ಬೀದರ್: ಜಿಲ್ಲಾ ಪೊಲೀಸರು 11 ಕಳ್ಳತನ ಪ್ರಕರಣಗಳಲ್ಲಿ, ಬಂಗಾರ, ಬೆಳ್ಳಿ, ನಗದು ಹಣ, ದ್ವಿಚಕ್ರ ವಾಹನ ಹಾಗೂ ಎಮ್ಮೆ ಕಳ್ಳತನ ಪ್ರಕರಣಗಳಲ್ಲಿ 5 ಜನ ಆರೋಪಿ ಬಂಧನ, 12 ಲಕ್ಷಕ್ಕೂ ಅಧಿಕ ಮೌಲ್ಯದ ಬೆಲೆ ಬಾಳುವ ಸ್ವತ್ತುಗಳ ವಶ ಪಡಿಸಿಕೊಂಡಿದ್ದಾರೆ.
ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಜಿಲ್ಲೆಯ ಹುಮನಾಬಾದ, ಭಾಲ್ಕಿ ಉಪ—ವಿಭಾಗದ ನುರಿತ ಅಧಿಕಾರಿ ಸಿಬ್ಬಂದಿಯವರ ಪ್ರತ್ಯೇಕವಾಗಿ ತಮ್ಮ ತಮ್ಮ ಉಪ-ವಿಭಾಗಳಲ್ಲಿ ತಂಡವನ್ನು ರಚಿಸಿದ್ದು, ತಂಡವು ದೇವಗಿರಿ ತಾಂಡಾದ ಮಂದಿರ ಕಳ್ಳತನ ಪ್ರಕರಣದಲ್ಲಿ 11 ಗ್ರಾಂ ಬೆಳ್ಳಿ ಮತ್ತು ಒಂದು ಗ್ರಾಂ ಚಿನ್ನಾಭರಣ, ನಗದು ಹಣ 79,970 ರೂಪಾಯಿ, ಮತ್ತು ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ತೆಲಂಗಾಣ ರಾಜ್ಯದಲ್ಲಿ ಕಳುವಾದ 9 ವಾಹನಗಳು ಮತ್ತು ಹುಮನಾಬಾದ ಠಾಣೆಯ ಒಂದು ದ್ವಿಚಕ್ರ ವಾಹನ ಹೀಗೆ 10 ದ್ವಿಚಕ್ರ ವಾಹನಗಳು, ಒಂದು ಅಪ್ಪಿ ಆಟೋ ವಶ ಪಡಿಸಿಕೊಂಡಿರುತ್ತಾರೆ.
ಕಾರ್ಯಾಚರಣೆಯಲ್ಲಿ ಡಿ.ಎಸ್.ಪಿ. ಯವರಾದ ಜೆ.ಎಸ್.ನ್ಯಾಮಗೌಡರ, ಶಿವಾನಂದ ಪಾವಡಶೆಟ್ಟಿ, ಪ್ರತ್ಯೇಕವಾಗಿ ಹುಮನಾಬಾದ, ಚಿಟಗುಪ್ಪಾ ಸಿ.ಪಿ.ಐ. ಗುರುಲಿಂಗಪ್ಪಾ ಪಾಟೀಲ್, ಶ್ರೀನಿವಾಸ ಅಲ್ಲಾಪೂರೆ, ಭಾಲ್ಕಿ ಗ್ರಾಮೀಣ ವೃತ್ತದ ಸಿ.ಪಿ.ಐ, ಗುರುಪಾದ ಬಿರಾದಾರ ನೇತೃತ್ವದಲ್ಲಿ ನಿಂಗಪ್ಪಾ ಮಣ್ಣೂರ, ಪಿ.ಎಸ್.ಐ, ಶಿವಕುಮಾರ, ಮಾಣೀಕಪ್ಪಾ ಪಿ.ಎಸ್.ಐ, ಸಿಬ್ಬಂದಿಯವರಾದ ಬಸವಂತರೆಡ್ಡಿ, ಶಿವಶರಣ, ಸೂರ್ಯಕಾಂತ, ನಾಗೇಶ, ಅಂಬರೀಶ್, ಲಕ್ಷ್ಮಿಕಾಂತ, ರೂಬೇನ್, ಮಾಣೀಕ, ಸಿದ್ದಾರೂಡ, ಶ್ರೀಶೈಲ್ ಗೀರಿ, ಧನರಾಜ ಮತ್ತು ಮಹೇಶ ಭಾಗವಹಿಸಿದ್ದರು.
ಮೇಹಕರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಮ್ಮೆಗಳ ಕಳ್ಳತನ ಪ್ರಕರಣವನ್ನು ತನಿಖೆ ನಡೆಸಿ ಸುಮಾರು 7 ಲಕ್ಷ ಮೌಲ್ಯ ಬೆಲೆ ಬಾಳುವ ಎಮ್ಮೆ ಮತ್ತು ಸಾಗಿಸಲು ಬಳಸಿದ ವಾಹನ ವಶ ಪಡಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಜರುಗಿದ ಮಂದಿರ ಕಳ್ಳತನ ಪ್ರಕರಣ, ಅಂತರರಾಜ್ಯ ದ್ವಿಚಕ್ರ ವಾಹನ ಕಳ್ಳರ ಬಂಧನ ಮತ್ತು ಎಮ್ಮೆಗಳನ್ನು ಪತ್ತೆ ಹಚ್ಚಿ ಒಟ್ಟು 12,44,970 ಮೌಲ್ಯದ ವಸ್ತುಗಳು ಹಾಗೂ 5 ಜನರು ಆರೋಪಿಗಳನ್ನು ಬಂಧಿಸಲಾಗಿದ್ದು, ಎರಡೂ ಉಪ–ವಿಭಾಗದ ಅಧಿಕಾರಿ ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


