ಪಾವಗಡ: ಇತ್ತೀಚಿಗೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿತ್ತು, ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು, ಇದೀಗ ಕಳವಾಗಿರುವಂತಹ ಬೈಕ್ ಗಳನ್ನು ಮತ್ತು ಆರೋಪಿಯನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಾವಗಡ ಪೊಲೀಸ್ ಠಾಣೆಯ ಪಿಎಸ್ ಐ ವಿಜಯ್ ಕುಮಾರ್ ತೊಡಗಿದ್ದ ವೇಳೆ ದಿನಾಂಕ 25ರ ಬೆಳಗ್ಗೆ 7 ಗಂಟೆಯ ಸಂದರ್ಭದಲ್ಲಿ ಸಿಬ್ಬಂದಿಯ ಜೊತೆ ಕರ್ನಾಟಕ ಆಂಧ್ರ ಗಡಿ ಸಮೀಪದ ರಾಜವಂತಿ ಹೊರವಲಯದ ರಿಲ್ಯಾಕ್ಸ್ ಬಾರ್ ಸಮೀಪ ಕಳ್ಳತನವಾಗಿದ್ದ AP–02—CJ–5734 ಬಜಾಜ್ ಪಲ್ಸರ್ ಬೈಕ್ ಸಮೇತ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಪೆನುಗೊಂಡ ತಾಲೂಕಿನ ಮಾವತ್ತೂರು ಗ್ರಾಮಕ್ಕೆ ಸೇರಿದ ಹರೀಶ್ ಎನ್ನುವ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಆರೋಪಿ ಹರೀಶ್ ಅದೇ ತಾಲೂಕಿಗೆ ಸೇರಿದ ಮ್ಯಾಕಲಪಲ್ಲಿ ಗ್ರಾಮದ ಮನೋಹರ್ ಮತ್ತು ಜಾನಕಂಪಲ್ಲಿ ಗ್ರಾಮದ ಸಾಯಿ ಪವನ್ ಎಂಬುವವರು ಜೊತೆ ಸೇರಿ ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ವಿವಿಧಡೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ.
ಆರೋಪಿಗಳಿಂದ 6 ರಾಯಲ್ ಎನ್ಫೀಲ್ಡ್ ಬುಲೆಟ್, 7 ಬಜಾಜ್ ಪಲ್ಸರ್, 2 ಅಪಾಚಿ, 2 ಆರ್ ಎಕ್ಸ್ 100, 2 ಕೆಟಿಎಂ ಡ್ಯೂಕ್, 7 ಹೀರೋ ಸ್ಪ್ಲೆಂಡರ್, 3 ಫ್ಯಾಷನ್ ಪ್ರೊ., 2 ಹೋಂಡಾ ಶೈನ್ ಸೇರಿ ಒಟ್ಟು 31 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂರು ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ತನಿಖೆ ಮುಂದುವರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಎಎಸ್ಪಿ ಮರಿಯಪ್ಪ, ಅಬ್ದುಲ್ ಖಾದರ್, ಡಿವೈಎಸ್ಪಿ ರಾಮಚಂದ್ರಪ್ಪ, ಸಿಪಿಐ ಸುರೇಶ್, ಪಿಎಸ್ ಐ ವಿಜಯಕುಮಾರ್, ಗುರುನಾಥ್, ರಾಮಚಂದ್ರಪ್ಪ, ಎಎಸ್ಐ ತಿಮ್ಮರಾಜು, ರಾಮಕೃಷ್ಣ, ಪಿಸಿಗಳಾದ ನಾಗೇಶ್, ನವೀನ್, ದೀಪಕ್, ತಳವಾರುರಾಜು, ಜೀವನ್, ಪ್ರವೀಣ್ ಮಾಳಪ್ಪ ಎಪಿಸಿ ನಟೇಶ್ ವೈನ್ ಹೊಸಕೋಟೆ ಪೊಲೀಸ್ ಠಾಣೆಯ ಪಿಸಿಗಳಾದ ಶ್ರೀಕಾಂತ ನಾಯಕ್ ಸಂತೋಷ್ ಕುಮಾರ್ ಭಾಗಿಯಾಗಿ ಯಶಸ್ವಿಯಾಗಿಸಿದ್ದಾರೆ ಎಂದು ಕೆ.ವಿ.ಅಶೋಕ್ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296