ಮುಧೋಳ: ಇಂದು ಬೆಳ್ಳಂಬೆಳಗ್ಗೆ ಕಾರು ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯು ಶಿರೋಳ ಕ್ರಾಸ್ ಬಳಿ ನಡೆದಿದ್ದು, ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದಾರೆ.
ಸಿದ್ದರಾಯ ತೇಲಿ (36), ಬಾಲಪ್ಪ ಸಂಡಗಿ (34), ಹನಮಂತ ಗನಗಾರ (21), ರಿಯಾಜ ಜಾಲಗೇರ (25) ಮೃತ ದುರ್ದೈವಿಗಳು. ಇವರು ಜಮಖಂಡಿ ತಾಲೂಕಿನ ಗೋಠೆ ಗ್ರಾಮದವರೆಂದು ಹೇಳಲಾಗುತ್ತಿದೆ. ಇವರು ನ್ಯಾಯಲಯದ ವ್ಯಾಜ್ಯದ ನಿಮಿತ್ತ ಗೋಠಯಿಂದ ಧಾರವಾಡದ ಹೈಕೋರ್ಟ್ ಗೆ ತೆರಳುತ್ತಿದ್ದರು.
ಈ ಸಮಯದಲ್ಲಿ ಬೆಳಗಾವಿಯಿಂದ ಕಲಬುರಗಿ ಮಾರ್ಗವಾಗಿ ತೆರಳುತಿದ್ದ ಬಸ್ ಒಂದು, ಕಬ್ಬಿನ ಟ್ರ್ಯಾಕ್ಟರ್ ಓವರ್ ಟೆಕ್ ಮಾಡುವ ಭರದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮುಧೋಳ ಠಾಣೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy