ಫೇಸ್ ಬುಕ್ ಗೆಳತಿಯ ಒಡನಾಟದಿಂದ ವಿಜಯಪುರ ಜಿಲ್ಲೆಯ ಯುವಕ 40 ಲಕ್ಷ ರೂ. ಪಂಗನಾಮ ಹಾಕಿಸಿಕೊಂಡಿದ್ದ ಪ್ರಕರಣದಲ್ಲಿ ಹಾಸನದ ಮಹಿಳೆಯನ್ನು ವಿಜಯಪುರ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಹಾಸನದ ಮಂಜುಳಾ ಬಂಧಿತ ಆರೋಪಿ. ಈ ವಂಚನೆಯ ಹಿಂದೆ ಆಕೆಯ ಗಂಡನ ಕೈವಾಡವಿದೆ ಎಂಬುದು ಬಯಲಾಗಿದೆ.
ವಿಜಯಪುರ ಸಿಂದಗಿ ಪಟ್ಟಣದ ಪರಮೇಶ್ವರ್ ಹಿಪ್ಪರಗಿ ಹೈದ್ರಾಬಾದ್‌ನಲ್ಲಿ ಕಟ್ಟಡ ಕಾರ್ಮಿಕರ ಸೂಪರ್ ವೈಸರ್ ಆಗಿದ್ದು, 30 ಸಾವಿರ ಸಂಬಳ ಬರುತ್ತಿತ್ತು. ಫೇಸ್‌ಬುಕ್ ಮೂಲಕ ಫ್ರೆಂಡ್‌ಶಿಪ್ ರಿಕ್ವೆಸ್ಟ್ ಕಳುಹಿಸಿ ಪರಿಚಯ ಮಾಡಿಕೊಂಡ ಹಾಸನ ಮೂಲದ ಮಂಜುಳಾ ಪ್ರೀತಿಯ ನಾಟಕವಾಡಿದ್ದಳು.
ಐಎಎಸ್ ಓದುತ್ತಿರುವುದಾಗಿ ಹೇಳಿದ್ದಳು. ಅವಳ ಓದಿಗಾಗಿ ತಾನು ಕೂಡಿಟ್ಟಿದ್ದ 5 ಲಕ್ಷ ರೂ., ಒಂದು ಪ್ಲಾಟ್ ಸೇರಿ ಎಲ್ಲವನ್ನು ಮಾರಿ ಹಣ ಕಳುಹಿಸಿದ್ದನು. ಹಣಕ್ಕಾಗಿ ಪೀಡಿಸುವುದು ಹೆಚ್ಚಾದಾಗ ಆನ್ಲೈನ್ ವಂಚನೆಗೆ ಒಳಗಾಗಿದ್ದೇನೆ ಎಂದು ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ.
ಸಾಮಾಜಿಕ ಜಾಲತಾಣದ ಜಾಡು ಹಾಗೂ ಪೋಲನ್ ನಂಬರ್ ಟ್ರೇಸ್ ಮಾಡಿಕೊಂಡು ಹೋದ ಪೊಲೀಸರು ಎರಡು ವಾರದಲ್ಲಿ ಹಾಸನದ ಮಂಜುಳಾ ಎಂಬಾಕೆಯನ್ನು ಬಂಧಿಸಿದ್ದಾರೆ.
ಫೇಸ್‌ಬುಕ್ ಮೂಲಕ ವಂಚನೆ ಮಾಡಿದ ಸ್ವಾಮಿ ಮತ್ತು ಮಂಜುಳಾ ದಂಪತಿ ಚನ್ನರಾಯಪಟ್ಟಣ ತಾಲೂಕು ದಾಸರಹಳ್ಳಿ ಗ್ರಾಮದವರು. ಮಂಜುಳಾ ಸಿಂದಗಿ ಪಟ್ಟಣದ ಪರಮೇಶ್ವರ್ ಹಿಪ್ಪರಗಿ ಎಂಬಾತನಿಗೆ ಬೆತ್ತಲೆ ಸ್ನಾನ ಮಾಡುವಂತೆ ಒತ್ತಾಯಿಸಿ ವೀಡಿಯೊ ಮಾಡಿ ಬಳಿಕ ಹಣಕ್ಕಾಗಿ ಡಿಮ್ಯಾಂಡ್ ಇಟ್ಟು ಹಂತ ಹಂತವಾಗಿ ಲಕ್ಷಾಂತರ ರೂ. ಪಡೆದಿದ್ದಳು.
ವಿಚಾರಣೆ ವೇಳೆ ಗಂಡನೂಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಆರೋಪಿ ಬಾಯಿ ಬಿಟ್ಟಿದ್ದಾಳೆ. 40 ಲಕ್ಷ ರೂ. ಹಣದಲ್ಲಿ ಆರೋಪಿ ಮಂಜುಳಾ 100 ಗ್ರಾಂ ಬಂಗಾರ, ಹುಂಡೈ ಕಾರು, ಬೈಕ್ ಖರೀದಿ ಮಾಡಿದ್ದಳು. ಜೊತೆಗೆ, ಆ ಯುವಕ ಕಳುಹಿಸುತ್ತಿದ್ದ ಹಣದಲ್ಲಿಯೇ ಅವರ ಊರಲ್ಲಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಳು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy