದು, ಹೆಣ್ಣು ಮಕ್ಕಳ ಕಿರಿಕಿರಿ ಅರ್ಥವಾಗುತ್ತಿಲ್ಲ. ನಿಮ್ಮ ಮನೆ ಮಕ್ಕಳನ್ನು ಇಲ್ಲಿಗೆ ಸೇರಿಸಿ ಆಗ ಬಡ ಮಕ್ಕಳ ಸಮಸ್ಯೆ ತಿಳಿಯುತ್ತೆ ಎಂದು ಸ್ಥಳೀಯ ಪೋಷಕ ಚಿಕ್ಕೇಗೌಡ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಪಟ್ಟಣದ ಬಿಇಓ ಕಚೇರಿಯಲ್ಲಿ ನಡೆಯಿತು.
ಸರ್ಕಾರಿ ಶಾಲೆಯಲ್ಲಿ ಕೃಷಿಕ ವರ್ಗದ ಮಕ್ಕಳೇ ಹೆಚ್ಚಾಗಿ ಕುಗ್ರಾಮದ ಶಾಲೆಗಳು ಬಳಸುತ್ತಾರೆ. ಶೌಚಾಲಯವಿಲ್ಲದೆ ಇಲ್ಲಿನ ಮಕ್ಕಳು ಬೇಲಿ ಸಾಲಿಗೆ ಸರದಿಯಲ್ಲಿ ಹೋಗುತ್ತಾರೆ. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಪರದಾಟ ಹೇಳತೀರದು. ಶೌಚಾಲಯ ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿತ್ತು. ವಿಡಿಯೋ ಸಂವಾದದಲ್ಲಿ ಸಚಿವರೇ ಆಸಕ್ತಿ ವಹಿಸಿ ಬಿಇಒ ಗೆ ಹೇಳಿ . ನಾಲ್ಕು ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಶೌಚಾಲಯ ಕುರಿತು ಯಾರ ಬಳಿ ತೆರಳಬೇಕು. ಕಣ್ಣೊರೆಸುವ ನಿಟ್ಟಿನಲ್ಲಿ ಭೇಟಿ ನೀಡಿ ತೆರಳಿದ್ದು ಬಿಟ್ಟರೆ ಅಲ್ಲಿ ಸರಿಯಿದೆ ಎನ್ನುವ ಮಾತುಗಳು ಬೇರೆ. ಛೇ.. ಇನ್ನೇನು ಮಾಡಬೇಕು ಎಂದು ಪ್ರಶ್ನಿಸಿದಾಗ ಪಕ್ಕದಲ್ಲಿದ್ದ ಬಿಆರ್ ಸಿ ಮಧುಸೂದನ್ ಏನೋ ಪ್ರತಿಕ್ರಿಯೆ ನೀಡದೆ ಪಕ್ಕಕ್ಕೆ ನಡೆದಿದ್ದೇ ಅವರ ಕೆಲಸಕ್ಕೆ ಹಿಡಿದ ಕನ್ನಡಿಯಾಗಿದೆ.
ಕರೋನ ಸೋಂಕಿನಿಂದ ಸೊರಗಿದ್ದ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಬೇಕಿದ್ದ ಶಿಕ್ಷಣಾಧಿಕಾರಿಗಳು ಕನಿಷ್ಠ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ಮತ್ತು ಶಾಲಾ ಆವರಣದಲ್ಲಿ ಉತ್ತಮ ಪರಿಸರ ನೀಡಲಾಗದ ಇಲಾಖೆ ಮಕ್ಕಳ ಉತ್ತಮ ಭವಿಷ್ಯ ಹೇಗೆ ನಿರ್ಮಾಣ ಮಾಡುತ್ತೀರಾ..? ಎಂದು ಫೋಷಕ ಚಿಕ್ಕೇಗೌಡ ತರಾಟೆಗೆತ್ತಿಕೊಂಡರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5