ಬೀದರ್: ಹುಮನಾಬಾದ ಪಟ್ಟಣದ ಡಾಕ್ಟರ್ ಕಾಲೋನಿ ಹತ್ತಿರ ಐ.ಪಿ.ಎಲ್ ಪಂದ್ಯಾವಳಿ ಹಿನ್ನೆಲೆ ಬೆಟ್ಟಿಂಗ್ ನಲ್ಲಿ ನಿರತರಾದವರ ಮೇಲೆ ಹುಮನಾಬಾದ ಪೊಲೀಸರು ದಾಳಿ ನಡೆಸಿ 2,500 ನಗದು ಸಹಿತ 12 ಸಾವಿರಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಐ.ಪಿ.ಎಲ್ ಪಂದ್ಯಾವಳಿಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜಾಯೆಂಟ್ಸ್ ನಡುವೆ ನಡೆಯುತ್ತಿದ್ದ ಪಂದ್ಯಾಟ ನಡೆಯುತ್ತಿದ್ದ ವೇಳೆ ಹುಮನಾಬಾದ ಪಟ್ಟಣದ ಡಾಕ್ಟರ್ ಕಾಲೋನಿ ಹತ್ತಿರ ಹಣ ಬೆಟ್ಟಿಂಗ್ ಕಟ್ಟುತ್ತಿರುವ ಬಗ್ಗೆ ಬಂದ ನಿಖರ ಮಾಹಿತಿಯ ಮೇರೆಗೆ ಹುಮನಾಬಾದ ಪೊಲೀಸ್ ಠಾಣೆಯ ಪಿ.ಎಸ್.ಐ ಸುರೇಶ ಚವ್ಹಾಣ ಅವರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತು.
ದಾಳಿ ವೇಳೆ ಬೆಟ್ಟಿಂಗ್ ನಿರತರಿಂದ 2,500 ರೂ. ನಗದು, 10 ಸಾವಿರ ಮೌಲ್ಯದ 1 ಮೊಬೈಲ್ ಸೇರಿದಂತೆ ಒಟ್ಟು 12,500 ರೂಪಾಯಿ ಮೌಲ್ಯದ ಸೊತ್ತು ವಶಕ್ಕೆ ಪಡೆದುಕೊಂಡಿದ್ದಾರೆ.
ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ನಿರ್ದೇಶನದಂತೆ ಈ ಕಾರ್ಯಾಚರಣೆ ನಡೆಸಲಾಯಿತು. ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4