ತುಮಕೂರು: ಗಂಗಾಮತ ಬೆಸ್ತರ ಕುಲದೇವತೆಯಾದ ಗಂಗಾಮಾತೆಯನ್ನು ಕೇಳಲಾಗದ ಭಾಷೆಯಲ್ಲಿ ಬರೆದು ಅವಮಾನ ಮಾಡಲಾಗಿದೆ ಎಂದು ತುಮಕೂರು ಜಿಲ್ಲಾ ಗಂಗಾಮತಸ್ಥ ಸಮಾಜದ ವತಿಯಿಂದ ಸಾಹಿತಿ ಬರಗೂರು ರಾಚಂದ್ರಪ್ಪ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಲ್ಲೂರು ಗಂಗಾಮತ ಕ್ಷೇಮಾಭಿವೃದ್ಧಿ ಅಧ್ಯಕ್ಷರಾದ ಕೆ.ಟಿ.ಸೋಮಶೇಖರ್, ಬರಗೂರು ರಾಮಚಂದ್ರಪ್ಪನವರು ನಮ್ಮ ತುಮಕೂರು ಜಿಲ್ಲೆಯ ಕೀರ್ತಿಯನ್ನೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಸ್ಥಾನ ಮಾನ ಪಡೆದ ವ್ಯಕ್ತಿ ಇವರ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಆದರೆ ಇವರು ಬರೆದ ‘ಭರತ ನಗರಿ’ ಕಾದಂಬರಿಯಲ್ಲಿ ಗಂಗೆಯನ್ನು ಅವಮಾನಿಸಿರುವುದನ್ನು ಖಂಡಿಸುತ್ತೇವೆ ಎಂದರು.
ತುಮಕೂರು ಜಿಲ್ಲೆಯ ಗಂಗಾಮತಸ್ಥ ಬೆಸ್ತರ ಸಮಾಜದ ಜಿಲ್ಲಾ ಅಧ್ಯಕ್ಷರಾದ ನಾಗರಾಜ್ ಮಾತನಾಡಿ, ಬರಗೂರು ರಾಮಚಂದ್ರಪ್ಪನವರು ತಪ್ಪು ಒಪ್ಪಿಕೊಂಡು ರಾಜ್ಯದ ಗಂಗಾಮತ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷರಾದ ದಿವಾಕರ್ ಮಾತನಾಡಿ, ಬರಗೂರು ತಮ್ಮ ಕಾದಂಬರಿಯಲ್ಲಿ ಗಂಗೆಯನ್ನು ಹಾದರದ ಗಂಗೆ ಎಂದು ಮೂಲವನ್ನು ತಿರುಚಿ ಬರೆದಿದ್ದಾರೆ. ಬರಗೂರುರವರು ವಿಚಾರವಂತರು ವಾಘ್ಮೀಗಳು ತಿಳಿದವರು ಹೀಗೆ ಮೂಲವನ್ನು ತಿರುಚಿ ಬರೆದಿರುವುದು ತಪ್ಪು, ಸರ್ಕಾರವನ್ನು ಈ ಮುದ್ರಿಸಿದ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರು ತುಮಕೂರು ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಕರಿಯಪ್ಪ, ಕೃಷ್ಣಪ್ಪ, ಶ್ರೀನಿವಾಸ್, ತುರುವೇಕೆರೆ ತಾಲ್ಲೂಕು ಅಧ್ಯಕ್ಷರಾದ ಪಾಂಡುರಂಗ, ಉಪಾನ್ಯಾಸಕರಾದ ಚಂದ್ರಪ್ಪ, ಶಶಿಕುಮಾರ್ , ಸೋಮಶಂಖರ್, ಯುವ ಸಾಹಿತಿ ಕಿರುಚಿತ್ರ ನಿರ್ದೇಶಕ ಅರುಣ್ ಕುಮಾರ್, ಸದಾಶಿವ ಹಾಗೂ ಸಮಾಜದವರು ಭಾಗವಹಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz