ಬೆಂಗಳೂರು: ಸ್ಯಾಂಕಿ ರಸ್ತೆಯಲ್ಲಿರುವ ಜಗದೀಶ್ ಹೋಟೆಲ್ ನಲ್ಲಿ 27 ವರ್ಷದ ಉಜ್ಬೇಕಿಸ್ತಾನ್ ಮಹಿಳೆಯೊಬ್ಬಳು ತನ್ನ ಕೋಣೆಯೊಳಗೆ ಸಾವನ್ನಪ್ಪಿದ ಪ್ರಕರಣವನ್ನು ಬೆನ್ನು ಹತ್ತಿದ್ದ ಬೆಂಗಳೂರು ಪೊಲೀಸರು ಇದೀಗ ದುಷ್ಕರ್ಮಿಗಳನ್ನ ಪತ್ತೆ ಹಚ್ಚಿದ್ದಾರೆ.
ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಹೋಟೆಲ್ ನ ಇಬ್ಬರು ಹೌಸ್ ಕೀಪಿಂಗ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಜರೀನಾ ಉತ್ಕಿರೋವ್ನಾ ಎಂದು ಗುರುತಿಸಲಾದ ವಿದೇಶಿ ಮಹಿಳೆ ಸಾಕಷ್ಟು ಹಣವನ್ನು ಹೊಂದಿದ್ದು, ಅವಳನ್ನು ದರೋಡೆ ಮಾಡುವುದರಿಂದ ತಾನು ತಕ್ಷಣವೇ ಶ್ರೀಮಂತರಾಗಬಹುದು ಎಂದು ಆರೋಪಿಗಳು ಭಾವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್ ರೂಮ್ ನಲ್ಲಿ ಜರೀನಾ , ಮಾರ್ಚ್ 13ರ ರಾತ್ರಿ ಮುಖದ ಮೇಲೆ ಗಾಯಗಳು ಮತ್ತು ಮೂಗಿನಿಂದ ರಕ್ತಸ್ರಾವದೊಂದಿಗೆ ಶವವಾಗಿ ಪತ್ತೆಯಾಗಿದ್ದರು . ಈ ವೇಳೆ ಆಕೆಯ ಐಫೋನ್ ಮತ್ತು ಹಣ ರೂಮ್ ನಿಂದ ನಾಪತ್ತೆಯಾಗಿದ್ದವು.
ತನಿಖೆಯ ನಂತರ, ನಗರ ಪೊಲೀಸರು 22 ವರ್ಷದ ಅಮೃತ್ ಸೋನಾ ಮತ್ತು 26 ವರ್ಷದ ರಾಬರ್ಟ್ ಎಂಬುವರನ್ನು ಬಂಧಿಸಿದ್ದಾರೆ. ಇಬ್ಬರೂ ಅಸ್ಸಾಂ ಮೂಲದವರಾಗಿದ್ದು ಸುಮಾರು ಒಂದು ವರ್ಷದಿಂದ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಂದ ಕಳವು ಮಾಡಿದ ಫೋನ್ ಮತ್ತು 20,000 ರೂ. ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಬ್ಬರು ಆರೋಪಿಗಳು ನಗರದಿಂದ ಪರಾರಿಯಾಗುವ ಮೊದಲೇ ಅವರನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


