ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ಪಾದಯಾತ್ರಿಗಳಿಂದ ಗೃಹಸಚಿವ ಜಿ. ಪರಮೇಶ್ವರ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ತಾಲೂಕಿನ ಗೊಲ್ಲಹಳ್ಳಿಯಲ್ಲಿ ಇರುವ ಗೃಹಸಚಿವರ ನಿವಾಸದ ಶಾಸಕ ಸುರೇಶ್ ಗೌಡ ನೇತೃತ್ವದಲ್ಲಿ ಪಾದಯಾತ್ರೆಗಳು ಮುತ್ತಿಗೆ ಹಾಕಲು ಯತ್ನಿಸಿದರು. ಸಚಿವ ಪರಮೇಶ್ವರ ಅವರ ಮನೆಯದುರು ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಗುಬ್ಬಿಯಿಂದ ತುಮಕೂರು ನಗರದ ಕಡೆಗೆ ಬರುತ್ತಿದ್ದು ಇದರಲ್ಲಿ ಸ್ವಾಮೀಜಿಗಳು ಹಾಗೂ ಬಿಜೆಪಿ ಮುಖಂಡರು ಹಾಗೂ ಜೆಡಿಎಸ್ ಮುಖಂಡರು ಸೇರಿದ್ದಾರೆ.
ಗೃಹಸಚಿವರ ಮನೆ ಎದುರು ಬರುತ್ತಿದ್ದವರು ಹಾಗೂ ಶಾಸಕ ಸುರೇಶ್ ಗೌಡ ಅವರನ್ನು ಸ್ಥಳದಲ್ಲಿಯೇ ಇದ್ದ ಪೊಲೀಸರು ಮುತ್ತಿಗೆ ನಡೆಸಲು ಇದಕ್ಕೆ ಅವಕಾಶ ನೀಡದೇ ತಡೆದರು.
ಪಾದಯಾತ್ರಿಗಳು ತುಮಕೂರು ನಗರದ ಕಡೆಗೆ ಕಾಂಗ್ರೆಸ್ ಸರ್ಕಾರದ ಧೋರಣೆ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದರು.
ತುಮಕೂರು ಜಿಲ್ಲೆಗೆ ಕುಡಿಯುವ ನೀರಿಗಾಗಿ ಹರಿಯುವಂತಹ ಹೇಮಾವತಿ ನದಿ ನೀರನ್ನು ಮಾಗಡಿಗೆ ತೆಗೆದುಕೊಂಡು ಹೋಗುವಂತಹ ಲಿಂಕ್ ಕೆನಾಲ್ ವಿರೋಧಿಸಿ ನೆನ್ನೆಯಿಂದ ಪಾದಯಾತ್ರೆ ಆರಂಭಿಸಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx