nammatumakuru

    Subscribe to Updates

    Get the latest creative news from FooBar about art, design and business.

    What's Hot

    ಚಿನ್ನದ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್ ​​ಗೆ ಜಾಮೀನು ಮಂಜೂರು, ಜೈಲಿನಿಂದ ಬಿಡುಗಡೆ

    April 22, 2026

    ಮಗಳ ಪ್ರಿಯಕರನ ಜತೆ ಸೇರಿ ಅಳಿಯನನ್ನೇ ಕೊಂದ ಅತ್ತೆ: ತುಮಕೂರಿನ ಕೊಡಿಗೇನಹಳ್ಳಿಯಲ್ಲಿ ಘೋರ ಕೃತ್ಯ

    April 22, 2026

    ‘ಅಣ್ಣ’ ಎಂದವನ ಜೊತೆಯೇ ಪತ್ನಿ ಎಸ್ಕೇಪ್: ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತಿಗೆ ಕೈಕೊಟ್ಟ ಮಹಿಳೆ!

    April 22, 2026
    Facebook Twitter Instagram
    ಟ್ರೆಂಡಿಂಗ್
    • ಚಿನ್ನದ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್ ​​ಗೆ ಜಾಮೀನು ಮಂಜೂರು, ಜೈಲಿನಿಂದ ಬಿಡುಗಡೆ
    • ಮಗಳ ಪ್ರಿಯಕರನ ಜತೆ ಸೇರಿ ಅಳಿಯನನ್ನೇ ಕೊಂದ ಅತ್ತೆ: ತುಮಕೂರಿನ ಕೊಡಿಗೇನಹಳ್ಳಿಯಲ್ಲಿ ಘೋರ ಕೃತ್ಯ
    • ‘ಅಣ್ಣ’ ಎಂದವನ ಜೊತೆಯೇ ಪತ್ನಿ ಎಸ್ಕೇಪ್: ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತಿಗೆ ಕೈಕೊಟ್ಟ ಮಹಿಳೆ!
    • ಕೊರಟಗೆರೆ: ಸಾರ್ವಜನಿಕ ಸೇವೆಗೆ ‘ಫ್ರೆಂಡ್ಸ್ ಗ್ರೂಪ್’ನಿಂದ ಉಚಿತ ನೂತನ ತುರ್ತು ವಾಹನ ಸಮರ್ಪಣೆ
    • ಮಹಿಳಾ ಮೀಸಲಾತಿ ವಿರೋಧಿಸುವ ಕಾಂಗ್ರೆಸ್‌ ಗೆ ಮಹಿಳೆಯರ ಶಾಪ ತಟ್ಟಲಿದೆ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
    • ಬೇಸಿಗೆಯಲ್ಲಿ ನೀರಿನ ತೊಂದರೆಯಾಗದಂತೆ ಕ್ರಮವಹಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಟ್ಟುನಿಟ್ಟಿನ ಸೂಚನೆ
    • ತುಮಕೂರು: ಸೌಲಭ್ಯಗಳಿಲ್ಲದ ಪುನೀತ್ ರಾಜ್‌ ಕುಮಾರ್ ಬಡಾವಣೆ; ಪಾಲಿಕೆ ವಿರುದ್ಧ ನಾಗರಿಕರ ಆಕ್ರೋಶ
    • ತುಮಕೂರು: ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಭಾರತದ 72 ವರ್ಷಗಳ ಬಾಕಿ ಉಳಿದಿದ್ದ ಪ್ರಕರಣ ಅಂತಿಮವಾಗಿ ಇತ್ಯರ್ಥ
    ರಾಷ್ಟ್ರೀಯ ಸುದ್ದಿ January 16, 2023

    ಭಾರತದ 72 ವರ್ಷಗಳ ಬಾಕಿ ಉಳಿದಿದ್ದ ಪ್ರಕರಣ ಅಂತಿಮವಾಗಿ ಇತ್ಯರ್ಥ

    By adminJanuary 16, 2023No Comments2 Mins Read
    Bharathada 72 prakarana

    ಭಾರತದ ಅತ್ಯಂತ ಹಳೆಯ ಪ್ರಕರಣ, ಅಂದರೆ 72 ವರ್ಷಗಳ ಹಳೆಯ ಪ್ರಕರಣವನ್ನು ಭಾರತದ ಅತ್ಯಂಹ ಹಳೆಯ ನ್ಯಾಯಾಲಯ ಪೀಠ ಕೊನೆಗೂ ಕಳೆದ ವಾರ ಇತ್ಯರ್ಥಗೊಳಿಸಿದೆ. ಇದು 1951ರಲ್ಲಿ ದಾಖಲಾಗಿದ್ದಂತಹ ಪ್ರಕರಣವಾಗಿದ್ದು, ಈ ನ್ಯಾಯಾಲಯದ ಹಾಲಿ ಮುಖ್ಯ ನ್ಯಾಯಾಧೀಶರಾದ ಪ್ರಕಾಶ್ ಶ್ರೀವಾಸ್ತವ ಅವರು ಈ ಪ್ರಕರಣ ದಾಖಲಾದ ಸುಮಾರು ಒಂದು ದಶಕದ ನಂತರ ಜನಿಸಿದ್ದಾರೆ.

    ಈ ಹಿಂದೆ ಬರ್ಹಂವಪೋರೆ ಬ್ಯಾಂಕ್ ಲಿ.ಎಂದು ಕರೆಯಲಾಗುತ್ತಿದ್ದ ಸಂಸ್ಥೆಗೆ ಸೇರಿದಂಥಹ ಈ ಪ್ರಕರಣ ಕೊನೆಗೂ ಇತ್ಯರ್ಥವಾಗಿರುವುದು ಕೋಲ್ಕತ್ತಾ ಉಚ್ಛ ನ್ಯಾಯಾಲಯಕ್ಕೆ ನಿಟ್ಟುಸಿರು ಬಿಟ್ಟಂತಾಗಿದೆ. ಆದರೆ ಇದಾದ ನಂತರ ಅಂದರೆ, ೧೯೫೨ರಲ್ಲಿ ದಾಖಲಾಗಿರುವಂತಹ ಇನ್ನೂ ಬಾಕಿ ಉಳಿದಿರುವ ಐದು ವರ್ಷಗಳ ಪೈಕಿ ೧೯೫೨ರಲ್ಲಿ ದಾಖಲಾಗಿರುವಂತಹ ಎರಡು ಪ್ರಕರಣಗಳ ಇನ್ನೂ ಇತ್ಯರ್ಥವಾಗಬೇಕಿದೆ.


    Provided by
    Provided by

    ಇನ್ನುಳಿದ ಮೂರು ಪ್ರಕರಣಗಳ ಪೈಕಿ, ಎರಡು ಸಿವಿಲ್ ವ್ಯಾಜ್ಯಗಳಾಗಿದ್ದು, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ವಿಚಾರಣೆ ನಡೆಯಲಿದೆ ಹಾಗೂ ಮತ್ತೊಂದು ಮದ್ರಾಸ್ ಉಚ್ಛ ನ್ಯಾಯಾಲಯದಲ್ಲಿ ಬಾಕಿ ಇದೆ. ಮಾಲ್ಡಾದ ನ್ಯಾಯಾಲಯಗಳು ಈ ವ್ಯಾಜ್ಯಗಳ ವಿಚಾರಣೆಯನ್ನು ಮಾರ್ಚ್ ಹಾಗೂ ನವೆಂಬರ್ ತಿಂಗಳುಗಳಲ್ಲಿ ಕ್ರಮವಾಗಿ ನಡೆಸಲಿವೆ.

    ಜನವರಿ 9ರವರೆಗೆ ಬರ್ಹಂ ಪೋರ್ ಪ್ರಕರಣ ನ್ಯಾಷನಲ್ ಜ್ಯೂಡಿಷಿಯಲ್ ಡಾಟಾ ಗ್ರಿಡ್‌ ನಲ್ಲಿ ಅತ್ಯಂತಹ ಹಳೆಯ ವ್ಯಾಜ್ಯವೆಂದು ನಮೂದಿತಗೊಂಡಿತ್ತು. ಕಳೆದ ವರ್ಷ ಸೆಪ್ಟೆಂಬರ್ ೧೯ರಂದು ನ್ಯಾಯಾಧೀಶ ರವಿ ಕೃಷನ್ ಕಪೂರ್ ಅವರು ಈ ವ್ಯಾಜ್ಯಕ್ಕೆ ಸಂಬಂಧಪಟ್ಟ ದಾಖಲೆಗಳಿಗೆ ಸಹಿ ಮಾಡಿ, ಸೀಲ್ ಮಾಡಿ ಒಂದು ಬೆರಳಚ್ಚು ತಿದ್ದುಪಡಿಯನ್ನು ಮಾಡಿದ ನಂತರ ಅದನ್ನು ವಿಲೇವಾರಿ ಮಾಡಿದ್ದರಂತೆ.

    ಈ ವ್ಯಾಜ್ಯದ ಹಿನ್ನೆಲೆ ನವೆಂಬರ್ 19,1948ರ ಅಂದಿನ ಕಲ್ಕತ್ತಾ ಉಚ್ಛ ನ್ಯಾಯಾಲಯ, ವ್ಯಾಜ್ಯಪೀಡಿತ ಬರ್ಹಂಮಪೋರೆ ಬ್ಯಾಂಕ್ ದಿವಾಳಿಯಾಗಿದ್ದು ಅದನ್ನು ಮುಚ್ಚುವಂತೆ ಆದೇಶಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಜನವರಿ 1,1951 ರಲ್ಲಿ ಕಟ್ಟಳೆ ಹೂಡಿ, ಅದನ್ನು ‘ಪ್ರಕರಣ ಸಂಖ್ಯೆ ೭೧/೧೯೫೧,’ ಎಂದು ನೋಂದಾಯಿಸಲಾಗಿತ್ತು.

    ಬರ್ಹನಂಪೋರ್ ಬ್ಯಾಂಕ್, ಬಾಕಿ ಉಳಿಸಿಕೊಂಡಿದ್ದಂತಹ ಸಾಲಗಾರರಿಂದ ಬಾಕಿ ಹಣ ವಸೂಲಿ ಮಾಡುವುದಕ್ಕೆ ಸಂಬಂಧಿಸಿದಂತೆ ಹಲವು ವ್ಯಾಜ್ಯಗಳಲ್ಲಿ ಸಿಲುಕಿಕೊಂಡಿತ್ತು. ಈ ಪೈಕಿ ಹಲವು ಸಾಲಗಾರರು ಬ್ಯಾಂಕ್‌ ನ ಕ್ಲೇಮುಗಳನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದ್ದರು.

    ದಾಖಲೆಗಳ ಪ್ರಕಾರ, ಬ್ಯಾಂಕ್‌ ನ ದಿವಾಳಿತನವನ್ನು ಪ್ರಶ್ನಿಸಿದ ವ್ಯಾಜ್ಯ ಉಚ್ಛ ನ್ಯಾಯಾಲಯದ ಮುಂದೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಬಾರಿ ಬಂದಿತ್ತು. ಆದರೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

    ನ್ಯಾಯಾಧೀಶ ಕಪೂರ್ ಅವರು ನ್ಯಾಯಾಲಯದ ಲಿಕ್ವಿಡೇಟರ್ ಅವರಿಂದ ವರದಿಯೊಂದನ್ನು ನೀಡುವಂತೆ ಆದೇಶಿಸಿದರು. ಸೆಪ್ಟೆಂಬರ್ 19ರಂದು ಸಹಾಯಕ ಲಿಕ್ವಿಡೇಟರ್ ಅವರು ಈ ಪ್ರಕರಣವನ್ನು ಆಗಸ್ಟ್ ೨೦೦೬ರಲ್ಲೇ ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಆದರೆ ಅದು ದಾಖಲೆಗಳಲ್ಲಿ ಅಪ್‌ ಡೇಟ್ ಆಗಿರಲಿಲ್ಲ. ಹಾಗಾಗಿ ಇದು ಇನ್ನೂ ಬಾಕಿ ಇದೆ ಎಂದು ಪರಿಗಣಿಸಲಾಗಿತ್ತು.

    ಬಂಗಾಳದ ಉಚ್ಛ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಎರಡು ಹಳೆಯ ಪ್ರಕರಣಗಳ ಪೈಕಿ ನ್ಯಾಯಾಧೀಶ ಕಪೂರ್ ಅವರು ಆಗಸ್ಟ್ 23, 2022ರಂದು ಒಂದು ಪ್ರಕರಣದ ವಿಚಾರಣೆ ನಡೆಸಿದ್ದರು. ಓರ್ವ ವಕೀಲರು ಹಾಗೂ ವಿಶೇಷ ಅಧಿಕಾರಿಗೆ ಈ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಪಾರ್ಟಿಗಳನ್ನು ಭೇಟಿ ಮಾಡಿ, ಇತ್ಯರ್ಥಪಡಿಸುವಂತೆ ಸೂಚಿಸಿದ್ದರಂತೆ. ಆದರೆ 1952ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಹಳ ಕಡಿಮೆ ದತ್ತಾಂಶ ಲಭ್ಯವಿದೆಯಂತೆ.

    ಸುದ್ದಿ ಮೂಲ: ಟೈಮ್ಸ್ ಆಫ್ ಇಂಡಿಯಾ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಚಿನ್ನದ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್ ​​ಗೆ ಜಾಮೀನು ಮಂಜೂರು, ಜೈಲಿನಿಂದ ಬಿಡುಗಡೆ

    April 22, 2026

    ಬೆಂಗಳೂರು: ಬಹುಚರ್ಚಿತ ಚಿನ್ನದ ಕಳ್ಳಸಾಗಣೆ (Gold Smuggling) ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಸ್ಯಾಂಡಲ್‌ ವುಡ್ ನಟಿ ರನ್ಯಾ ರಾವ್ ಅವರಿಗೆ…

    ಮಗಳ ಪ್ರಿಯಕರನ ಜತೆ ಸೇರಿ ಅಳಿಯನನ್ನೇ ಕೊಂದ ಅತ್ತೆ: ತುಮಕೂರಿನ ಕೊಡಿಗೇನಹಳ್ಳಿಯಲ್ಲಿ ಘೋರ ಕೃತ್ಯ

    April 22, 2026

    ‘ಅಣ್ಣ’ ಎಂದವನ ಜೊತೆಯೇ ಪತ್ನಿ ಎಸ್ಕೇಪ್: ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತಿಗೆ ಕೈಕೊಟ್ಟ ಮಹಿಳೆ!

    April 22, 2026

    ಕೊರಟಗೆರೆ: ಸಾರ್ವಜನಿಕ ಸೇವೆಗೆ ‘ಫ್ರೆಂಡ್ಸ್ ಗ್ರೂಪ್’ನಿಂದ ಉಚಿತ ನೂತನ ತುರ್ತು ವಾಹನ ಸಮರ್ಪಣೆ

    April 22, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.