ವರದಿ: ಮಂಜುಸ್ವಾಮಿ ಎಂ.ಎನ್.ಕೊರಟಗೆರೆ
ಕೊರಟಗೆರೆ : 30 ವರ್ಷದ ಮಾದಿಗ ಸಮಾಜದ ಒಳಮೀಸಲಾತಿ ಕನಸನ್ನು ಬಿಜೆಪಿ ಸರಕಾರ ನನಸು ಮಾಡಲು ಹೊರಟಿದೆ.. ಆದರೇ ಕಾಂಗ್ರೇಸ್ ಪಕ್ಷ ಒಳಮೀಸಲಾತಿ ಆದೇಶವನ್ನು ಮತ್ತೇ ತೆಗೆಯುವ ಶಪಥ ಮಾಡಿದೆ.. ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿಯು ನಮ್ಮ ಮಾದಿಗ ಸಮಾಜವು ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಲಿದೆ ಎಂದು ಕೇಂದ್ರ ಸಚಿವ ಎಲ್.ಮುರುಗನ್ ತಿಳಿಸಿದರು.
ಕೊರಟಗೆರೆ ಪಟ್ಟಣದ ಪಂಚಾಜನ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಮಾದಿಗ ದಂಡೋರ ಸಂಘದಿಂದ ಮಂಗಳವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಗೆ ಮಾದಿಗ ಸಮಾಜಕ್ಕೆ ಬಿಜೆಪಿ ಪಕ್ಷವು 12ಸೀಟು ನೀಡಿದೆ.. ಆದರೇ ಕಾಂಗ್ರೆಸ್ ಪಕ್ಷ ಕೇವಲ 6ಸೀಟು ನೀಡಿ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡಿದೆ. ಮಾದಿಗ ಸಮಾಜವನ್ನು ಕಾಂಗ್ರೆಸ್ ಪಕ್ಷ ಕೇವಲ ಪ್ರಚಾರ ಮತ್ತು ಮತಕ್ಕಾಗಿ ಮಾತ್ರ 70 ವರ್ಷದಿಂದ ಬಳಕೆ ಮಾಡಿಕೊಂಡಿದೆ. 2023ರ ಚುನಾವಣೆಗೆ ಮೀಸಲು ಕ್ಷೇತ್ರಗಳಲ್ಲಿ ರಾಜ್ಯದ ಮಾದಿಗ ಸಮಾಜ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಲಿದೆ ಎಂದರು.
ರಾಷ್ಟ್ರೀಯ ಮಾದಿಗ ದಂಡೋರ ಅಧ್ಯಕ್ಷ ಮಂದಕೃಷ್ಣ ಮಾದಿಗ ಮಾತನಾಡಿ 30ವರ್ಷ ಮಾದಿಗ ಸಮಾಜ ಒಳಮೀಸಲಾತಿಗೆ ಹೋರಾಟ ನಡೆಸಿದೆ. ಬಿಜೆಪಿ ಸರಕಾರ ಒಳಮೀಸಲಾತಿ ಪುರಸ್ಕರಿಸಿ ಕೇಂದ್ರಕ್ಕೆ ಕಳುಹಿಸಿದೆ. ಆದರೇ ಕಾಂಗ್ರೆಸ್ ಸರಕಾರ ತೆಗೆಯುವ ಮಾತನಾಡಿದೆ. ನಮ್ಮ ಮಾದಿಗ ಸಮಾಜ ಬಿಜೆಪಿ ಪಕ್ಷದ ಪರವಾಗಿದೆ. ಕೇಂದ್ರ ಸರಕಾರ ಆಂದ್ರಪ್ರದೇಶ ಮತ್ತು ತೆಲಂಗಣ ರಾಜ್ಯದಲ್ಲಿಯು ಒಳಮೀಸಲಾತಿ ಜಾರಿಗೆ ತರಬೇಕಿದೆ. ಕೊರಟಗೆರೆ ಕ್ಷೇತ್ರದಲ್ಲಿ ಅನಿಲ್ ಕುಮಾರ್ ಪರವಾಗಿ ಮತಯಾಚನೆ ಮಾಡ್ತೀವಿ ಎಂದು ತಿಳಿಸಿದರು.
ಮಾದಿಗ ದಂಡೋರದ ರಾಜ್ಯಾಧ್ಯಕ್ಷ ಎಂ.ಶಂಕರಪ್ಪ ಮಾತನಾಡಿ ಒಳಮೀಸಲಾತಿ ತೆಗೆಯುವ ಕಾಂಗ್ರೆಸ್ ಪಕ್ಷದ ವಿರುದ್ದವಾಗಿ ರಾಜ್ಯದಲ್ಲಿ ಸಂಘಟನೆ ಮಾಡ್ತೀವಿ. ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಿದ ಬಿಜೆಪಿ ಪಕ್ಷಕ್ಕೆ ಬೆಂಬಲಿಸಲು ಮಾದಿಗ ದಂಡೋರ ತಿರ್ಮಾನ ಮಾಡಿದೆ. ಕರ್ನಾಟಕ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತೇವೆ. ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್‍ಕುಮಾರ್ ಗೆಲುವು ಖಚಿತ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಹೆಚ್.ಅನಿಲ್‍ಕುಮಾರ್, ಮುಖಂಡರಾದ ದಾಸಲುಕುಂಟೆ ರಘು, ದಾಡಿವೆಂಕಟೇಶ್, ದಲಿತ ಆನಂದ್, ನಾಗರಾಜು, ಯೋಗಿಶ್, ಹನುಮಂತರಾಜು, ರವಿವರ್ಮ, ಸಿದ್ದೇಶ್, ಬಾಲರಾಜು, ರವಿಚಂದನ್, ಲಕ್ಷ್ಮೀಪತಿ, ಶ್ರೀನಿವಾಸ್, ರಂಗರಾಜು, ಶಿವಲಿಂಗಯ್ಯ ಸೇರಿದಂತೆ ಇತರರು ಇದ್ದರು.
ಬಿಜೆಪಿ ಸರಕಾರ ಒಳಮೀಸಲಾತಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಿದೆ. ಆದರೇ ಕಾಂಗ್ರೆಸ್ ಪಕ್ಷವು ರಾಜಕೀಯ ಪ್ರೇರಿತವಾಗಿ ಒಳ ಮೀಸಲಾತಿಗೆ ವಿರೋದಿಸಿ ರದ್ದು ಮಾಡಲು ಹೋರಟಿದೆ. ಕೊರಟಗೆರೆ ಮೀಸಲು ಕ್ಷೇತ್ರದ ಜನತೆ ಯೋಚನೆ ಮಾಡಿ ಮತ ಚಲಾಯಿಸಬೇಕಿದೆ. ಕರ್ನಾಟಕ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಮಾದಿಗ ಸಮಾಜ ಆರ್ಶಿವಾದ ಮಾಡಬೇಕಿದೆ.
-ಬಿ.ಎಚ್.ಅನಿಲ್ ಕುಮಾರ್, ಬಿಜೆಪಿ ಅಭ್ಯರ್ಥಿ, ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy