ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಳಿಯಾರ್ ರಸ್ತೆಯಲ್ಲಿರುವ ಭಗವತಿ ಪೌದಿಯಮ್ಮನ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಭಗವತಿ ಅಮ್ಮನವರ 3 ನೇ ವರ್ಷದ ಕುಂಭಾಭಿಷೇಕ ಪ್ರಯುಕ್ತವಾಗಿ ಭಕ್ತಾದಿಗಳಿಂದ ವಿಶೇಷ ಪೂಜೆ , ದೇವಿಯ ಮೆರವಣಿಗೆ, ದೇವಿಗೆ ಭಜನೆಗಳು, ಸರಣಿ ಚಪ್ಪಾಳೆ ಹಾಗೂ ಭಕ್ತಾಧಿಗಳಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯೂರು ತಾಲ್ಲೂಕಿನ ಮಾಜಿ ಸಚಿವ ಡಿ.ಸುಧಾಕರ್ ಹಾಗೂ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಖಾದಿ ರಮೇಶ್ , ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲ್ಲೂಕು ಅಧ್ಯಕ್ಷ ಶಿವಕುಮಾರ್ ವಿ ., ನಗರಸಭೆ ಉಪಾಧ್ಯಕ್ಷರಾದ ಪ್ರಕಾಶ್ ಬಿ .ಎನ್. , ಜ್ಞಾನೇಶ್ ಹಾಗೂ ಎಸ್. .ಎಸ್. ಎ.ಟಿ. ಲಾರಿ ಟ್ರಾನ್ಸ್ ಪೋರ್ಟ್ ಮಾಲಿಕರಾದ ಸೆಲ್ವಂ ಹಾಗೂ ಕುಟುಂಬಸ್ಥರು , ನಗರಸಭೆ ಸದಸ್ಯೆ ಸುರೇಖಾ ಮಣಿ ಹಾಗೂ ದೇವಸ್ಥಾನದ ಅರ್ಚಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದರು .
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy