ತಮಿಳುನಾಡಿನ ರಾಜಕೀಯ ರಂಗದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಬಿಜೆಪಿ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ತಮಿಳುನಾಡಿನಲ್ಲಿ ಬಿಜೆಪಿ ರಣಕಹಳೆಯೂದಿದೆ. ಈ ಪ್ರಕಾರವಾಗಿ ಕೊಯಮತ್ತೂರಿನಿಂದ ಕರ್ನಾಟಕದ ಸಿಂಗಂ ಎಂದೇ ಪ್ರಖ್ಯಾತಿಯಾಗಿದ್ದ ಕೆ. ಅಣ್ಣಾಮಲೈ ಕಣಕ್ಕೆ ಇಳಿಯಲಿದ್ದಾರೆ.
ಚೆನ್ನೈ ದಕ್ಷಿಣದಿಂದ ತಮಿಳಿಸೈ ಸೌಂದರರಾಜನ್ ಮತ್ತು ನೀಲಗಿರಿಯಿಂದ ಎಲ್. ಮುರುಗನ್ ಸ್ಪರ್ಧಿಸಲಿದ್ದಾರೆ. ಬಿಜೆಪಿಯ ಮೂರನೇ ಪಟ್ಟಿ ತಮಿಳುನಾಡಿನ ಕ್ಷೇತ್ರಗಳಿಗೆ ಮಾತ್ರ ಮೀಸಲಾಗಿದೆ ಹಾಗೂ 9 ಅಭ್ಯರ್ಥಿಗಳ ಹೆಸರನ್ನು ಮಾತ್ರ ಘೋಷಿಸಲಾಗಿದೆ.
ತೆಲಂಗಾಣ ರಾಜ್ಯಪಾಲ ಹುದ್ದೆಯಿಂದ ರಾಜೀನಾಮೆ ನೀಡಿದ್ದ ಅಮಿಲಿಸೈ ಸೌಂದರರಾಜನ್ ಚೆನ್ನೈ ದಕ್ಷಿಣದಿಂದ ಬಿಜೆಪಿ ಪರ ಕಣಕ್ಕೆ ಇಳಿದಿದ್ದಾರೆ. ವಿನೋಜ್ ಪಿ ಸೆಲ್ವನ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚೆನ್ನೈ ಸೆಂಟ್ರಲ್ ನಿಂದ ಸ್ಪರ್ಧಿಸಲಿದ್ದಾರೆ. ಕನ್ಯಾಕುಮಾರಿಯಿಂದ ಪೊನ್ನು ರಾಧಾಕೃಷ್ಣನ್ ಸ್ಪರ್ಧೆ ಮಾಡಲಿದ್ದಾರೆ. ವೆಲ್ಲೂರಿನಿಂದ ಎ ಸಿ ಷಣ್ಮುಗಂ, ಕೃಷ್ಣಗಿರಿಯಿಂದ ಸಿ ನರಸಿಂಹನ್, ಪೆರಂಬಲೂರಿನಿಂದ ಟಿ. ಆರ್ ಪಾರಿವೆಂದಾರ್, ತೂತುಕುಡಿಯಿಂದ ನೈನಾರ್ ನಾಗೇಂದ್ರನ್ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಅಂತಿಮಗೊಳಿಸಿದೆ.
ಚೆನ್ನೈ ದಕ್ಷಿಣ – ತಮಿಳಿಸೈ ಸೌಂದರರಾಜನ್
ಚೆನ್ನೈ ಸೆಂಟ್ರಲ್ – ವಿನೋಜ್ ಪಿ ಸೆಲ್ವಂ
ವೆಲ್ಲೂರು – ಎ.ಕೆ.ಷಣ್ಮುಗಂ
ಕೃಷ್ಣಗಿರಿ – ಕೆ ನರಸಿಂಹನ್
ನೀಲಗಿರಿ (ಎಸ್ಜಿ) – ಎಲ್ ಮುರುಗನ್
ಕೊಯಮತ್ತೂರು – ಕೆ ಅಣ್ಣಾಮಲೈ
ಪೆರಂಬಲೂರು – ಟಿ.ಆರ್. ಪಾರಿವೇಂದರ್
ತೂತುಕುಡಿ – ನೈನಾರ್ ನಾಗೇಂದ್ರನ್
ಕನ್ಯಾಕುಮಾರಿ- ರಾಧಾಕೃಷ್ಣನ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


