ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಅವರ ಜೊತೆ ಇದ್ದಿದ್ದು ತನಿಷಾ. ಒಳ್ಳೆ ಫ್ರೆಂಡ್ ಆಗಿ, ಗೈಡ್ ಆಗಿ ತನ್ನ ಸ್ನೇಹಿತನನ್ನು ಪ್ರೋತ್ಸಾಹ ಮಾಡಿದ್ದರ ಶ್ರೇಯಸ್ಸು ತನಿಷಾ ಅವರಿಗೆ ಸಲ್ಲುತ್ತೆ. ಇದೀಗ ಅವರ ಫ್ರೆಂಡ್ ಶಿಪ್ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ನಂತರವೂ ಮುಂದುವರಿದಿದೆ.
ಹೌದು, ತನಿಷಾ ಹಾಗೂ ಕಾರ್ತಿಕ್ ಮಹೇಶ್ ಸಿನಿಮಾ ಸಂಬಂಧ ಮತ್ತೆ ಜೊತೆಗೇ ಕೆಲಸ ಮಾಡುವ ವರದಿಯಾಗಿದೆ. ಕಾರ್ತಿಕ್ ಅವರು ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಅವರು ಮಾಡುವ ಸಿನಿಮಾ ಕುರಿತು ಅಷ್ಟಾಗಿ ಹೇಳಿಲ್ಲ. ಅವರು ಈಗ ಬೇರೆ ಕೆಲಸಗಳಲ್ಲಿ ಬಿಝಿ ಇರುವುದರಿಂದ ಬಿಡುವು ಮಾಡಿಕೊಂಡು ಕಥೆ ಕೇಳುವುದಾಗಿ ಹೇಳಿದ್ದಾರೆ. ಹಾಗೂ ನಟನೆ ಮಾಡಲಿದ್ದಾರೆ.
ಮಾಹಿತಿ ಪ್ರಕಾರ, ತನಿಷಾ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತದೆ ಹಾಗೂ ಅದರಲ್ಲಿ ಕಾರ್ತಿಕ್ ಅವರು ನಟಿಸಲಿದ್ದಾರೆ ಎಂಬ ಮಾಹಿತಿಯೊಂದು ವರದಿಯಾಗಿದೆ.