ಬೆಂಗಳೂರು: ಬಿಜೆಪಿ ಕಾಂಗ್ರೆಸ್ ನಾಯಕರನ್ನೆಲ್ಲಾ ಹೆದರಿಸಿ ಬೆದರಿಸಿ ಚುನಾವಣೆ ಗೆಲ್ಲುವ ತಂತ್ರ ಹೂಡಿದೆ, ಅವರ ಪಕ್ಷದವರೆಲ್ಲ ಏನು ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ? ಎಂದು ಡಿಸಿಎಂ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಘೋಷ್ಟಿ ನಡೆಸಿ ಮಾತನಾಡಿದ ಅವರು, ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಸಿ ಅವರನ್ನು ಹೆದರಿಸಿ ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದೆ. ನಮಗೂ ಎನ್ ಡಿಎ ನಾಯಕರು ಏನೇನು ಮಾಡುತ್ತಿದ್ದಾರೆ ಗೊತ್ತಿದೆ, ಏನೇ ಇದ್ದರೂ ಜನರ ತೀರ್ಮಾನವೇ ಅಂತಿಮ ಎಂದು ಡಿಕೆಶಿ ಹೇಳಿದರು.
ಗೆದ್ದೇ ಗೆಲ್ತೀವಿ ಅನ್ನೊರಿಗೆ ಮಹಾರಾಷ್ಟ್ರದಲ್ಲಿ, ಕರ್ನಾಟಕದಲ್ಲಿ ಪಕ್ಷಗಳನ್ನು ಬೇರೆ ಬೇರೆ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಹುಡುಕಿ ಹುಡುಕಿ ಕರೆದುಕೊಳ್ಳುತ್ತಿರುವುದೇಕೆ? ಇದೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿಗೆ ಬಂದ ಪ್ರಧಾನಿ ಜನತಾದಳದ ಬಗ್ಗೆ ಏನು ಹೇಳಿದ್ರಿ ನೆನಪಿದೆಯಾ? ಆಗ ಸರಿಯಿಲ್ಲದವರು ಈಗ ಸರಿಯಾದರಾ? ಅದು ಹೋಗಲಿ ಬಿಜೆಪಿ ಆಡಳಿತಾವಧಿಯಲ್ಲಿ ನೀವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೀರಾ? ಬೆಲೆ ಏರಿಕೆ ನಿಯಂತ್ರಣಕ್ಕೆ ಏನು ಮಾಡಿದ್ದೀರಿ ದಾಖಲೆ ಇದೆಯಾ? ತೆರಿಗೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಯಾಕೆ? ಹೀಗೆ ತಾರತಮ್ಯ ನಡೆದರೆ ದೇಶ ಇಬ್ಭಾಗವಾಗುವ ಸ್ಥಿತಿ ಬರಬಹುದು ಎಂದು ಡಿ ಕೆ ಸುರೇಶ್ ಹೇಳಿದ್ದರು ಎಂದು ಡಿಕೆಶಿ ಸಮರ್ಥನೆ ನೀಡಿದ್ದಾರೆ.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಎಂದಿಗೂ ಈ ದೇಶ ಒಗ್ಗಟ್ಟಾಗಿರಲಿ ಎಂದು ಕೆಲಸ ಮಾಡುತ್ತಿದೆ. ಇದೇ ಕಾರಣಕ್ಕೆ ಬಿಜೆಪಿಯ ಅನೇಕ ನಾಯಕರು ಜೆಡಿಎಸ್ ಮುಖಂಡರು ಕಾಂಗ್ರೆಸ್‌ಗೆ ಬರ್ತಿದಾರೆ. ಬಿಜೆಪಿ ಎನ್‌ಡಿಎ ಮತ ಕೇಳುವ ಎಲ್ಲಾ ಅಹರ್ತೆಯನ್ನು ಕಳೆದುಕೊಂಡಿದೆ. ಎಂದು ಡಿಸಿಎಂ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


