ದೊಡ್ಡೇರಿ: ಭಾರೀ ಮಳೆಯ ಹಿನ್ನೆಲೆಯಲ್ಲಿ ದೊಡ್ಡೇರಿ ಹೋಬಳಿ ಬಡವನಹಳ್ಳಿಯ ಸುವರ್ಣ ಮುಖಿನದಿ ತುಂಬಿ ಹರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ನದಿಯನ್ನು ನೋಡಲು ಸುತ್ತಮುತ್ತಲಿನ ಜನ ಆಗಮಿಸಿದ್ದಾರೆ.
ನದಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಎಲ್ಲ ಕೆರೆಗಳಿಗೂ ನೀರು ತುಂಬಿದ್ದು, ಸುಮಾರು 15 ವರ್ಷಗಳಿಂದ ಬತ್ತಿ ಹೋಗಿದ್ದ ಕೆರೆಗಳು ತುಂಬಿದ್ದು, ಇದರಿಂದಾಗಿ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಈರೆಕೆರೆ, ಲಕ್ಷ್ಮಿ ಪುರಕೆರೆ, ಗುಬಲಗುಟ್ಟೆಕೆರೆ, ರಂಗಾಪುರ ಕೆರೆ, ನಾಗೇನಹಳ್ಳಿಕೆರೆ ಮೊದಲಾದ ಕೆರೆಗಳು ಭರ್ತಿಯಾಗಿವೆ.
ಇನ್ನೂ ಬಗರ್ ಹುಕ್ಕು ಸದಸ್ಯರಾದ ಪ್ರಸನ್ನಕುಮಾರ್, ಜಯಕುಮಾರ್, ಮಂಜುನಾಥ, ಮಾರುತಿ, ಚೇತನ್, ಉಮೇಶ್, ಜಯರಾಮಯ್ಯ, ಡಿ.ಟಿ.ಮಾರಣ್ಣ ದೊಡ್ಡೇರಿ, ಮಹಾಲಿಂಗಯ್ಯ, ಶಿವಲಿಂಗಯ್ಯ, ನಾಗೇನಹಳ್ಳಿ ಅಶೋಕ್ ಮತ್ತಿತರರು ಭೇಟಿ ನೀಡಿ ಹರ್ಷ ವ್ಯಕ್ತಪಡಿಸಿದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700