ಕೊಯಮತ್ತೂರು: ಉನ್ನತ ಸೇನಾ ಅಧಿಕಾರಿ ಬಿಪಿನ್ ರಾವತ್ ಸೇರಿದಂತೆ 4 ಹಿರಿಯ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಬುಧವಾರ ಪತನಗೊಂಡಿದ್ದು, ಹೆಲಿಕಾಫ್ಟರ್ ಬೆಂಕಿ ಹತ್ತಿಕೊಂಡು ಉರಿದು ಹೋಗಿದೆ.
ಇಲ್ಲಿನ ಕೂನೂರು ಜಿಲ್ಲೆಯ ನೀಲಗಿರಿ ಗುಡ್ಡಗಾಡು ಬಳಿ ಬುಧವಾರ ಹೆಲಿಕಾಫ್ಟರ್ ಪತನಗೊಂಡಿದ್ದು, ಸೂಲೂರ್ ಐಎಎಫ್ ನೆಲೆಯಿಂದ ವೆಲ್ಲಿಂಗ್ಟನ್ ನಲ್ಲಿರುವ ಡಿಫೆನ್ಸ್ ಸರ್ವಿಸಸ್ ಕಾಲೇಜಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಹೆಲಿಕಾಫ್ಟರ್ ಗೆ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದಿದೆ. ಸದ್ಯ ಯಾವುದೇ ಸಾವು ನೋವುಗಳ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700