ತಿಪಟೂರು: ತಾಲ್ಲೂಕಿನ ಸಾರ್ಥವಳ್ಳಿ ವಲಯದ ಹಾಲೇನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಾರತಾಂಬೆ ಸಂಘದ 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ವಾರ್ಷಿಕೋತ್ಸವವನ್ನುದ್ದೇಶಿಸಿ ಮಾತನಾಡಿದ ತಾಲ್ಲೂಕು ಯೋಜನಾಧಿಕಾರಿ ಉದಯ್, ಭಾರತಾಂಬೆ ತಂಡವು ತಾಲ್ಲೂಕಿನಲ್ಲಿ ಯೋಜನೆಯ ನಿಯಮಾನುಸಾರ ಕ್ರಮವತ್ತಾಗಿ ಶಿಸ್ತಿನಿಂದ ಸಂಘಟನೆ ಮಾಡುತ್ತಿದ್ದು, ತಾಲ್ಲೂಕಿಗೆ ಮಾದರಿ ಸಂಘವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಳೆದ ಐದು ವರ್ಷದಲ್ಲಿ 64 ಸಾವಿರ ಉಳಿತಾಯ ಹಾಗೂ ರಾಷ್ಟ್ರೀಕೃತ ಬ್ಯಾಂಕಿನ ಮೂಲಕ ರೂ. 10 ಲಕ್ಷಕ್ಕೂ ಮೀರಿ ಆರ್ಥಿಕ ವ್ಯವಹಾರ ಮಾಡಿರುವುದು ಶ್ಲಾಘನೀಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೇವಲ ರೂ. 107 ಶುಲ್ಕದೊಂದಿಗೆ ಪಾನ್ ಕಾರ್ಡ್ ಮಾಡಿಸುವುದು ವಿಶೇಷವಾಗಿ ಯೋಜನೆಯಿಂದ ಸಂಪೂರ್ಣ ಉಚಿತವಾಗಿ ಆಯುಷ್ಮಾನ್ ಕಾರ್ಡ್, ಈ–ಶ್ರಮ್, ವಿಶ್ವಕರ್ಮ ಯೋಜನೆಯಿದ್ದು ಜೊತೆಯಲ್ಲಿ ಪಾಲುದಾರರ ಮಕ್ಕಳು ವೃತ್ತಿಪರ ಕೋರ್ಸ್ ಮಾಡುತ್ತಿದ್ದರೆ ಸುಜ್ಞಾನ ನಿಧಿ ಶಿಷ್ಯವೇತನದ ಅವಕಾಶವಿದ್ದು ಪ್ರಯೋಜನವನ್ನು ಪಡೆದುಕೊಳ್ಳುವ ಬಗ್ಗೆ ಕರೆ ನೀಡಿದರು.
ಭಾರತಾಂಬೆ ತಂಡವು ಭವಿಷ್ಯದ ಮುಂದಿನ ದಿನಗಳಲ್ಲಿ ತಾಲ್ಲೂಕಿಗೆ ಮಾದರಿಯಾಗಿ ಬೆಳ್ಳಿಹಬ್ಬವನ್ನು ಆಚರಣೆ ಮಾಡುವ ಯೋಗಭಾಗ್ಯ ಭಗವಂತ ಕರುಣಿಸಲೆಂದು ಶುಭ ಹಾರೈಸಿದರು.
ಈ ಸಂದರ್ಭ ಯೋಜನೆಯ ತಾಲ್ಲೂಕು ಕೃಷಿ ಅಧಿಕಾರಿ ಪ್ರಮೋದ್ ಕುಮಾರ್, ಸೇವಾಪ್ರತಿನಿಧಿ ನೇತ್ರಾ, ಸಿ ಎಸ್ ಸಿ ಸೇವಾಧರರಾದ ಕಾರ್ತಿಕ್ ಹಾಗೂ ಭಾರತಾಂಬೆ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC