ಬೆಂಗಳೂರು: ಸಂಚಾರಿ ಪೊಲೀಸರು ಬೈಕ್ ಸ್ಟಂಟ್ ಮಾಡುವವರ ಮೇಲೆ ಕಣ್ಣಿಡಲು ಹೊಸ ಪ್ರಯೋಗ ಮಾಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿ 121 ದಿನದಲ್ಲಿ 191 ಬೈಕ್ ವ್ಹೀಲಿಂಗ್ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 27 ಅಪ್ರಾಪ್ತರು ಸೇರಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರು ಪೊಲೀಸರು ಶೀಘ್ರವೇ ಆನ್ ಲೈನ್ ಮೂಲಕವೇ ಕಾರ್ಯಾಚರಣೆ ಮಾಡಲಿದ್ದಾರೆ.
ಈ ಅಭಿಯಾನದ ಭಾಗವಾಗಿ ಜನರು ತಮ್ಮ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುವ, ಬೈಕ್ ಸ್ಟಂಟ್ ಮಾಡುವವರ ಕುರಿತು ದೂರು ನೀಡಬಹುದು. ಪೊಲೀಸರು ಇಂತಹ ಅಪಾಯಕಾರಿ ಸ್ಟಂಟ್ ಮಾಡುವವರನ್ನು ಪತ್ತೆ ಹಚ್ಚಿ ಕೇಸು ದಾಖಲು ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬೈಕ್ ವ್ಹೀಲಿಂಗ್, ಸ್ಟಂಟ್ ಮಾಡುವವರು ಅವುಗಳ ಚಿತ್ರ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಾರೆ. ಆದ್ದರಿಂದ ಸಂಚಾರಿ ಪೊಲೀಸರ ತಂಡ ವಿಶೇಷವಾಗಿ ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಡಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296