ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ದೇಶಾದ್ಯಂತ ಭಾರೀ ಸದ್ದು ಮಾಡ್ತಿದೆ. ಈ ಪ್ರಕರಣದಲ್ಲಿ ಈಗ ನಟ ದರ್ಶನ್ ಸೇರಿದಂತೆ 17 ಮಂದಿ ಅರೆಸ್ಟ್ ಆಗಿ, ಜೈಲಿಗೆ ಹೋಗಿದ್ದಾರೆ. ಇದೀಗ ಮತ್ತೊಂದು ಸುದ್ದಿ ಸಂಚಲನವಾಗಿದೆ.ರೇಣುಕಾಸ್ವಾಮಿ ಫೇಕ್ ಅಕೌಂಟ್‌ಗಳ ಮೂಲಕ ಸಾಕಷ್ಟು ಜನರಿಗೆ ಇದೇ ರೀತಿ ಕೆಟ್ಟ ಮೆಸೇಜ್ ಕಳುಹಿಸುತ್ತಿದ್ದ ಎನ್ನುವ ಆರೋಪ ಕೇಳಿಬರುತ್ತಿದೆ.
ಇದೀಗ ‘ಬಿಗ್ ಬಾಸ್’ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ ಒಂದು ಗಂಭೀರ ಆರೋಪ ಮಾಡಿದ್ದಾರೆ. ಅದೇನೆಂದರೆ, ರೇಣುಕಾ ಸ್ವಾಮಿ ಕ್ರಿಯೆಟ್ ಮಾಡಿದ್ದ ಫೇಕ್ ಅಕೌಂಟ್ ಗಳಿಂದ ನನಗೂ ಅಶ್ಲೀಲ ಮೆಸೇಜ್ ಬಂದಿತ್ತು ಎಂದಿದ್ದಾರೆ.
ಈ ಕುರಿತು ಚಿತ್ರಾಲ್ ರಂಗಾಸ್ವಾಮಿ ಅವರು, “ಸದ್ಯ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಯಾರಿಗೂ ಸಪೋರ್ಟ್ ಮಾಡುವುದಕ್ಕೆ ಬಂದಿಲ್ಲ. ರೇಣುಕಾ ಸ್ವಾಮಿ ಫ್ಯಾಮಿಲಿಗೆ ದೇವರು ಆದಷ್ಟು ಶಕ್ತಿ ಕೊಡಲಿ. ಆದರೆ ಈ ರೇಣುಕಾ ಸ್ವಾಮಿ ಇನ್ನೂ ಒಂದಿಬ್ಬರಿಗೆ ಇದೇ ಮೆಸೇಜ್ ಕಳುಹಿಸಿದ್ದರು, ಅದಕ್ಕೆ ಸಂಬಂಧಿಸಿದಂತೆ ದೂರು ಕೂಡ ದಾಖಲಾಗಿತ್ತು. ಅವರು ಮೆಸೇಜ್ ಕಳುಹಿಸುತ್ತಿದ್ದ ಅಕೌಂಟ್ goutham_ks_1990 ಈ ಹೆಸರಿನಲ್ಲಿ ಇತ್ತು ಎಂಬುದನ್ನು ನಾನು ನ್ಯೂಸ್ ನಲ್ಲಿ ನೋಡಿದ್ದೆ” ಎಂದು ಹೇಳಿದ್ದಾರೆ.
“ನನಗೆ ಅಶ್ಲೀಲವಾದ ಮೆಸೇಜ್, ಫೋಟೋಗಳನ್ನು ಕಳುಹಿಸಿದರೆ, ನಾನು ಅಂಥ ಅಕೌಂಟ್ ಗಳನ್ನು ಬ್ಲಾಕ್ ಮಾಡುತ್ತೇನೆ. goutham_ks_1990 ಈ ಐಡಿ ಬಗ್ಗೆ ಗೊತ್ತಾದಾಗ ಈ ಐಡಿಯನ್ನು ಎಲ್ಲೋ ನೋಡಿದ್ದೇನೆ ಅಲ್ವಾ ಅಂತ ಅನ್ನಿಸಿತು. ನನ್ನ ಬ್ಲಾಕ್ ಲಿಸ್ಟ್ ಅನ್ನು ಚೆಕ್ ಮಾಡಿದಾಗ, ಈ ಅಕೌಂಟ್ ಅದರಲ್ಲಿದೆ. ಇದನ್ನು ನೋಡಿ ನನಗೂ ಭಯ ಆಯ್ತು. ನಿಮ್ಮ ಬ್ಲಾಕ್ ಲಿಸ್ಟ್ ನಲ್ಲಿ ಈ ಅಕೌಂಟ್ ಇದೆಯಾ ಎಂದು ನೀವು ಒಮ್ಮೆ ಚೆಕ್ ಮಾಡಿಕೊಳ್ಳಿ” ಎಂದು ಚಿತ್ರಾಲ್ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


