ಬೆಂಗಳೂರು: ಬೆಂಗಳೂರಿನ ಬೆಟ್ಟಹಲಸೂರು ಗ್ರಾಮದಲ್ಲಿ ರಾತ್ರಿ ಮನೆಮುಂದೆ ನಿಲ್ಲಿಸಿದ್ದ ಬೈಕ್ ಗಳು ಕಳ್ಳರು ಕದ್ದುಕೊಂಡು ಹೋದ ಘಟನೆ ನಡೆದಿದೆ. ಕಳೆದೊಂದು ತಿಂಗಳಿನಿಂದ ಹತ್ತಾರು ಬೈಕ್ ಗಳನ್ನು ಕದ್ದೊಯುತ್ತಿದ್ದು, ಪೊಲೀಸರು ಮಾತ್ರ ಈ ಕುರಿತು ಕ್ಯಾರೆ ಎನ್ನುತ್ತಿಲ್ಲ.
ನಾಲೈದು ಕಳ್ಳರು ಗ್ರಾಮಕ್ಕೆ ಲಗ್ಗೆ ಹಾಕಿ ಬೈಕ್ ಗಳು ಕದಿಯುತ್ತಿರುವ ಶಂಕೆ ವ್ಯಕ್ತವಾಗಿದ್ದು, ಕಾರುಗಳಲ್ಲಿ ಬೈಕ್ ಗಳನ್ನು ತುಂಬಿಕೊಂಡು ಹೋಗುತ್ತಿದ್ದಾರೆ. ಈ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


