ಕೊರಟಗೆರೆ : ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದ ಸಾರ್ವಜನಿಕರ ಜೊತೆಗೆ ಉದ್ಧಟತನದಿಂದ ವರ್ತಿಸಿದ್ದ ಕೊರಟಗೆರೆಯ ಸಾರ್ವಜನಿಕ ಆಸ್ಪತ್ರೆ ಡಾ.ನವೀನ್ ಅವರನ್ನು ತುಮಕೂರಿಗೆ ಎತ್ತಂಗಡಿ ಮಾಡಲಾಗಿದೆ.
ಕಳೆದ ವಾರ ಗೃಹ ಸಚಿವರ ಆಪ್ತ ಮತ್ತು ದಲಿತ ಹೋರಾಟಗಾರ ಚಿಕ್ಕರಂಗಯ್ಯ ತನ್ನ ಸ್ನೇಹಿತನ ತಾಯಿಗೆ ಚಿಕಿತ್ಸೆ ಕೊಡಿಸಲು ಹೋದಾಗ, ಆಸ್ಪತ್ರೆಗೆ ತಡವಾಗಿ ಬಂದಿದ್ದಲ್ಲದೇ ರೌಡಿಯಂತೆ ವರ್ತಿಸಿದ್ದರು.
ಇದೆಲ್ಲ ಗಮನಿಸಿದ ಗೃಹ ಸಚಿವ ಡಾ ಜಿ ಪರಮೇಶ್ವರ್ ಇವರನ್ನು ತುಮಕೂರಿಗೆ ಎತ್ತಂಗಡಿ ಮಾಡಲು ಸೂಚನೆ ನೀಡಿದ್ದಾರೆ. ಅದರಂತೆ ತುಮಕೂರು ಡಿ ಎಚ್ ಒ ಮಂಜುನಾಥ್ ತುಮಕೂರಿಗೆ ವರ್ಗಾವಣೆ ಆದೇಶ ಮಾಡಿದ್ದಾರೆ.
ಆಸ್ಪತ್ರೆಗಳಲ್ಲಿ ರೋಗಿಗಳ ಜೊತೆಗೆ ಸೌಜನ್ಯ ಮರೆತು ರೌಡಿಸಂ ಮಾಡಿದ್ದ ಡಾ.ನವೀನ್ ಅವರ ವರ್ತನೆಯ ಬಗ್ಗೆ ನಮ್ಮತುಮಕೂರು ವಾಹಿನಿ ಸವಿವರವಾದ ವರದಿ ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ಇದೀಗ ನವೀನ್ ವಿರುದ್ಧ ಕ್ರಮಕೈಗೊಳ್ಳಲಾಗಿದೆ.
ಈ ಹಿಂದೆಯೂ ಆಸ್ಪತ್ರೆಗೆ ಸುದ್ದಿ ಮಾಡಲು ತೆರಳಿದ್ದ ಪತ್ರಕರ್ತರಿಗೆ ಧಮ್ಕಿ ಹಾಕಿ, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರ ವಿರುದ್ಧ ಸುಳ್ಳು ದೂರು ನೀಡಿದ್ದ ಡಾ.ನವೀನ್ ಸಸ್ಪೆಂಡ್ ಆಗಿದ್ದರು. ಇಷ್ಟಾದರೂ ಅವರು ಬದಲಾವಣೆಯಾಗದೇ ಮತ್ತೊಮ್ಮೆ ಸಾರ್ವಜನಿಕರ ಜೊತೆಗೆ ರೌಡಿಸಂ ತೋರಿ ಇದೀಗ ತುಮಕೂರಿಗೆ ಎತ್ತಂಗಡಿಯಾಗಿದ್ದಾರೆ.
ತುಮಕೂರಿನಲ್ಲಾದರೂ ಅವರು ಸಾರ್ವಜನಿಕರ ಜೊತೆಗೆ ಸೌಜನ್ಯಯುತವಾಗಿ ವರ್ತಿಸುತ್ತಾರಾ ಅಥವಾ ಅಲ್ಲೂ ಮತ್ತೆ ಇದೇ ಛಾಳಿ ಮುಂದುವರಿಸುತ್ತಾರಾ ಎಂದು ಕಾದುನೋಡಬೇಕಿದೆ. ಹಿರಿಯ ಅಧಿಕಾರಿಗಳು ಡಾ.ನವೀನ್ ಗೆ ಸಾರ್ವಜನಿಕರ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡಬೇಕಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA