ನವದೆಹಲಿ: ಅಗ್ನಿಪಥ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಾಗಿದ್ದು ದೈಹಿಕ ಕ್ಷಮತೆ ಪರೀಕ್ಷೆಗೂ ಮುನ್ನ ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಬೇಕಾಗುತ್ತದೆ ಎಂದು ಭಾರತೀಯ ಸೇನೆ ಘೋಷಿಸಿದೆ.
ಇದಕ್ಕೆ ಸಂಬಂಧಸಿದಂತೆ ಸೇನೆಯು ಶುಕ್ರವಾರ ಜಾಹೀರಾತು ಬಿಡುಗಡೆ ಮಾಡಿದ್ದು ಅಗ್ನಿವೀರರ ನೇಮಕಕ್ಕೆ ಸಂಬಂಧಿಸಿದ ಮೂರು ಹಂತಗಳ ಬಗ್ಗೆ ವಿವರಣೆ ನೀಡಿದೆ. ಅಗ್ನಿವೀರರಾಗಿ ನೇಮಕಗೊಳ್ಳಲು ಬಯಸುವ ಅಭ್ಯರ್ಥಿಗಳು ಮೊದಲು ಆನ್ಲೈನ್ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆ (ಅಇಇ) ಬರೆಯಬೇಕಾಗುತ್ತದೆ. ನಂತರ ದೈಹಿಕ ಕ್ಷಮತೆ ಪರೀಕ್ಷೆ ಹಾಗೂ ನೇಮಕಾತಿಗೂ ಮುನ್ನ ನಡೆಸುವ ವೈದ್ಯಕೀಯ ಪರೀಕ್ಷೆಗಳು ನಡೆಯಲಿವೆ.
ನೇಮಕಾತಿ ರ‍್ಯಾಲಿಗಳಿಗೆ ಬರುವ ಸಾವಿರಾರು ಅಭ್ಯರ್ಥಿಗಳು ನಿಭಾಯಿಸಲು ತಗಲುವ ಆಡಳಿತಾತ್ಮಕ ವೆಚ್ಚ, ಸಾಗಾಟದ ವ್ಯವಸ್ಥೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ. ಇದೀಗ ಮೊದಲು ಪ್ರವೇಶ ಪರೀಕ್ಷೆ ಮಾಡುವುದರಿಂದ ಅರ್ಹ ಅಭ್ಯರ್ಥಿಗಳು ಮಾತ್ರ ನೇಮಕಾತಿ ರ‍್ಯಾಲಿಗಳಿಗೆ ಬರುವಂತಾಗುತ್ತದೆ. ಇದು ನೇಮಕಾತಿ ಪ್ರಕ್ರಿಯೆಯನ್ನು ಸುಗಮಗೊಳಿಸಲಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಹೊಸ ನೇಮಕಾತಿ ನಿಯಮ ೨೦೨೩-೨೪ರಲ್ಲಿ ಸೇನೆ ಸೇರ ಬಯಸುವ ೪೦,೦೦೦ ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


